ಕರ್ನಾಟಕ

karnataka

ETV Bharat / business

Closing Bell: ಐಟಿಸಿ, ರಿಲಯನ್ಸ್, ಇನ್ಫೋಸಿಸ್ ಖರೀದಿ ಅಬ್ಬರ; ಸೆನ್ಸೆಕ್ಸ್​ 152 & ನಿಫ್ಟಿ 47 ಅಂಕ ಏರಿಕೆ - ಏಷ್ಯಾದ ಮಾರುಕಟ್ಟೆಗಳಲ್ಲಿ ಟೋಕಿಯೊ

ಮಂಗಳವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ.

Sensex and Nifty log gains for third day on buying in Reliance
Sensex and Nifty log gains for third day on buying in Reliance

By ETV Bharat Karnataka Team

Published : Sep 5, 2023, 5:52 PM IST

ಮುಂಬೈ: ಜಾಗತಿಕ ಷೇರುಗಳಲ್ಲಿನ ಮಂದಗತಿಯ ಪ್ರವೃತ್ತಿಯ ಮಧ್ಯೆ ಮಾರುಕಟ್ಟೆಯ ದೊಡ್ಡ ಕಂಪನಿಗಳಾದ ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಇನ್ಫೋಸಿಸ್​​ ಷೇರುಗಳ ಖರೀದಿಯಲ್ಲಿನ ಹೆಚ್ಚಳದಿಂದ ಈಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಮಂಗಳವಾರ ಸತತ ಮೂರನೇ ದಿನವೂ ಏರಿಕೆ ಕಂಡವು. ಇದಲ್ಲದೇ, ದೃಢವಾದ ದೇಶೀಯ ಸ್ಥೂಲ ಆರ್ಥಿಕ ದತ್ತಾಂಶವು ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸಿದೆ ಎಂದು ಹೂಡಿಕೆದಾರರು ತಿಳಿಸಿದ್ದಾರೆ.

ಬಿಎಸ್ಇ ಬೆಂಚ್​ಮಾರ್ಕ್ ಸೂಚ್ಯಂಕವು 152.12 ಪಾಯಿಂಟ್ ಅಥವಾ ಶೇಕಡಾ 0.23 ರಷ್ಟು ಏರಿಕೆ ಕಂಡು 65,780.26 ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 203.56 ಪಾಯಿಂಟ್ ಅಥವಾ ಶೇಕಡಾ 0.31 ರಷ್ಟು ಏರಿಕೆ ಕಂಡು 65,831.70 ಕ್ಕೆ ತಲುಪಿತ್ತು. ನಿಫ್ಟಿ 46.10 ಪಾಯಿಂಟ್ ಅಥವಾ ಶೇಕಡಾ 0.24 ರಷ್ಟು ಏರಿಕೆ ಕಂಡು 19,574.90 ಕ್ಕೆ ತಲುಪಿದೆ.

ಸೆನ್ಸೆಕ್ಸ್ ಷೇರುಗಳನ್ನು ನೋಡುವುದಾದರೆ ಸನ್ ಫಾರ್ಮಾ ಶೇಕಡಾ 2.09 ರಷ್ಟು ಏರಿಕೆ ಕಂಡರೆ ಐಟಿಸಿ, ಟೈಟನ್, ಬಜಾಜ್ ಫೈನಾನ್ಸ್, ನೆಸ್ಲೆ, ಇನ್ಫೋಸಿಸ್, ಎಲ್ & ಟಿ, ಜೆಎಸ್​ಡಬ್ಲ್ಯೂ ಸ್ಟೀಲ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಕೊಟಕ್ ಮಹೀಂದ್ರಾ ಬ್ಯಾಂಕ್ ಕೂಡ ಏರಿಕೆಯಾದವು. ಅಲ್ಟ್ರಾಟೆಕ್ ಸಿಮೆಂಟ್, ಮಾರುತಿ, ಎಚ್​​ಡಿಎಫ್​ಸಿ ಬ್ಯಾಂಕ್, ವಿಪ್ರೋ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎನ್​ಟಿಪಿಸಿ ನಷ್ಟ ಅನುಭವಿಸಿದವು.

ಮಾಧ್ಯಮ ಸೂಚ್ಯಂಕವು ಶೇಕಡಾ 2 ಕ್ಕಿಂತ ಹೆಚ್ಚು ಏರಿಕೆಗೊಂಡರೆ, ರಿಯಾಲ್ಟಿ, ಫಾರ್ಮಾ, ಐಟಿ ಮತ್ತು ಪಿಎಸ್​ಯು ಬ್ಯಾಂಕ್ ಸಹ ಉತ್ತಮ ಲಾಭದೊಂದಿಗೆ ಕೊನೆಗೊಂಡವು. ಬ್ಯಾಂಕ್, ಆಟೋ ಮತ್ತು ಫೈನಾನ್ಸ್ ಸೂಚ್ಯಂಕಗಳು ಅಲ್ಪ ನಷ್ಟದೊಂದಿಗೆ ಇಳಿಕೆಯಲ್ಲಿ ಕೊನೆಗೊಂಡವು.

ಏಷ್ಯಾದ ಮಾರುಕಟ್ಟೆಗಳಲ್ಲಿ ಟೋಕಿಯೊ ಏರಿಕೆಯಲ್ಲಿದ್ದರೆ, ಸಿಯೋಲ್, ಶಾಂಘೈ ಮತ್ತು ಹಾಂಗ್ ಕಾಂಗ್ ಇಳಿಕೆಯಲ್ಲಿ ಕೊನೆಗೊಂಡವು. ಆರಂಭಿಕ ವ್ಯವಹಾರಗಳಲ್ಲಿ ಯುರೋಪಿಯನ್ ಮಾರುಕಟ್ಟೆಗಳು ಮಿಶ್ರ ಪ್ರವೃತ್ತಿಯೊಂದಿಗೆ ವಹಿವಾಟು ನಡೆಸುತ್ತಿದ್ದವು. ಯುಎಸ್ ಮಾರುಕಟ್ಟೆಗಳು ಸೋಮವಾರ ಮುಚ್ಚಲ್ಪಟ್ಟಿವೆ.

ಸಮೀಕ್ಷೆಯ ಪ್ರಕಾರ, ಭಾರತದ ಉತ್ಪಾದನಾ ಚಟುವಟಿಕೆಗಳು ಆಗಸ್ಟ್​ನಲ್ಲಿ ವೇಗ ಪಡೆದುಕೊಂಡಿವೆ. ಏತನ್ಮಧ್ಯೆ, ಜಿಎಸ್​​ಟಿ ಸಂಗ್ರಹವು ಶೇಕಡಾ 11 ರಷ್ಟು ಏರಿಕೆಯಾಗಿ 1.59 ಲಕ್ಷ ಕೋಟಿ ರೂ.ಗೆ ತಲುಪಿದೆ ಮತ್ತು ದೇಶೀಯ ಪ್ರಯಾಣಿಕ ವಾಹನಗಳ ಮಾರಾಟವು ಆಗಸ್ಟ್​ನಲ್ಲಿ ದಾಖಲೆ ತಲುಪಿದೆ. ಜಾಗತಿಕ ತೈಲ ಬೆಂಚ್​ಮಾರ್ಕ್​ ಬ್ರೆಂಟ್ ಕಚ್ಚಾ ತೈಲವು ಶೇಕಡಾ 0.62 ರಷ್ಟು ಇಳಿದು ಬ್ಯಾರೆಲ್​ಗೆ 88.45 ಡಾಲರ್​ಗೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಸೋಮವಾರ 3,367.67 ಕೋಟಿ ರೂ.ಗಳ ಈಕ್ವಿಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ. ಬಿಎಸ್ಇ ಬೆಂಚ್ ಮಾರ್ಕ್ ಸೋಮವಾರ 240.98 ಪಾಯಿಂಟ್ ಅಥವಾ ಶೇಕಡಾ 0.37 ರಷ್ಟು ಏರಿಕೆ ಕಂಡು 65,628.14 ಕ್ಕೆ ತಲುಪಿತ್ತು. ನಿಫ್ಟಿ 93.50 ಪಾಯಿಂಟ್ ಅಥವಾ ಶೇಕಡಾ 0.48 ರಷ್ಟು ಏರಿಕೆ ಕಂಡು 19,528.80 ಕ್ಕೆ ತಲುಪಿತ್ತು.

ಇದನ್ನೂ ಓದಿ : ಆಗಸ್ಟ್​ನಲ್ಲಿ ದೇಶದ ವಿದ್ಯುತ್ ಬೇಡಿಕೆ ಶೇ 16ರಷ್ಟು ಏರಿಕೆ; 151 ಬಿಲಿಯನ್ ಯೂನಿಟ್ ಬಳಕೆ

ABOUT THE AUTHOR

...view details