ಹೈದರಾಬಾದ್: ಕ್ರೆಡಿಟ್ ಕಾರ್ಡ್‌ಗಳು ನಮ್ಮ ಜೀವನವನ್ನು ಸುಲಭ ಮತ್ತು ಸರಳಗೊಳಿಸಿವೆ ಹಾಗೂ ಗೊಳಿಸುತ್ತಿವೆ. ಬ್ಯಾಂಕ್ಗಳು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಬಹುವಿಧದ ಪ್ರಯೋಜನಗಳನ್ನು ನೀಡುತ್ತಿವೆ. ಕ್ರೆಡಿಟ್ ಕಾರ್ಡ್ಗಳಿಂದ ಖರೀದಿಗಳನ್ನು ಮಾಡುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಎಟಿಎಂ ನಿಂದ ನಗದು ಪಡೆಯಬಹುದು, ವೈಯಕ್ತಿಕ ಸಾಲಗಳನ್ನು ತೀರಿಸಬಹುದು ಹಾಗೂ ಪಡೆಯಬಹುದು.
ಆದರೆ, ಇದೆಲ್ಲವೂ ವೆಚ್ಚದ ರೂಪದಲ್ಲೇ ಇರುತ್ತೆ ಹಾಗೂ ಸರಿಯಾಗಿ ಕಾರ್ಡ್ ಬಳಸುವವರೆಗೆ ಮಾತ್ರವೇ ನೀವು ಪ್ರಯೋಜನಗಳನ್ನು ಆನಂದಿಸಬಹುದು. ನಿಮ್ಮ ಕಡೆಯಿಂದ ಯಾವುದೇ ಲೋಪ ಕಂಡು ಬಂದರೆ ಹಣಕಾಸಿನ ನಷ್ಟ ಖಂಡಿತಾ ಆಗುತ್ತದೆ. ಗೊತ್ತು ಗುರಿ ಇಲ್ಲದೇ ಹಾಗೂ ಕ್ರೆಡಿಟ್ ಕಾರ್ಡ್ನ ಕೆಟ್ಟ ನಿರ್ವಹಣೆ ಮಾಡಿದರೆ ಹೆಚ್ಚಿನ ಸಾಲದ ಹೊರೆ ಕಟ್ಟಿಟ್ಟ ಬುತ್ತಿ.
ತುರ್ತು ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಅತ್ಯುತ್ತಮ:ತುರ್ತಾಗಿ ನಮಗೆ ನಗದು ಬೇಕು ಎಂಬ ಪರಿಸ್ಥಿತಿ ಸೃಷ್ಟಿಯಾದಾಗ ನಾವು ಲಭ್ಯವಿರುವ ಎಲ್ಲ ಮಾರ್ಗಗಳನ್ನು ನಾವು ಅನ್ವೇಷಿಸುತ್ತೇವೆ. ಖರೀದಿಗಳನ್ನು ಮಾಡಲು ನಾವು ಕ್ರೆಡಿಟ್ ಕಾರ್ಡ್ ಅನ್ನು ಹೆಚ್ಚು ಬಳಸುತ್ತೇವೆ. ಏಕೆಂದರೆ ಇದಕ್ಕೆ ತಕ್ಷಣವೇ ಹಾರ್ಡ್ ಕ್ಯಾಶ್ ಅಗತ್ಯವಿಲ್ಲ. ಅನೇಕರು ವೈಯಕ್ತಿಕ ಸಾಲ ತೆಗೆದುಕೊಳ್ಳಲು ಬಯಸುತ್ತಾರೆ. ಕೆಲವರು ತಮ್ಮ ಕ್ರೆಡಿಟ್ ಕಾರ್ಡ್‌ನಿಂದ ಎರವಲು ಪಡೆಯುತ್ತಾರೆ. ಅದೂ ಯಾವುದೇ ದಾಖಲೆಗಳ ಅಗತ್ಯವಿಲ್ಲದೇ ಸಾಲವನ್ನು ನೀಡುತ್ತದೆ.
ಕ್ರೆಡಿಟ್ ಕಂಪನಿಗಳು ಉತ್ತಮ ಗ್ರಾಹಕರಿಗೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ನೀವು ಕಾರ್ಡ್ ಅನ್ನು ಬಳಸುವ ವಿಧಾನವನ್ನು ಆಧರಿಸಿ, ಕಂಪನಿಗಳು ಈ ಸಾಲವನ್ನು ಅನುಮೋದಿಸುತ್ತವೆ. ಅವರು ಈ ಸಾಲದ ಕೊಡುಗೆಗಳ ಬಗ್ಗೆ ಗ್ರಾಹಕರಿಗೆ ತಿಳಿಸುತ್ತಾರೆ. ಅಗತ್ಯವಿದ್ದಾಗ ನೀವು ಒಂದೇ ಕ್ಲಿಕ್‌ನಲ್ಲಿ ಸಾಲವನ್ನು ಪಡೆದುಕೊಳ್ಳಬಹುದು. ಇದಕ್ಕೆ ಯಾವುದೇ ಗ್ಯಾರಂಟಿ ಅಗತ್ಯವಿಲ್ಲ. ಇದನ್ನು ನಿಗದಿತ ಬಡ್ಡಿಯೊಂದಿಗೆ ನಿಗದಿತ ಅವಧಿಗೆ ತೆಗೆದುಕೊಳ್ಳಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ, ಕ್ರೆಡಿಟ್ ಕಾರ್ಡ್ ಸಾಲಗಳ ಮೇಲಿನ ಬಡ್ಡಿ ಸ್ವಲ್ಪ ಹೆಚ್ಚೇ ಇರುತ್ತದೆ.
ಕೆಲವರಿಗೆ ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಗೊತ್ತಿಲ್ಲ:ಕೆಲವರು ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಮೊದಲು ಪ್ರಮುಖ ಅಂಶಗಳನ್ನು ಪರಿಶೀಲಿಸುತ್ತಿಲ್ಲ. ನಗದು ತೆಗೆದುಕೊಳ್ಳುವುದು ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಸಾಲವನ್ನು ಪಡೆಯುವುದು ವಿಭಿನ್ನವಾಗಿದೆ. ನಗದು ಹಿಂಪಡೆಯುವಿಕೆ ನಿಮ್ಮ ಕ್ರೆಡಿಟ್ ಮಿತಿಯ ಮೇಲೆ ಪರಿಣಾಮ ಬೀರುತ್ತದೆ. ಇದರ ಮೇಲೆ, ಕ್ರೆಡಿಟ್ ಕಾರ್ಡ್ ಹಿಂಪಡೆಯುವಿಕೆಗೆ ಶೇ36 - 48 ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತದೆ. ಸಂಪೂರ್ಣ ಬಾಕಿಯನ್ನು ಕೊನೆಯ ಪಾವತಿ ದಿನದೊಳಗೆ ಪಾವತಿಸಬೇಕು.
ಇದನ್ನು ಓದಿ:ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುವ ಅಂಶಗಳಾವುವು? ಕ್ರೆಡಿಟ್ ರಿಪೋರ್ಟ್ನ ತಪ್ಪು ಸರಿಪಡಿಸಲು ಹೀಗೆ ಮಾಡಿ..