ಕರ್ನಾಟಕ

karnataka

ETV Bharat / business

Explained: ಸೌದಿ ಅರೇಬಿಯಾ, ರಷ್ಯಾದಿಂದ ಕಚ್ಚಾ ತೈಲ ಉತ್ಪಾದನೆ ಕಡಿತ... ಭಾರತದ ಮೇಲೆ ಆಗುವ ಪರಿಣಾಮಗಳೇನು? - ಅರೇಬಿಯಾ ಮತ್ತು ರಷ್ಯಾ ಇತ್ತೀಚೆಗೆ ಈ ವರ್ಷದ ಅಂತ್ಯ

Oil production cuts by Saudi Arabia, Russia; how will it affect India: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಈಗ ಇಳಿಯುವಂತೆ ಕಾಣುತ್ತಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲ 73-75 ಡಾಲರ್ ನಡುವೆ ಲಭ್ಯವಿತ್ತು. ಆದರೆ ಈಗ ಅದು ದುಬಾರಿಯಾಗಿದ್ದು, ಬ್ಯಾರಲ್ ಕಚ್ಚಾ ತೈಲ 90 ಡಾಲರ್‌ಗೆ ತಲುಪಿದೆ.

Crude Oil prices jump  Crude Oil prices jump after scoring 10 month high  scoring 10 month high on supply cuts  Petrol diesel rate hike  90 ಡಾಲರ್ ಸಮೀಪ ವಹಿವಾಟು ನಡೆಸುತ್ತಿರುವ ಕಚ್ಚಾ ತೈಲ  ಸದ್ಯದರಲ್ಲೇ ಪೆಟ್ರೋಲ್​ ಡೀಸೆಲ್ ಇಳಿಕೆ ಸಾಧ್ಯತೆ ಇಲ್ವಾ  ಬ್ಯಾರೆಲ್ ಕಚ್ಚಾ ತೈಲ 90 ಡಾಲರ್‌  ಡೀಸೆಲ್ ಬೆಲೆ ಈಗ ಇಳಿಯುವಂತೆ ಕಾಣುತ್ತಿಲ್ಲ  ಡೀಸೆಲ್ ಬೆಲೆ ಈಗ ಕಡಿಮೆಯಾಗುವ ಲಕ್ಷಣ  ಅರೇಬಿಯಾ ಮತ್ತು ರಷ್ಯಾ ಇತ್ತೀಚೆಗೆ ಈ ವರ್ಷದ ಅಂತ್ಯ  ಉತ್ಪಾದನೆ ಮತ್ತು ರಫ್ತು ಕಡಿತ
ಸದ್ಯದರಲ್ಲೇ ಪೆಟ್ರೋಲ್​ ಡೀಸೆಲ್ ಇಳಿಕೆ ಸಾಧ್ಯತೆ ಇಲ್ವಾ!?

By ETV Bharat Karnataka Team

Published : Sep 7, 2023, 11:29 AM IST

Updated : Sep 7, 2023, 3:58 PM IST

ನವದೆಹಲಿ:ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಈಗ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ಒಂದು ಬ್ಯಾರಲ್ ಕಚ್ಚಾ ತೈಲ 73-75 ಡಾಲರ್ ನಡುವೆ ಲಭ್ಯವಿತ್ತು. ಆದರೆ ಈಗ ಅದು 90 ಡಾಲರ್‌ಗೆ ತಲುಪಿದೆ. ಇದರಿಂದಾಗಿ ತೈಲ ಮಾರುಕಟ್ಟೆ ಕಂಪನಿಗಳಿಂದ ಇಂಧನ ಬೆಲೆ ತಗ್ಗಿಸುವ ಸಾಧ್ಯತೆ ಕಡಿಮೆಯಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ಇತ್ತೀಚೆಗೆ ಈ ವರ್ಷದ ಅಂತ್ಯದವರೆಗೆ ಉತ್ಪಾದನೆ ಮತ್ತು ರಫ್ತು ಕಡಿತವನ್ನು ಮುಂದುವರೆಸುವುದಾಗಿ ಘೋಷಿಸಿದ್ದು, ಕಚ್ಚಾ ತೈಲ ಬೆಲೆಗಳು ಗಗನಕ್ಕೇರುವ ಸಾಧ್ಯತೆ ಹೆಚ್ಚಾಗಿದೆ.

ವಾರದಲ್ಲಿ 6.5 ಶೇಕಡ ಏರಿಕೆ:ಬ್ರೆಂಟ್ ಕಚ್ಚಾ ತೈಲ ಬೆಲೆಗಳು ವಾರದಲ್ಲಿ ಸುಮಾರು 6.5 ಪ್ರತಿಶತದಷ್ಟು ಏರಿಕೆ ಕಂಡಿದೆ. ಸೌದಿ ಅರೇಬಿಯಾ ನೇತೃತ್ವದ ಒಪೆಕ್ ಮತ್ತು ರಷ್ಯಾ ಸೇರಿದಂತೆ ಮಿತ್ರ ರಾಷ್ಟ್ರಗಳು ದಿನಕ್ಕೆ 1 ಮಿಲಿಯನ್ ಬ್ಯಾರಲ್‌ಗಳ ತೈಲ ಉತ್ಪಾದನೆ ಕಡಿತವನ್ನು ಘೋಷಿಸಿದೆ. ಇದು ಮಾತ್ರವಲ್ಲದೆ ಈ ವರ್ಷದ ಡಿಸೆಂಬರ್‌ವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರೈಕೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಇತ್ತೀಚಿನ ತಿಂಗಳುಗಳಲ್ಲಿ ರಷ್ಯಾ ಸ್ವಯಂಪ್ರೇರಿತ ರಫ್ತು ಕಡಿತವನ್ನು ವಿಧಿಸಿದೆ. ಒಪೆಕ್ ಪ್ಲಸ್‌ನ ಇತ್ತೀಚಿನ ನಿರ್ಧಾರದಿಂದ, ಕಚ್ಚಾ ತೈಲದ ಬೆಲೆ ಮಂಗಳವಾರ ಮೊದಲ ಬಾರಿಗೆ 90 ಡಾಲರ್‌ಗಿಂತ ಹೆಚ್ಚಿದೆ. ಇದು 10 ತಿಂಗಳ ಗರಿಷ್ಠ ಮಟ್ಟವಾಗಿದೆ. (ಬುಧವಾರದಂದು 89.67 ಡಾಲರ್‌ನಲ್ಲಿ ವಹಿವಾಟು ನಡೆಸಿತ್ತು.) ಈ ತಿಂಗಳು ಭಾರತದಿಂದ ಆಮದು ಮಾಡಿಕೊಳ್ಳಲಾದ ಕಚ್ಚಾ ತೈಲದ ಸರಾಸರಿ ಬೆಲೆ 89.81 ಡಾಲರ್‌ಗೆ ತಲುಪಿದೆ. ತೈಲ ಸಚಿವಾಲಯದ ಅಂಕಿಅಂಶಗಳು ಆಗಸ್ಟ್​ನಲ್ಲಿ 86.43 ಡಾಲರ್ ಇತ್ತು ಎಂಬುದನ್ನು ಬಹಿರಂಗಪಡಿಸಿತ್ತು.

ಇಂಧನ ಬೆಲೆ ಇಳಿಯಲಿದೆಯೇ?: ಶೇ.85ರಷ್ಟು ತೈಲ ಅಗತ್ಯಕ್ಕೆ ಆಮದು ಅವಲಂಬಿತವಾಗಿರುವ ನಮ್ಮ ದೇಶದಲ್ಲಿ ಕಚ್ಚಾತೈಲ ಬೆಲೆ ಹೆಚ್ಚಾದರೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸುವುದು ಕಷ್ಟ. ಮೇ ಮತ್ತು ಜೂನ್‌ನಲ್ಲಿ ಬ್ರೆಂಟ್ ಕಚ್ಚಾ ತೈಲವು $ 73-75 ರಷ್ಟಿದ್ದು, ಇಂಧನ ಬೆಲೆ ಕಡಿಮೆಯಾಗಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಜುಲೈನಲ್ಲಿ 80.37 ಡಾಲರ್ ಮತ್ತು ಆಗಸ್ಟ್ನಲ್ಲಿ 86.43 ಡಾಲರ್​ಗೆ ಮತ್ತೆ ಏರಿತು. ಸದ್ಯ 90 ಡಾಲರ್ ಸಮೀಪ ವಹಿವಾಟು ನಡೆಯುತ್ತಿದ್ದು, ಸದ್ಯದಲ್ಲಿಯೇ ಇಂಧನ ಬೆಲೆ ಏರಿಕೆಯಾಗಲಿದೆ ಎಂಬ ಅಭಿಪ್ರಾಯವನ್ನು ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ.

ಭಾರಿ ನಷ್ಟ ದಾಖಲಿಸಿದ ತೈಲ ಕಂಪನಿಗಳು:ಕಳೆದ ವರ್ಷ ರಷ್ಯಾ-ಉಕ್ರೇನ್ ಯುದ್ಧದ ಹಿನ್ನೆಲೆ ಕಚ್ಚಾ ತೈಲ ಬೆಲೆ ಏರಿಕೆಯಾದಾಗ ಸಾರ್ವಜನಿಕ ವಲಯದ ತೈಲ ಕಂಪನಿಗಳು ಭಾರಿ ನಷ್ಟವನ್ನು ದಾಖಲಿಸಿದ್ದವು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಸರ್ಕಾರ ನಿಯಂತ್ರಿಸಿದ್ದರಿಂದ ನಷ್ಟ ಅನಿವಾರ್ಯವಾಗಿತ್ತು. ಈ ವರ್ಷದ ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಇಳಿಕೆಯಾಗಿದ್ದರಿಂದ ಕಂಪನಿಗಳು ತಮ್ಮ ನಷ್ಟವನ್ನು ಚೇತರಿಸಿಕೊಂಡು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಲಾಭಕ್ಕೆ ತಿರುಗಿದವು ಎಂದು ಉದ್ಯಮದ ಮೂಲಗಳು ಹೇಳುತ್ತವೆ.

17 ತಿಂಗಳವರೆಗೆ ಒಂದೇ ಬೆಲೆ:ದೇಶದಲ್ಲಿ 17 ತಿಂಗಳಿನಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ 96.72 ರೂ., ಡೀಸೆಲ್ 89.62 ರೂ. ಇದೆ. ಸಾಮಾನ್ಯವಾಗಿ ಇಂಧನ ಕಂಪನಿಗಳು ಸರಾಸರಿ ಕಚ್ಚಾ ತೈಲ ಬೆಲೆಗಳ ಆಧಾರದ ಮೇಲೆ ಪ್ರತಿದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಪರಿಷ್ಕರಿಸುತ್ತವೆ. ಆದರೆ ಏಪ್ರಿಲ್ 6, 2022 ರಿಂದ, ಕಂಪನಿಗಳು ಇಂಧನ ಬೆಲೆಗಳನ್ನು ಬದಲಾಯಿಸುತ್ತಿಲ್ಲ. ಮೇ 2022 ರಲ್ಲಿ ಸರ್ಕಾರವು ಅಬಕಾರಿ ಸುಂಕವನ್ನು ಕಡಿಮೆ ಮಾಡಿದ್ದರಿಂದ ಕಂಪನಿಗಳು ಸಹ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿದ್ದವು. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು 73-74 ಡಾಲರ್ ವ್ಯಾಪ್ತಿಯಲ್ಲಿದ್ದರೆ, ಕಂಪನಿಗಳು ದೈನಂದಿನ ಇಂಧನ ಬೆಲೆ ಪರಿಷ್ಕರಣೆಗೆ ಮುಕ್ತವಾಗಿವೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ONGC ಗೆ ಲಾಭ..:ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯಾದರೆ ದೇಶೀಯ ಉತ್ಪಾದಕ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಲಾಭ ಪಡೆಯುವ ಸಾಧ್ಯತೆಯಿದೆ. ಆದಾಗ್ಯೂ, ಹೆಚ್ಚುವರಿ ಲಾಭವನ್ನು ನಿಯಂತ್ರಿಸಲು ಸರ್ಕಾರವು ವಿಂಡ್‌ಫಾಲ್ ಪ್ರಾಫಿಟ್ ತೆರಿಗೆಯನ್ನು ಜಾರಿಗೆ ತಂದಿದೆ. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲೆ ಸರ್ಕಾರವು ವಿಶೇಷ ಹೆಚ್ಚುವರಿ ಅಬಕಾರಿ ಸುಂಕದ (SAED) ರೂಪದಲ್ಲಿ ತೆರಿಗೆಯನ್ನು ಸಂಗ್ರಹಿಸುತ್ತದೆ. ಸೆಪ್ಟೆಂಬರ್ 2ರಿಂದ ಪ್ರತಿ ಟನ್ ಗೆ 6,700 ರೂ. ಮೊದಲು 7,100 ರೂ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 75 ಡಾಲರ್‌ಗಿಂತ ಹೆಚ್ಚಿದ್ದರೆ ದೇಶೀಯ ಕಚ್ಚಾ ತೈಲ ಉತ್ಪಾದನೆಗೆ ವಿಂಡ್‌ಫಾಲ್ ತೆರಿಗೆ ವಿಧಿಸಲಾಗುತ್ತದೆ.

ಓದಿ:ಇದೆಂಥಾ ಶಾಕಿಂಗ್​​​​: ಪಾಕಿಸ್ತಾನದಲ್ಲಿ ಪೆಟ್ರೋಲ್‌ ದರ ಲೀಟರ್​ಗೆ 311 ರೂ..

Last Updated : Sep 7, 2023, 3:58 PM IST

ABOUT THE AUTHOR

...view details