ಕರ್ನಾಟಕ

karnataka

ETV Bharat / business

ವರ್ಷದ ಮೊದಲ ದಿನವೇ ದರ ಏರಿಕೆ ಬಿಸಿ: ವಾಣಿಜ್ಯ ಎಲ್​ಪಿಜಿ ಸಿಲಿಂಡರ್​ ಬೆಲೆ ಹೆಚ್ಚಳ - ತೈಲ ಮಾರುಕಟ್ಟೆ ಕಂಪನಿಗಳು

ಹೊಸ ವರ್ಷದ ಮೊದಲ ದಿನ ಗ್ರಾಹಕರಿಗೆ ತೈಲ ಮಾರುಕಟ್ಟೆ ಕಂಪನಿಗಳು ದರ ಏರಿಕೆ ಬಿಸಿ ಮುಟ್ಟಿಸಿವೆ. ವಾಣಿಜ್ಯ ಬಳಕೆಯ ಪ್ರತಿ ಎಲ್​ಪಿಜಿ ಸಿಲಿಂಡರ್​ಗೆ 25 ರೂಪಾಯಿ ಹೆಚ್ಚಿಸಿವೆ.

commercial-lpg-cylinder-price-increased
ವರ್ಷದ ಮೊದಲ ದಿನವೇ ದರ ಏರಿಕೆ ಬಿಸಿ

By

Published : Jan 1, 2023, 12:25 PM IST

Updated : Jan 1, 2023, 1:21 PM IST

ನವದೆಹಲಿ:ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 2023ರ ಹೊಸ ವರ್ಷದ ಮೊದಲ ದಿನದಂದು ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಹೆಚ್ಚಿಸುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ವಾಣಿಜ್ಯ ಸಿಲಿಂಡರ್‌ಗಳ ಬೆಲೆಯನ್ನು 25 ರೂಪಾಯಿಗೆ ಏರಿಸಲಾಗಿದೆ. ಗೃಹಬಳಕೆಯ ಸಿಲಿಂಡರ್‌ ದರವನ್ನು ಪರಿಷ್ಕರಿಸಲಾಗಿಲ್ಲ. ಇದು ವಾಣಿಜ್ಯೋದ್ದೇಶದ ಗ್ರಾಹಕರ ಕೈ ಸುಡಲಿದೆ.

ವಾಣಿಜ್ಯ ಸಿಲಿಂಡರ್‌ಗಳ ಪರಿಷ್ಕೃತ ದರ ಜನವರಿ 1 ರಿಂದಲೇ ಜಾರಿಗೆ ಬರಲಿದೆ ಎಂದು ಒಎಂಸಿ ತಿಳಿಸಿದೆ. ಪ್ರತಿ ಸಿಲಿಂಡರ್​ಗೆ 25 ರೂಪಾಯಿ ಏರಿಕೆ ಮಾಡಿದ್ದು, ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು ಸೇರಿದಂತೆ ವಿವಿಧ ವಾಣಿಜ್ಯೋದ್ಯಮಗಳು ಬೆಲೆ ಏರಿಕೆ ಬಿಸಿ ಅನುಭವಿಸಲಿವೆ. ಇದರಿಂದ ಹೋಟೆಲ್​, ರೆಸ್ಟೋರೆಂಟ್​ ಊಟದ ದರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಜನಬಳಕೆ ಸಿಲಿಂಡರ್​ ದರದಲ್ಲಿ ಯಾವುದೇ ಏರಿಕೆ ಮಾಡದೇ ಇರುವುದು ಜನರಲ್ಲಿ ಸಮಾಧಾನ ತಂದಿದೆ.

ದೇಶದ ಮಹಾನಗರಗಳಲ್ಲಿ ದರ ಹೇಗಿದೆ(ವಾಣಿಜ್ಯ)?:

ದೆಹಲಿ- 1,768 ರೂಪಾಯಿ

ಮುಂಬೈ- 1721 ರೂಪಾಯಿ

ಕೋಲ್ಕತ್ತಾ- 1870 ರೂಪಾಯಿ

ಚೆನ್ನೈ- 1917 ರೂಪಾಯಿ

ಗೃಹಬಳಕೆಯ LPG ಸಿಲಿಂಡರ್ ಬೆಲೆ:

ದೆಹಲಿ- 1053 ರೂ

ಮುಂಬೈ- 1052.5 ರೂ

ಕೋಲ್ಕತ್ತಾ- 1079 ರೂ

ಚೆನ್ನೈ- 1068.5 ರೂ

ಗೃಹಬಳಕೆ ಸಿಲಿಂಡರ್​ಗಳ ದರವನ್ನು ಕಳೆದ ವರ್ಷ ನಾಲ್ಕು ಬಾರಿ ಏರಿಕೆ ಮಾಡಲಾಗಿತ್ತು. ಮಾರ್ಚ್‌​ನಲ್ಲಿ 50 ರೂಪಾಯಿ, ಮೇ ತಿಂಗಳಲ್ಲಿ 50 ಮತ್ತು 3.50 ರೂಪಾಯಿ, ಬಳಿಕ ಜುಲೈನಲ್ಲಿ 50 ರೂಪಾಯಿ ಹೆಚ್ಚಳ ಮಾಡಲಾಗಿತ್ತು. ಅಲ್ಲದೇ ಸಂಚಿತ ನಿಧಿ(ಡೆಪಾಸಿಟ್​)ಯನ್ನು 153.5ಕ್ಕೆ ಹೆಚ್ಚಿಸಲಾಗಿದೆ.

ಕಳೆದ ಸೆಪ್ಟೆಂಬರ್​ 1ರಂದು ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಬಳಕೆಯ 19 ಕೆಜಿ ಎಲ್​​ಪಿಜಿ ಸಿಲಿಂಡರ್​ ಬೆಲೆಯಲ್ಲಿ 91.50 ಪೈಸೆ ಇಳಿಕೆ ಮಾಡಿದ್ದವು. ಪ್ರತಿ ತಿಂಗಳ 1ನೇ ತಾರೀಖಿನಂದು ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್​ ಬೆಲೆ ಪರಿಷ್ಕರಿಸುತ್ತವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಇಂಧನ ಬೆಲೆ ಗಮನದಲ್ಲಿಟ್ಟುಕೊಂಡು ಬೆಲೆ ಪರಿಷ್ಕರಣೆ ಮಾಡಲಾಗುತ್ತದೆ.

ಇದನ್ನೂ ಓದಿ:ಆಹಾರ ಭದ್ರತಾ ಕಾಯ್ದೆಯಡಿ ಒಂದು ವರ್ಷ ಉಚಿತ ಪಡಿತರ: ಇಂದಿನಿಂದಲೇ ಜಾರಿ

Last Updated : Jan 1, 2023, 1:21 PM IST

ABOUT THE AUTHOR

...view details