ಕರ್ನಾಟಕ

karnataka

By

Published : Mar 24, 2023, 7:29 PM IST

ETV Bharat / business

ಎಲ್ಲಾ ಸ್ಪಾಟ್ ಟ್ರೇಡಿಂಗ್ ಸ್ಥಗಿತಗೊಳಿಸಿದ ಬಿನಾನ್ಸ್ ಕ್ರಿಪ್ಟೊ

ಪ್ಲಾಟ್​ಫಾರ್ಮ್​ನಲ್ಲಿನ ತಾಂತ್ರಿಕ ಸಮಸ್ಯೆಯ ಕಾರಣದಿಂದ ಬಿನಾನ್ಸ್​ ಕ್ರಿಪ್ಟೊ ಎಕ್ಸಚೇಂಜ್​ ತನ್ನ ಎಲ್ಲ ಸ್ಪಾಟ್ ಟ್ರೇಡಿಂಗ್​ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

Crypto exchange Binance temporarily suspends all spot trading
Crypto exchange Binance temporarily suspends all spot trading

ಸ್ಯಾನ್ ಫ್ರಾನ್ಸಿಸ್ಕೋ: ವಿಶ್ವದ ಪ್ರಮುಖ ಬ್ಲಾಕ್‌ಚೈನ್ ಮತ್ತು ಕ್ರಿಪ್ಟೋಕರೆನ್ಸಿ ಪ್ಲಾಟ್‌ಫಾರ್ಮ್ ಬಿನಾನ್ಸ್ ಶುಕ್ರವಾರ ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ಎಲ್ಲಾ ಸ್ಪಾಟ್ ಟ್ರೇಡಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ ಎಂದು ಘೋಷಿಸಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಸ್ಪಾಟ್​ ಟ್ರೇಡಿಂಗ್ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ. ಬಿನಾನ್ಸ್‌ನಲ್ಲಿ ಸ್ಪಾಟ್ ಟ್ರೇಡಿಂಗ್​ನಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ನಮಗೆ ತಿಳಿದಿದೆ. ಇದನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲು ನಾವು ಕೆಲಸ ಮಾಡುತ್ತಿರುವುದರಿಂದ ಎಲ್ಲಾ ಸ್ಪಾಟ್ ಟ್ರೇಡಿಂಗ್ ಅನ್ನು ಪ್ರಸ್ತುತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ವಿಚಾರದ ಬಗ್ಗೆ ಹೊಸ ಅಪ್ಡೇಟ್​ ಅನ್ನು ಇಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಕಂಪನಿ ಟ್ವೀಟ್ ಮಾಡಿದೆ.

ಈ ಬಗ್ಗೆ ಬಿನಾನ್ಸ್​ ಸಿಇಓ ಚಾಂಗ್ ಪೆಂಗ್ ಝಾವೊ ಟ್ವೀಟ್ ಮಾಡಿದ್ದು, ಬಿನಾನ್ಸ್​ ಕ್ರಿಪ್ಟೋ ಎಕ್ಸಚೆಂಜ್​ನಲ್ಲಿನ ಟ್ರೇಲಿಂಗ್ ಸ್ಟಾಪ್ ಆರ್ಡರ್‌ನಲ್ಲಿ ದೋಷ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ಆರಂಭಿಕ ಪರಿಶೀಲನೆಯ ಪ್ರಕಾರ ಮ್ಯಾಚಿಂಗ್ ಎಂಜಿನ್​ನಲ್ಲಿನ ಟ್ರೇಲಿಂಗ್ ಸ್ಟಾಪ್ ಆರ್ಡರ್‌ನಲ್ಲಿ ವಿಲಕ್ಷಣ ದೋಷ ಕಾಣಿಸಿಕೊಂಡಿದೆ ಎಂದು ಝಾವೊ ಟ್ವೀಟ್ ಮಾಡಿದ್ದಾರೆ. ಸದ್ಯ ಸಮಸ್ಯೆ ಪರಿಹಾರವಾಗುತ್ತಿದೆ. ಇದಕ್ಕೆ ಅಂದಾಜು 30-120 ನಿಮಿಷ ಬೇಕಾಗಬಹುದು. ಹೆಚ್ಚು ನಿಖರವಾದ ETA ಗಾಗಿ ಕಾಯಲಾಗುತ್ತಿದೆ. ಠೇವಣಿಗಳು ಮತ್ತು ಹಿಂಪಡೆಯುವಿಕೆಗಳನ್ನು SOP (ಪ್ರಮಾಣಿತ ಕಾರ್ಯಾಚರಣಾ ವಿಧಾನ) ನಂತೆ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಜಗತ್ತಿನ ಕ್ರಿಪ್ಟೊ ಸ್ಪಾಟ್​ ವ್ಯವಹಾರದ ಪೈಕಿ ಬಿನಾನ್ಸ್​ ಶೇ 60 ರಷ್ಟು ಪಾಲು ಹೊಂದಿದೆ.

ಕ್ರಿಪ್ಟೋಕರೆನ್ಸಿ ಎಂದರೇನು? : ಕ್ರಿಪ್ಟೋಕರೆನ್ಸಿ ಎಂಬುದು ಒಂದು ಡಿಜಿಟಲ್ ಕರೆನ್ಸಿಯಾಗಿದೆ. ಇದು ಎನ್‌ಕ್ರಿಪ್ಷನ್ ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ರಚಿಸಲಾದ ಪಾವತಿಯ ಪರ್ಯಾಯ ರೂಪವಾಗಿದೆ. ಎನ್‌ಕ್ರಿಪ್ಷನ್ ತಂತ್ರಜ್ಞಾನಗಳ ಬಳಕೆ ಎಂದರೆ ಕ್ರಿಪ್ಟೋಕರೆನ್ಸಿಗಳು ಕರೆನ್ಸಿಯಾಗಿ ಮತ್ತು ವರ್ಚುವಲ್ ಅಕೌಂಟಿಂಗ್ ಸಿಸ್ಟಮ್‌ನಂತೆ ಕಾರ್ಯನಿರ್ವಹಿಸುತ್ತವೆ. ಕ್ರಿಪ್ಟೋಕರೆನ್ಸಿಗಳನ್ನು ಬಳಸಲು ಕ್ರಿಪ್ಟೋಕರೆನ್ಸಿ ವ್ಯಾಲೆಟ್ ಬೇಕಾಗುತ್ತದೆ. ಈ ವ್ಯಾಲೆಟ್‌ಗಳು ಕ್ಲೌಡ್ ಆಧಾರಿತ ಸೇವೆ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಅಥವಾ ನಿಮ್ಮ ಮೊಬೈಲ್ ಸಾಧನದಲ್ಲಿ ಸಂಗ್ರಹವಾಗಿರುವ ಸಾಫ್ಟ್‌ವೇರ್ ಆಗಿರಬಹುದು. ವ್ಯಾಲೆಟ್‌ಗಳು ನಿಮ್ಮ ಗುರುತನ್ನು ದೃಢೀಕರಿಸುವ ಮತ್ತು ನಿಮ್ಮ ಕ್ರಿಪ್ಟೋಕರೆನ್ಸಿಗೆ ಲಿಂಕ್ ಮಾಡುವ ನಿಮ್ಮ ಎನ್‌ಕ್ರಿಪ್ಷನ್ ಕೀಗಳನ್ನು ನೀವು ಸಂಗ್ರಹಿಸುವ ಸಾಧನವಾಗಿವೆ.

ಕ್ರಿಪ್ಟೋಕರೆನ್ಸಿಗಳು ಇನ್ನೂ ಮಾರುಕಟ್ಟೆಗೆ ಹೊಸದಾಗಿದ್ದು, ಈ ಡಿಜಿಟಲ್ ಕರೆನ್ಸಿಗಳ ಮಾರುಕಟ್ಟೆಯು ತುಂಬಾ ಚಂಚಲವಾಗಿದೆ. ಕ್ರಿಪ್ಟೋಕರೆನ್ಸಿಗಳಿಗೆ ಯಾವುದೇ ಬ್ಯಾಂಕ್​ ಇಲ್ಲ. ಅವುಗಳನ್ನು ನಿಯಂತ್ರಿಸಲು ಯಾವುದೇ ಥರ್ಡ್ ಪಾರ್ಟಿ ಅಗತ್ಯವಿಲ್ಲದ ಕಾರಣ ಇವುಗಳನ್ನು ಅಸುರಕ್ಷಿತ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಮೂರ್ತ ಕರೆನ್ಸಿಯ ರೂಪಕ್ಕೆ (ಯುಎಸ್ ಡಾಲರ್ ಅಥವಾ ಯುರೋಗಳಂತಹ) ಪರಿವರ್ತಿಸಲು ಕಷ್ಟವಾಗುತ್ತದೆ. ಜೊತೆಗೆ, ಕ್ರಿಪ್ಟೋಕರೆನ್ಸಿಗಳು ತಂತ್ರಜ್ಞಾನ ಆಧಾರಿತ ಅಮೂರ್ತ ಸ್ವತ್ತುಗಳಾಗಿರುವುದರಿಂದ, ಯಾವುದೇ ಇತರ ಅಮೂರ್ತ ತಂತ್ರಜ್ಞಾನದ ಆಸ್ತಿಯಂತೆ ಅವುಗಳನ್ನು ಹ್ಯಾಕ್ ಮಾಡಬಹುದು. ನೀವು ನಿಮ್ಮ ಕ್ರಿಪ್ಟೋಕರೆನ್ಸಿಗಳನ್ನು ಡಿಜಿಟಲ್ ವ್ಯಾಲೆಟ್‌ನಲ್ಲಿ ಸಂಗ್ರಹಿಸುವುದರಿಂದ, ನಿಮ್ಮ ವ್ಯಾಲೆಟ್ ಅನ್ನು ನೀವು ಕಳೆದುಕೊಂಡರೆ (ಅಥವಾ ಅದಕ್ಕೆ ಪ್ರವೇಶ ಪಡೆಯುವ ಯೂಸರ್ ಐಡಿ ಪಾಸ್​ವರ್ಡ್ ಕಳೆದುಕೊಂಡರೆ) ಸಂಪೂರ್ಣ ಕ್ರಿಪ್ಟೋಕರೆನ್ಸಿ ಹೂಡಿಕೆಯನ್ನು ನೀವು ಕಳೆದುಕೊಳ್ಳಬೇಕಾಗುತ್ತದೆ.

ಇದನ್ನೂ ಓದಿ : ಗೇಮಿಂಗ್​ ಆ್ಯಪ್ ವಂಚಕ ಅಮೀರ್​ ಖಾನ್ ಕ್ರಿಪ್ಟೊ ವ್ಯಾಲೆಟ್​​ನಲ್ಲಿ 14 ಕೋಟಿ ರೂ. ಪತ್ತೆ

ABOUT THE AUTHOR

...view details