ನವದೆಹಲಿ: ಎಚ್ಡಿಎಫ್ಸಿ ಬ್ಯಾಂಕ್ ಇಂದಿನಿಂದ ಅಂದರೆ ಜುಲೈ 1ರಿಂದ ಎಚ್ಡಿಎಫ್ಸಿ ಲಿಮಿಡೆಟ್ನೊಂದಿಗೆ ವಿಲೀನವಾಗುತ್ತಿದೆ. ಇದು ಭಾರತದ ಕಾರ್ಪೋರೇಟ್ ಜಗತ್ತಿನ ಇತಿಹಾಸದ ದೊಡ್ಡ ಡೀಲ್ ಆಗಿದೆ. ಈ ಡೀಲ್ ವಿಚಾರದಲ್ಲಿ ಎಚ್ಡಿಎಫ್ಸಿ ಅಧ್ಯಕ್ಷರಾದ ದೀಪಕ್ ಪರೇಕ್ ಅತ್ಯಂತ ಪ್ರಮುಖ ಪಾತ್ರವಹಿಸಿದ್ದರು. ಆದರೆ, ಈ ಡೀಲ್ ಜಾರಿಗೆ ಬರುವ ಒಂದು ದಿನದ ಮುಂದೆ ಅಂದರೆ ಜೂನ್ 30ರಂದು ದೀಪಕ್ ಪರೇಖ್ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ತಮ್ಮ ಶೇರ್ ಹೋಲ್ಡರ್ಗೆ ಶುಕ್ರವಾರ ಪತ್ರ ಬರೆಯುವ ಮೂಲಕ ಅವರು ಈ ವಿಚಾರ ತಿಳಿಸಿದ್ದಾರೆ.
ಸಿಬ್ಬಂದಿಗಳಿಗೆ ಕಡೆಯ ಪತ್ರ ಬರೆದ ಪರೇಖ್: ತಮ್ಮ ಓಟಕ್ಕೆ ಬ್ರೇಕ್ ಹಾಕುವ ಸಮಯ ಬಂದಿದೆ ಎಂದು ಶೇರುದಾರರಿಗೆ ಅವರು ಪತ್ರದಲ್ಲಿ ತಿಳಿಸಿದ್ದಾರೆ. 78 ವರ್ಷದ ಪರೇಕ್ ಎಚ್ಡಿಎಫ್ಸಿ ಗ್ರೂಪ್ನೊಂದಿಗೆ ಕಳೆದ 46 ವರ್ಷಗಳಿಂದ ಜೊತೆಗೆ ಇದ್ದಾರೆ. ಅಂತಿಮ ವಿದಾಯದ ಪತ್ರವನ್ನು ಬರೆದಿರುವ ಅವರು, ಎಚ್ಡಿಎಫ್ಸಿ ಬ್ಯಾಂಕ್ ಇನ್ನಷ್ಟು ಬಲಶಾಲಿಯಾಗಲಿದೆ. ಇದೀಗ ಗೃಹ ಸಾಲವೂ ಸೇರಲಿದೆ. ಎಚ್‌ಡಿಎಫ್‌ಸಿಯ ಗೃಹ ಸಾಲವನ್ನು ಹೊಂದಿರುವ ದೇಶದಲ್ಲಿ ಲಕ್ಷಾಂತರ ಜನರನ್ನು ಬ್ಯಾಂಕ್ ಹೊಂದಿರುತ್ತದೆ. ವಿಲೀನದ ಬ್ಯಾಂಕ್ ಹೊಂದಿರುವ 12 ಕೋಟಿ ಗ್ರಾಹಕರಿಗೆ ಇದನ್ನು ದಯವಿಟ್ಟು ಹೇಳಿ ಎಂದಿದ್ದಾರೆ.
ಬ್ಯಾಂಕ್‌ನ ಭವಿಷ್ಯವೂ ಆಶಾದಾಯಕವಾಗಿದೆ. ಇದು ತಮ್ಮ ಕಡೆಯ ಸಂಪರ್ಕ ಎಂದು ಶೇರ್ ಹೋಲ್ಡರ್ಗೆ ತಿಳಿಸಿರುವ ಪರೇಖ್, ನಾವು ಭವಿಷ್ಯದ ಬೆಳವಣಿಗೆಯತ್ತ ಸಾಗುತ್ತಿದ್ದೇವೆ. ಎಚ್ಡಿಎಫ್ಸಿಯಲ್ಲಿ ಕೆಲಸ ಮಾಡಿದ ಅನುಭವ ಅಮೂಲ್ಯವಾದದ್ದು ಆಗಿದೆ. ನಮ್ಮ ಇತಿಹಾಸನವನ್ನು ಅಳಿಸಲಾಗುವುದಿಲ್ಲ. ನಮ್ಮ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಲಾಗುವುದು ಎಂದಿದ್ದಾರೆ.