ಕರ್ನಾಟಕ

karnataka

3 ವರ್ಷಗಳಲ್ಲಿ ಶೇ 178ರಷ್ಟು ಏರಿಕೆಯಾದ ಡಿಜಿಟಲ್ ಪೇಮೆಂಟ್ಸ್​

By

Published : Apr 6, 2023, 12:19 PM IST

ಭಾರತದ ಡಿಜಿಟಲ್ ಪೇಮೆಂಟ್​ ಪ್ರಮಾಣದಲ್ಲಿ ಕ್ಷಿಪ್ರ ಬೆಳವಣಿಗೆಯಾಗುತ್ತಿದೆ. ಕಳೆದ ಮುರು ವರ್ಷಗಳಲ್ಲಿ ಡಿಜಿಟಲ್ ಪೇಮೆಂಟ್​ ವಹಿವಾಟಿನ ಪ್ರಮಾಣದಲ್ಲಿ ಶೇ 178 ರಷ್ಟು ಹೆಚ್ಚಳವಾಗಿದೆ.

Digital transactions see 178% rise in volume in 3 years
Digital transactions see 178% rise in volume in 3 years

ನವದೆಹಲಿ : ಕಳೆದ ಮೂರು ವರ್ಷಗಳಲ್ಲಿ ದೇಶದ ಡಿಜಿಟಲ್ ಪಾವತಿ ವಹಿವಾಟಿನ ಪ್ರಮಾಣದಲ್ಲಿ 178 ಪ್ರತಿಶತದಷ್ಟು ಅತ್ಯಧಿಕ ಪ್ರಮಾಣದ ಹೆಚ್ಚಳವಾಗಿದೆ. ಹಣ - ಏಕೀಕೃತ ಪಾವತಿ ಇಂಟರ್ಫೇಸ್ (BHIM-UPI), ತಕ್ಷಣದ ಪಾವತಿ ಸೇವೆ (immediate payment service -IMPS) ಮತ್ತು ಪ್ರಿಪೇಯ್ಡ್ ಪಾವತಿ ಸಾಧನ (prepaid payment instruments -PPIs) ಮುಂತಾದ ಪ್ಲಾಟ್​ಫಾರ್ಮ್​ಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಸೇರಿದಂತೆ ಇನ್ನಿತರ ಪೂರಕ ಬೆಳವಣಿಗೆಗಳಿಂದ ಡಿಜಿಟಲ್ ಪಾವತಿ ವಹಿವಾಟು ಎಷ್ಟೋ ಪಟ್ಟು ಬೆಳವಣಿಗೆಯಾಗಿದೆ.

ಅಧಿಕೃತ ಅಂಕಿ - ಅಂಶಗಳ ಪ್ರಕಾರ 2019-20 ಮತ್ತು 2022-23 ರ ನಡುವೆ ಡಿಜಿಟಲ್ ವಹಿವಾಟಿನ ಪ್ರಮಾಣವು 4,572 ಕೋಟಿ ರೂಪಾಯಿಗಳಿಂದ 12,735 ಕೋಟಿ ರೂಪಾಯಿಗಳಿಗೆ ಏರಿದೆ. ಇದು ಕೇವಲ ಮೂರು ವರ್ಷಗಳಲ್ಲಿ ಶೇಕಡಾ 178 ರಷ್ಟು ಏರಿಕೆಯಾಗಿದೆ. ಅಲ್ಲದೆ, BHIM-UPI ಆದ್ಯತೆಯ ಪಾವತಿ ವಿಧಾನವಾಗಿ ಹೊರಹೊಮ್ಮಿದೆ ಮತ್ತು ಫೆಬ್ರವರಿ 2023 ರ ಒಂದೇ ವರ್ಷದಲ್ಲಿ 12.36 ಲಕ್ಷ ಕೋಟಿ ಮೌಲ್ಯದೊಂದಿಗೆ 753.48 ಕೋಟಿ ಡಿಜಿಟಲ್ ಪಾವತಿ ವಹಿವಾಟುಗಳ ದಾಖಲೆ ನಿರ್ಮಿಸಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳ ಹೊರತಾಗಿ ಡೆಬಿಟ್ ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ರಾಷ್ಟ್ರೀಯ ಎಲೆಕ್ಟ್ರಾನಿಕ್ ಫಂಡ್‌ಗಳ ವರ್ಗಾವಣೆ ಅಥವಾ NEFT ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ (RTGS) ನಂತಹ ಅಸ್ತಿತ್ವದಲ್ಲಿರುವ ಪಾವತಿ ವಿಧಾನಗಳು ಸಹ ವೇಗವಾಗಿ ಬೆಳೆದಿವೆ. ಡಿಜಿಟಲ್ ವಹಿವಾಟುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡವು (CERT-In) ಇತ್ತೀಚಿನ ಸೈಬರ್ ಬೆದರಿಕೆಗಳು ಅಥವಾ ದುರ್ಬಲತೆಗಳ ಬಗ್ಗೆ ನಿರಂತರವಾಗಿ ಕಂಪ್ಯೂಟರ್‌ಗಳು ಮತ್ತು ನೆಟ್‌ವರ್ಕ್‌ಗಳನ್ನು ರಕ್ಷಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಾದ ಎಚ್ಚರಿಕೆಗಳು ಮತ್ತು ಸಲಹೆಗಳನ್ನು ನೀಡುತ್ತದೆ.

ಇದು ಸೈಬರ್ ವಂಚನೆಗಳು ಮತ್ತು ಬೆದರಿಕೆಗಳ ಬಗ್ಗೆ ಜಾಗೃತಿ ಮೂಡಿಸಲು, ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಸುರಕ್ಷಿತಗೊಳಿಸಲು ಬಳಕೆದಾರರಿಗೆ ಮತ್ತು ಸಂಸ್ಥೆಗಳಿಗೆ ಸಲಹೆಗಳನ್ನು ನೀಡುತ್ತದೆ. ಅಲ್ಲದೆ CERT-In ಇತ್ತೀಚಿನ ಸೈಬರ್ ಬೆದರಿಕೆಗಳ ಬಗ್ಗೆ ಬ್ಯಾಂಕುಗಳು ಮತ್ತು ಹಣಕಾಸು ವಲಯದ ಸಂಸ್ಥೆಗಳಿಗೆ ಸೂಕ್ತವಾದ ಎಚ್ಚರಿಕೆಗಳನ್ನು ಕೂಡ ಒದಗಿಸುತ್ತದೆ ಮತ್ತು ಪ್ರತಿಕ್ರಮಗಳಿಗೆ ಸಲಹೆ ನೀಡುತ್ತದೆ.

ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ಎನ್ನುವುದು ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದ್ದು, ಬಳಕೆದಾರರಿಗೆ ಒಂದೇ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ನಲ್ಲಿ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡಲು ಮತ್ತು IFSC ಕೋಡ್ ಅಥವಾ ಖಾತೆ ಸಂಖ್ಯೆಯನ್ನು ಒದಗಿಸದೆಯೇ ಹಣ ವರ್ಗಾವಣೆ ಮಾಡಲು ಅವಕಾಶ ನೀಡುತ್ತದೆ. ಇದು ನೈಜ ಸಮಯದ (real-time) ಪಾವತಿ ವ್ಯವಸ್ಥೆಯಾಗಿದ್ದು, ನೈಜ ಸಮಯದ ಆಧಾರದ ಮೇಲೆ ಹಣವನ್ನು ತಕ್ಷಣವೇ ಕ್ರೆಡಿಟ್ ಮಾಡಲಾಗುತ್ತದೆ. UPI ನಿಧಾನವಾಗಿ ಡಿಜಿಟಲ್ ಪಾವತಿಯ ಅತ್ಯಂತ ಆದ್ಯತೆಯ ರೂಪವಾಗುತ್ತಿದೆ. UPI ಇಂಟರ್ಫೇಸ್ ಹೆಚ್ಚಿನ ಬ್ಯಾಂಕ್‌ಗಳು ಮತ್ತು ಅನೇಕ ಡಿಜಿಟಲ್ ವ್ಯಾಲೆಟ್‌ಗಳೊಂದಿಗೆ ಕಂಪ್ಯಾಟಿಬಲ್ ಆಗಿದೆ ಮತ್ತು ಪಾವತಿ ಅಪ್ಲಿಕೇಶನ್‌ಗಳು UPI ಅನ್ನು ಅಳವಡಿಸಿಕೊಳ್ಳುತ್ತಿವೆ.

ಇದನ್ನೂ ಓದಿ : ಸಾಮಾನ್ಯ UPI ಆಧರಿತ ಡಿಜಿಟಲ್ ಪೇಮೆಂಟ್​ಗಳಿಗೆ ಯಾವುದೇ ಶುಲ್ಕವಿರಲ್ಲ: NPCI ಸ್ಪಷ್ಟನೆ

ABOUT THE AUTHOR

...view details