ಹೈದರಾಬಾದ್:ಕೆಲಸಗಾರರವಜಾ, ಉದ್ಯೋಗ ನಷ್ಟ ಎಂಬ ಮಾತುಗಳು ಇತ್ತೀಚಿನ ದಿನಗಳಲ್ಲಿ ಪದೇ ಪದೇ ಕೇಳುತ್ತಿದ್ದೇವೆ. ಆರ್ಥಿಕ ಹಿಂಜರಿತದ ಈ ದಿನಗಳಲ್ಲಿ ಜಗತ್ತನ್ನು ಕಾಡುವ ಸಾಧ್ಯತೆಗಳು ಹೆಚ್ಚಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾವು ಇದುವರೆಗೂ ನಡೆಸಿಕೊಂಡು ಬಂದಿದ್ದ ಜೀವನ ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ತಳ್ಳಲೂ ಬಹುದು. ಇಂತಹ ಪರಿಸ್ಥಿತಿಯಿಂದ ಹೊರ ಬರಲು ನಾವು ಈಗಲೇ ತಯಾರಿ ಮಾಡಿಕೊಳ್ಳಬೇಕು. ಭವಿಷ್ಯದ ಯೋಜನೆ ರೂಪಿಸಿಕೊಳ್ಳದೇ ಇದ್ದರೆ ಜೀವನ ದುರ್ಬರ ಆಗಬಹುದು. ಆಗ ನಾವು ಎದೆಗುಂದ ಬೇಕಿಲ್ಲ. ಅದಕ್ಕಾಗಿ ನಾವು ಸಿದ್ಧರಾಗಬೇಕು. ಸಂಕಷ್ಟದಿಂದ ಪಾರಾಗಲು ಯೋಜನೆ ರೂಪಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ತುರ್ತು ನಿಧಿ:ಕೆಲಸ ಸ್ಥಗಿತಗೊಳಿಸಿದರೂ ಎರಡು ಮೂರು ತಿಂಗಳ ಸಂಬಳ ನೀಡುವ ಕೆಲವು ಕಂಪನಿಗಳಿವೆ. ಇದು ನಾವು ಆರ್ಥಿಕ ಸಂಕಷ್ಟದಿಂದ ತಕ್ಷಣ ಪಾರಾಗಲು ಸಹಕಾರಿಯಾಗುತ್ತದೆ. ಇದರ ಜೊತೆಗೆ ನಮ್ಮಲ್ಲಿ ಕನಿಷ್ಠ ಆರು ತಿಂಗಳ ತುರ್ತು ನಿಧಿಯನ್ನು ಇಟ್ಟುಕೊಂಡಿರಬೇಕು. ಅನಿರೀಕ್ಷಿತ ವೆಚ್ಚಗಳನ್ನು ಪೂರೈಸಲು ನಿರ್ದಿಷ್ಟ ಮೊತ್ತವನ್ನು ಹಿಂಪಡೆಯಬಹುದು. ಆದರೆ ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಹಿಂಪಡೆಯ ಬಾರದು. ಈ ತುರ್ತು ನಿಧಿಯನ್ನು ಒಟ್ಟುಗೂಡಿಸಲು ಸಂಬಳದ ಕನಿಷ್ಠ ಶೇ 25ರಷ್ಟನ್ನು ಪ್ರತಿಶತದಷ್ಟು ಉಳಿತಾಯ ಮಾಡುವುದು ಒಳಿತು.
ಇದನ್ನು ಓದಿ:ಸ್ಥಿರ ಠೇವಣಿಗಳಿಂದ ನಿರ್ದಿಷ್ಟ ಪ್ರಮಾಣದ ಆದಾಯ ಪಡೆಯಿರಿ
ಅನಗತ್ಯ ಖರ್ಚು ಮಾಡುವುದನ್ನು ನಿಲ್ಲಿಸಿ: ನೀವು ಕೆಲಸ ಮಾಡುತ್ತಿರುವ ಕಂಪನಿ/ವಲಯದಲ್ಲಿ ಉದ್ಯೋಗ ಕಡಿತ ಪ್ರಾರಂಭವಾಗಿದ್ದರೆ, ನಿಮ್ಮ ಖರ್ಚುಗಳನ್ನು ಪರಿಶೀಲಿಸಿ. ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವುದನ್ನು ನಿಲ್ಲಿಸಿ. ಅನಗತ್ಯ ಖರ್ಚುಗಳನ್ನು ತಪ್ಪಿಸಿ. ಸಾಧ್ಯವಾದಷ್ಟು ಉಳಿಸಲು ಪ್ರಯತ್ನಿಸಿ. ನೀವು ಆದಾಯವನ್ನು ಕಳೆದುಕೊಂಡರೆ, ನೀವು ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲು ಸಾಧ್ಯವಾಗದಿರಬಹುದು. ಇದು ನಿಮ್ಮ ಕ್ರೆಡಿಟ್ ಇತಿಹಾಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ವಿಶೇಷವಾಗಿ ಪರ್ಸನಲ್ ಲೋನ್, ವೆಹಿಕಲ್ ಲೋನ್ ಟಾಪ್ ಅಪ್ ಇತ್ಯಾದಿಗಳನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಕೆಲಸ ಇಲ್ಲದಿದ್ದಾಗ ಇಎಂಐ ಪಾವತಿಸುವುದು ಕಷ್ಟವಾಗಬಹುದು.