ಹೈದರಾಬಾದ್ ಡೆಸ್ಕ್:ವಾಹನ ಸವಾರರ ಸಹಾಯಕ್ಕಾಗಿ ಜಾರಿ ಮಾಡಿದ್ದ ಡಿಜಿಲಾಕರ್ ಸೇವೆಯನ್ನು ಕೇಂದ್ರ ಸರ್ಕಾರ ಇನ್ನಷ್ಟು ಸುಲಭಗೊಳಿಸಿದೆ. ಡಿಜಿಲಾಕರ್ ಅನ್ನು ಸುಲಭವಾಗಿ ಪಡೆದುಕೊಳ್ಳಲು ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿ ಪಡೆದುಕೊಳ್ಳಬಹುದು ಎಂದು ತಂತ್ರಜ್ಞಾನ ಮತ್ತು ಐಟಿ ಇಲಾಖೆ ತಿಳಿಸಿದೆ.
ಡಿಜಿಟಲೀಕರಣದ ಮೂಲಕ ಸರ್ಕಾರಿ ಸೇವೆಗಳ ಲಭ್ಯತೆಯನ್ನು ಇನ್ನಷ್ಟು ಸರಾಗಗೊಳಿಸಲು ಡಿಜಿಲಾಕರ್ ಸೇವೆಯನ್ನು ಜನರು ಇದೀಗ ವಾಟ್ಸ್ಆ್ಯಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. MyGov ಹೆಲ್ಪ್‌ಡೆಸ್ಕ್ ಈಗ ಡಿಜಿಲಾಕರ್ ಸೇವೆಗಳಿಂದ ಪ್ರಾರಂಭವಾಗುವ ಸಮಗ್ರ ನಾಗರಿಕ ಬೆಂಬಲ ಮತ್ತು ಸಮರ್ಥ ಆಡಳಿತಕ್ಕಾಗಿ ಸೇವೆಗಳನ್ನು ನೀಡುತ್ತದೆ.
ಹೊಸ ಸೇವೆಯಿಂದ ಪಾನ್ ಕಾರ್ಡ್, ಚಾಲನಾ ಪರವಾನಗಿ, ಶೈಕ್ಷಣಿಕ ದಾಖಲಾತಿ, ಉತ್ತೀರ್ಣ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣಪತ್ರ, ವಿಮಾ ಪಾಲಿಸಿ, ದ್ವಿಚಕ್ರ ವಾಹನ ಪರವಾನಗಿ, ಮಾರ್ಕ್ಸಕಾರ್ಡ್, ವಿಮಾ ಪಾಲಿಸಿ ದಾಖಲೆ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಡಿಜಿಲಾಕರ್ನಲ್ಲಿ ಸೇವ್ ಮಾಡಬಹುದಾಗಿದೆ.