ಕರ್ನಾಟಕ

karnataka

ETV Bharat / business

ಫಾರ್ಮ್ 10ಬಿ, 10 ಬಿಬಿ, ಐಟಿಆರ್ -7 ಸಲ್ಲಿಕೆ ಗಡುವು ಅ.31ರವರೆಗೆ ವಿಸ್ತರಣೆ

ಫಾರ್ಮ್​ 10 ಬಿ ಮತ್ತು ಫಾರ್ಮ್ 10 ಬಿಬಿ ಗಳನ್ನು ಸಲ್ಲಿಸುವ ಅವಧಿಯನ್ನು ಅಕ್ಟೋಬರ್​ 31ರವರೆಗೆ ವಿಸ್ತರಿಸಲಾಗಿದೆ.

CBDT extends deadline for filing of Form 10B/10BB and Form ITR-7
CBDT extends deadline for filing of Form 10B/10BB and Form ITR-7

By ETV Bharat Karnataka Team

Published : Sep 19, 2023, 4:31 PM IST

ನವದೆಹಲಿ: ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಸೋಮವಾರ (ಸೆಪ್ಟೆಂಬರ್ 18) 2022-23ರ ಹಣಕಾಸು ವರ್ಷಕ್ಕೆ ಫಾರ್ಮ್ 10 ಬಿ ಮತ್ತು ಫಾರ್ಮ್ 10 ಬಿಬಿ ಸಲ್ಲಿಸುವ ದಿನಾಂಕವನ್ನು ಅಕ್ಟೋಬರ್ 31, 2023 ರವರೆಗೆ ವಿಸ್ತರಿಸಿದೆ. ಈ ಫಾರ್ಮ್​ಗಳು ಮೂಲತಃ ಸೆಪ್ಟೆಂಬರ್ 30, 2023 ರಂದೇ ಬರಬೇಕಿದ್ದವು. ಫಾರ್ಮ್ 10 ಬಿ ದತ್ತಿ ಸಂಸ್ಥೆಗಳು ಮತ್ತು ಧಾರ್ಮಿಕ ಟ್ರಸ್ಟ್​ಗಳಿಗೆ ಅನ್ವಯಿಸುತ್ತದೆ. ಇನ್ನು ಫಾರ್ಮ್ 10 ಬಿಬಿ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.

"2022-23ರ ಹಣಕಾಸು ವರ್ಷಕ್ಕೆ ಫಾರ್ಮ್ 10 ಬಿ / ಫಾರ್ಮ್ 10 ಬಿಬಿಯಲ್ಲಿ ಲೆಕ್ಕಪರಿಶೋಧನಾ ವರದಿಗಳನ್ನು ಸಲ್ಲಿಸಲು ನಿಗದಿಪಡಿಸಲಾಗಿದ್ದ ಕೊನೆಯ ದಿನಾಂಕವನ್ನು 30.09.2023 ರಿಂದ ಈಗ 31.10.2023 ರವರೆಗೆ ವಿಸ್ತರಿಸಲಾಗಿದೆ" ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಯು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಇದಲ್ಲದೆ, ತೆರಿಗೆ ಇಲಾಖೆ 2023-24ರ ಮೌಲ್ಯಮಾಪನ ವರ್ಷಕ್ಕೆ (ಎವೈ) ಫಾರ್ಮ್ ಐಟಿಆರ್ -7 ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದೆ. ಐಟಿಆರ್ -7 ಸಲ್ಲಿಸಲು ಪರಿಷ್ಕೃತ ಗಡುವು ಈಗ ನವೆಂಬರ್ 30, 2023 ಆಗಿದೆ. 2023-24ರ ಮೌಲ್ಯಮಾಪನ ವರ್ಷಕ್ಕೆ ಫಾರ್ಮ್ ಐಟಿಆರ್ -7 ರಲ್ಲಿ ಆದಾಯದ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕವನ್ನು 30.11.2023 ರವರೆಗೆ ವಿಸ್ತರಿಸಲಾಗಿದೆ.

ಈ ವರ್ಷ ಐಟಿಆರ್ ಸಲ್ಲಿಸಲು ಆದಾಯ ತೆರಿಗೆ (ಐಟಿ) ಇಲಾಖೆಯು ಸಹಜ್ (ಐಟಿಆರ್ -1), ಫಾರ್ಮ್ ಐಟಿಆರ್ -2, ಫಾರ್ಮ್ ಐಟಿಆರ್ -3, ಫಾರ್ಮ್ ಸುಗಮ್ (ಐಟಿಆರ್ -4), ಫಾರ್ಮ್ ಐಟಿಆರ್ -5, ಫಾರ್ಮ್ ಐಟಿಆರ್ -6 ಮತ್ತು ಫಾರ್ಮ್ ಐಟಿಆರ್ -7 ಸೇರಿದಂತೆ 7 ಫಾರ್ಮ್ ಗಳನ್ನು ಅಧಿಸೂಚನೆ ಹೊರಡಿಸಿದೆ. ಆದಾಯ ತೆರಿಗೆ ಇಲಾಖೆಯ ಪ್ರಕಾರ, ಐಟಿಆರ್ -7 ಫಾರ್ಮ್ ಅನ್ನು "ಸೆಕ್ಷನ್ 139 (4 ಎ) ಅಥವಾ ಸೆಕ್ಷನ್ 139 (4 ಬಿ) ಅಥವಾ ಸೆಕ್ಷನ್ 139 (4 ಸಿ) ಅಥವಾ ಸೆಕ್ಷನ್ 139 (4 ಡಿ) ಅಡಿಯಲ್ಲಿ ರಿಟರ್ನ್ ಸಲ್ಲಿಸಬೇಕಾದ ಕಂಪನಿಗಳು ಸೇರಿದಂತೆ ವ್ಯಕ್ತಿಗಳು ಬಳಸಬಹುದು".

2022-2023ರ ಹಣಕಾಸು ವರ್ಷಕ್ಕೆ (2023-2024ರ ಮೌಲ್ಯಮಾಪನ ವರ್ಷ) ಐಟಿಆರ್ ಸಲ್ಲಿಸಲು ಜುಲೈ 31, 2023 ಕೊನೆಯ ದಿನಾಂಕವಾಗಿತ್ತು. ಒಟ್ಟು 6.77 ಕೋಟಿ ಐಟಿಆರ್ ಸಲ್ಲಿಸಲಾಗಿದ್ದು, ಅದರಲ್ಲಿ 4.65 ಕೋಟಿ ಜನರು ಶೂನ್ಯ ತೆರಿಗೆ ಪಾವತಿಸಿದ್ದಾರೆ ಎಂದು ವರದಿಯಾಗಿದೆ.

ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯು ಭಾರತದ ನೇರ ತೆರಿಗೆ ಶಾಸನವನ್ನು ಜಾರಿಗೊಳಿಸುವ ಉಸ್ತುವಾರಿ ಹೊಂದಿರುವ ಸರ್ಕಾರಿ ಸಂಸ್ಥೆಯಾಗಿದೆ. ಇದು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವ ಕಂದಾಯ ಇಲಾಖೆಯ ಭಾಗವಾಗಿದೆ. ಸಿಬಿಡಿಟಿಯನ್ನು 1963 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದು ಆರು ಸದಸ್ಯರನ್ನು ಹೊಂದಿದೆ. ಇದು ತೆರಿಗೆಗಳನ್ನು ಹೆಚ್ಚಿಸುವ ಭಾರತದ ಅತ್ಯುನ್ನತ ನೀತಿ ನಿರೂಪಣಾ ಸಂಸ್ಥೆಯಾಗಿದೆ. ಆದಾಯ ತೆರಿಗೆ, ಕಾರ್ಪೊರೇಟ್ ತೆರಿಗೆ, ಸಂಪತ್ತಿನ ತೆರಿಗೆ ಮತ್ತು ಬಂಡವಾಳ ಲಾಭ ತೆರಿಗೆ ಸೇರಿದಂತೆ ನೇರ ತೆರಿಗೆಗೆ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ರೂಪಿಸುವ ಜವಾಬ್ದಾರಿಯನ್ನು ಸಿಬಿಡಿಟಿ ಹೊಂದಿದೆ.

ಇದನ್ನೂ ಓದಿ : ವಿಶ್ವದ 100 ಅತ್ಯುತ್ತಮ​ ಕಂಪನಿಗಳ ಪಟ್ಟಿಯಲ್ಲಿ ಇನ್ಫೋಸಿಸ್​ಗೆ ಸ್ಥಾನ

ABOUT THE AUTHOR

...view details