ಬೆಂಗಳೂರು:ಸ್ಥಿರ ಹೂಡಿಕೆಗೆ ಜನರ ಮೊದಲ ಆದ್ಯತೆಯಾಗಿರುವ ಆಸ್ತಿ ಅದು ಚಿನ್ನ. ಆದರೆ, ಈ ವರ್ಷ ಅಂದರೆ 2023ರ ಆರಂಭದಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತಗೊಂಡಿದೆ. ಜನವರಿಯಿಂದ ಮಾರ್ಚ್ವರೆಗೆ ಶೇ 17ರಷ್ಟು ಚಿನ್ನ ಕುಸಿತಗೊಂಡಿದ್ದು, ಬಂಗಾರದ ಬೆಲೆ ಹೆಚ್ಚಳ ಇದಕ್ಕೆ ಕಾರಣವಾಗಿದೆ.
2023ರಲ್ಲಿ ಚಿನ್ನದ ಬೇಡಿಕೆ ಕುಸಿದಿರುವ ಕುರಿತು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತಿಳಿಸಿದೆ. 2023ರ ಮೊದಲ ತ್ರೈಮಾಸಿಕ ವರದಿಯಲ್ಲಿ ಚಿನ್ನದ ಬೇಡಿಕೆ ಕುರಿತು ಇದು ವರದಿ ಮಾಡಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಮೌಲ್ಯ 56,220 ಕೋಟಿಯಾಗಿದ್ದು, ಹಿಂದಿನ ವರ್ಷದ ಅಂದರೆ 2022ರ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಶೇ 9ರಷ್ಟು ಕಡಿಮೆಯಾಗಿದೆ, 2022ರ ಜನವರಿಯಿಂದ ಮಾರ್ಚ್ವರೆಗೆ ಚಿನ್ನದ ಬೇಡಿಕೆ ಮೌಲ್ಯ 61,540 ಕೋಟಿ ಇತ್ತು.
ಭಾರತದಲ್ಲಿ ಆಭರಣ, ಗಟ್ಟಿ, ನಾಣ್ಯಗಳಲ್ಲಿ ಚಿನ್ನದ ಬೇಡಿಕೆ ಶೇ 17ರಷ್ಟು ಕಡಿಮೆಗೊಂಡಿದೆ. ಚಿನ್ನದ ಬೆಲೆ ಹೆಚ್ಚು ಗಗನಮುಖಿಯಾಗಿರುವುದು ಇದರ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಇದರ ಜೊತೆಗೆ ಬೆಲೆಗಳ ಚಂಚಲತೆಯೂ ಪರಿಣಾಮ ಬೀರಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ನ ಭಾರತದ ಪ್ರಾದೇಶಿಕ ಸಿಇಒ ಆಗಿರುವ ಪಿಆರ್ ಸೋಮಸುಂದರಂ ತಿಳಿಸಿದ್ದಾರೆ.
ಹೀಗಿದೆ ದಾಖಲೆ: 2020ರ ಲಾಕ್ ಡೌನ್ ಸಮಯದಲ್ಲಿ ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ 44 ಟನ್ಗಳಿಗೆ ಇಳಿದಿತ್ತು. ಇದರ ಹೊರತಾಗಿ 2016ರಿಂದ ಬಂಗಾರದ ಬೇಡಿಕೆ 112.5 ಟನ್ಗಳು ಕಡಿಮೆಯಾಗುತ್ತಿದೆ. 2016ರಲ್ಲಿ ಚಿನ್ನದ ಬೇಡಿಕೆ 107 ಟನ್ ಇತ್ತು. ದಾಖಲೆ ಏರಿಕೆ ಮತ್ತು ಚಂಚಲತೆ ಚಿನ್ನದ ಬೇಡಿಕೆ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಹೂಡಿಕೆಯಲ್ಲೂ ಚಿನ್ನದ ಬೇಡಿಕೆ 2022ರಲ್ಲಿ ಮೊದಲ ತ್ರೈಮಾಸಿಕದಲ್ಲಿ ಆಭರಣ ಚಿನ್ನ 94.2ಟನ್ ಇಳಿಕೆ ಕಂಡಿದ್ದು, ಬೇಡಿಕೆ 78 ಟನ್ಗಳಿಗೆ ಇಳಿದಿದೆ.