ಹೈದರಾಬಾದ್:ಈಗಾಗಲೇ ತೆಗೆದುಕೊಂಡಿರುವ ಸಾಲದ ಅವಧಿಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ನಮ್ಮಲ್ಲಿ ಹಲವರು ಭಾವಿಸಿದ್ದಾರೆ. ಆದ್ರೆ ನಮ್ಮ ಮರುಪಾವತಿ ನಿಯಮಿತವಾಗಿದ್ದರೆ, ಸಾಲದ ಅವಧಿಯನ್ನು ಕಡಿಮೆ ಮಾಡುವಂತೆ ನಾವು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳನ್ನು ಕೇಳಿಕೊಳ್ಳಬಹುದಾಗಿದೆ.
EMI ನಲ್ಲಿ ಹೆಚ್ಚುವರಿ ಹೆಚ್ಚಳ ಮಾಡಿ: ಒಮ್ಮೆ ಸಾಲದ ಅವಧಿ ಕಡಿಮೆಯಾದರೆ, ಆಗ EMI ಹೆಚ್ಚಾಗುತ್ತದೆ. ಇದು ಕಟ್ಟುವ ಲೋನ್ ಬೇಗ ಮುಗಿಯಲು ಕಾರಣವಾಗುತ್ತದೆ. ನಿಮಗೆ ಹಣಕಾಸಿನ ತೊಂದರೆ ಇಲ್ಲದಿದ್ದರೆ, ನೀವು EMI ನಲ್ಲಿ ಹೆಚ್ಚುವರಿ ಹೆಚ್ಚಳವನ್ನು ಕೇಳಬಹುದಾಗಿದೆ.
ಬೋನಸ್ ಅನ್ನು ಸಾಲಕ್ಕೆ ಉಪಯೋಗಿಸಿ: ಅಲ್ಲದೇ ನಮ್ಮ ಸಾಲವನ್ನು ಕಡಿಮೆ ಮಾಡಿಕೊಳ್ಳಲು ನಾವು ಹೆಚ್ಚು ಹಣವನ್ನು ಕಟ್ಟಬಹುದಾಗಿದೆ. ಬಡ್ಡಿ ಹೊರೆ ದೊಡ್ಡ ಪ್ರಮಾಣದಲ್ಲಿ ಇಳಿಸಲು ಇದು ಒಂದು ಮಾರ್ಗವಾಗಿದೆ. ನಾವು ಪ್ರತಿ ವರ್ಷವೂ ಒಂದು ಅಥವಾ ಎರಡು EMI ಗಳನ್ನು ಹೆಚ್ಚುವರಿಯಾಗಿ ಪಾವತಿಸಬಹುದು. ಬೋನಸ್ ಮತ್ತು ಹೆಚ್ಚುವರಿಯಂತಹ ಅನಿರೀಕ್ಷಿತ ಹಣವನ್ನು ಈ ಉದ್ದೇಶಕ್ಕಾಗಿ ಬಳಸಬಹುದು. ನಾವು ಭಾಗಶಃ ಮರುಪಾವತಿ ಮಾಡಿದಾಗ ಕೆಲವು ಸಂಸ್ಥೆಗಳು ನಿರ್ದಿಷ್ಟ ಶುಲ್ಕವನ್ನು ಸಂಗ್ರಹಿಸುತ್ತವೆ. ಆದಾಗ್ಯೂ, ಗೃಹ ಸಾಲಗಳ ಮೇಲೆ ಬ್ಯಾಂಕ್‌ಗಳು ಅಂತಹ ಯಾವುದೇ ಶುಲ್ಕವನ್ನು ಸಂಗ್ರಹಿಸುವುದಿಲ್ಲ.
ಸಾಲವನ್ನು ಮತ್ತೊಂದು ಬ್ಯಾಂಕ್‌ಗೆ ವರ್ಗಾಯಿಸಿ: ಅವಕಾಶವಿದ್ದರೆ, ಕಡಿಮೆ ಬಡ್ಡಿ ಸಾಲವನ್ನು ನೀಡುವ ಇನ್ನೊಂದು ಬ್ಯಾಂಕ್‌ಗೆ ನಾವು ಸಾಲ ವರ್ಗಾಯಿಸಬೇಕು. ಬಡ್ಡಿದರದಲ್ಲಿ ಕನಿಷ್ಠ 0.75 ರಿಂದ 1 ಪ್ರತಿಶತ ವ್ಯತ್ಯಾಸವಿದ್ದಾಗ ಮಾತ್ರ ಇದನ್ನು ಪರಿಗಣಿಸಬೇಕು. ಸಾಲವನ್ನು ಮತ್ತೊಂದು ಬ್ಯಾಂಕ್‌ಗೆ ಬದಲಾಯಿಸುವ ಮೊದಲು ವೆಚ್ಚಗಳು ಮತ್ತು ಪ್ರಯೋಜನಗಳನ್ನು ಎಚ್ಚರಿಕೆಯಿಂದ ತಿಳಿದುಕೊಳ್ಳಿ. ಗೃಹ ಸಾಲಗಳು ದೀರ್ಘಾವಧಿಯದ್ದಾಗಿರುವುದರಿಂದ, ಬಡ್ಡಿಯಲ್ಲಿನ ಸಣ್ಣ ವ್ಯತ್ಯಾಸವೂ ಹೆಚ್ಚಿನ ಹೆಚ್ಚುವರಿಗೆ ಕಾರಣವಾಗುತ್ತದೆ.