ನವದೆಹಲಿ: ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (ಐಜಿಎಲ್) ದೆಹಲಿಯಲ್ಲಿ ಸಿಎನ್‌ಜಿ ಬೆಲೆಯನ್ನು ಪ್ರತಿ ಕೆಜಿಗೆ 2.5 ರೂ.ಗೆ ಹೆಚ್ಚಿಸಿದ್ದು, ಕೆಜಿಗೆ 64.11 ರೂ ಆಗಿದೆ. ಹೊಸ ಬೆಲೆ ಇಂದಿನಿಂದ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ಕ್ಯಾಬ್ ಚಾಲಕರು ವಾಹನಗಳಲ್ಲಿ ಏರ್ ಕಂಡಿಷನರ್ ಆನ್ ಮಾಡಲು ಹಿಂಜರಿಯುತ್ತಿದ್ದಾರೆ. ಸಿಎನ್‌ಜಿ ಬೆಲೆ ಹೆಚ್ಚಾಗಿದ್ದು ನಮ್ಮ ಜೇಬಿಗೆ ಕತ್ತರಿ ಬಿದ್ದಿದೆ ಎಂದು ಕ್ಯಾಬ್ ಚಾಲಕರೊಬ್ಬರು ತಿಳಿಸಿದರು.
ಸಿಎನ್‌ಜಿ ಬೆಲೆ ಏರಿಕೆ: ಕ್ಯಾಬ್‌ಗಳಲ್ಲಿ AC ಹಾಕಲು ಚಾಲಕರು ಹಿಂದೇಟು - CNG price hike
ಸಂಕೋಚನ ನೈಸರ್ಗಿಕ ಅನಿಲದ (ಸಿಎನ್‌ಜಿ) ಬೆಲೆ ಏರಿಕೆಯಾಗಿದ್ದು ದೆಹಲಿಯ ಕ್ಯಾಬ್ ಚಾಲಕರು ತಮ್ಮ ವಾಹನಗಳಲ್ಲಿ ಏರ್ ಕಂಡಿಷನರ್(AC) ಆನ್ ಮಾಡಲು ಹಿಂಜರಿಯುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಪ್ರತಿ ಲೀಟರ್ಗೆ 40 ಪೈಸೆ ಏರಿಕೆಯಾಗಿವೆ. ಕಳೆದ 14 ದಿನಗಳಲ್ಲಿ ನಡೆದ 12 ಪರಿಷ್ಕರಣೆಗಳಲ್ಲಿ ಪ್ರತಿ ಲೀಟರ್ಗೆ ಸುಮಾರು ₹ 8.40ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ:ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 40 ಪೈಸೆ ಹೆಚ್ಚಳ: 2 ವಾರದಲ್ಲಿ 12ನೇ ಬಾರಿ ಏರಿಕೆ