ಮುಂಬೈ: ಜಾಗತಿಕ ಮಾರುಕಟ್ಟೆಗಳಲ್ಲಿನ ದೌರ್ಬಲ್ಯವನ್ನು ಮೀರಿಸಿ ಭಾರತದ ಈಕ್ವಿಟಿ ಮಾರುಕಟ್ಟೆಗಳು ಗುರುವಾರ ಉತ್ತಮ ಏರಿಕೆಗೆ ಸಾಕ್ಷಿಯಾದವು. ಬಿಎಸ್ಇ ಸೆನ್ಸೆಕ್ಸ್ 491 ಪಾಯಿಂಟ್ಸ್ ಅಥವಾ ಶೇಕಡಾ 0.69 ರಷ್ಟು ಏರಿಕೆಯಾಗಿ 71,848 ಮಟ್ಟದಲ್ಲಿ ಕೊನೆಗೊಂಡರೆ, ನಿಫ್ಟಿ-50 141 ಪಾಯಿಂಟ್ಸ್ ಅಥವಾ ಶೇಕಡಾ 0.66 ರಷ್ಟು ಏರಿಕೆಯಾಗಿ 21,659 ಮಟ್ಟಕ್ಕೆ ತಲುಪಿದೆ.
ಬಜಾಜ್ ಫೈನಾನ್ಸ್ (ಶೇ.4.25), ಎನ್ಟಿಪಿಸಿ, ಒಎನ್ಜಿಸಿ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್, ಇಂಡಸ್ಇಂಡ್ ಬ್ಯಾಂಕ್, ಅದಾನಿ ಪೋರ್ಟ್ಸ್, ಪವರ್ ಗ್ರಿಡ್, ಟಾಟಾ ಮೋಟಾರ್ಸ್, ಆಕ್ಸಿಸ್ ಬ್ಯಾಂಕ್, ನೆಸ್ಲೆ ಇಂಡಿಯಾ, ಎಚ್ಡಿಎಫ್ಸಿ ಲೈಫ್, ಬಜಾಜ್ ಫಿನ್ ಸರ್ವ್, ಎಚ್ಡಿಎಫ್ಸಿ ಬ್ಯಾಂಕ್, ಸನ್ ಫಾರ್ಮಾ, ಇನ್ಫೋಸಿಸ್ ಮತ್ತು ಟೈಟಾನ್ ಕಂಪನಿ 50 ಷೇರುಗಳ ಸೂಚ್ಯಂಕದಲ್ಲಿ ಹೆಚ್ಚು ಲಾಭ ಗಳಿಸಿದ ಷೇರುಗಳಾಗಿವೆ.
ಏತನ್ಮಧ್ಯೆ, ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇಕಡಾ 1.5 ರಷ್ಟು ಮತ್ತು ಬಿಎಸ್ಇ ಸ್ಮಾಲ್ ಕ್ಯಾಪ್ ಸೂಚ್ಯಂಕವು ಶೇಕಡಾ 1 ರಷ್ಟು ಏರಿಕೆಯಾಗಿದೆ. ವಲಯಗಳ ಪೈಕಿ ನಿಫ್ಟಿ ರಿಯಾಲ್ಟಿ ಸೂಚ್ಯಂಕ ಶೇಕಡಾ 6.76 ರಷ್ಟು ಏರಿಕೆ ಕಂಡರೆ, ನಿಫ್ಟಿ ಫೈನಾನ್ಷಿಯಲ್ ಸರ್ವೀಸಸ್, ಬ್ಯಾಂಕ್ ಮತ್ತು ಖಾಸಗಿ ಬ್ಯಾಂಕ್ ಸೂಚ್ಯಂಕಗಳು ತಲಾ 1 ಶೇಕಡಾ ಮತ್ತು ನಿಫ್ಟಿ ಎಫ್ಎಂಸಿಜಿ ಸೂಚ್ಯಂಕ 0.86 ಶೇಕಡಾರಷ್ಟು ಏರಿಕೆಯಾಗಿವೆ.