ಕರ್ನಾಟಕ

karnataka

ETV Bharat / business

ಉತ್ತಮ ಪಾಲಿಸಿಯಂತೆ ಕ್ಲೈಮ್​ ಕೂಡ ಮುಖ್ಯ.. ವಿಮೆ ಪಡೆಯುವಾಗ ಈ ನಿಯಮ ಪಾಲಿಸಿ - ಕಡಿಮೆ ಪ್ರೀಮಿಯಂ ಟರ್ಮ್ ಪಾಲಿಸಿಗಳು

ವಿಮೆ ಪಡೆಯುವಾಗ ನಿಯಮ ಪಾಲಿಸಿ- ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ- ಕಡಿಮೆ ಪ್ರೀಮಿಯಂ ಟರ್ಮ್ ಪಾಲಿಸಿಗಳು- ವಿಮಾ ಕಂಪನಿಯ ಕ್ಲೈಮ್ ಪ್ರಕ್ರಿಯೆ- ವಿಮಾ ಕಂಪನಿ- ಕಂಪನಿಯ ಕ್ಲೈಮ್​ ಇತಿಹಾಸ

claim-settlement-ratio
ಉತ್ತಮ ಪಾಲಿಸಿಯಂತೆ ಕ್ಲೈಮ್​ ಕೂಡ ಮುಖ್ಯ

By

Published : Feb 7, 2023, 1:11 PM IST

ಹೈದರಾಬಾದ್:ವಿಮಾ ಕಂಪನಿಗಳು ಹೆಚ್ಚು ಹೆಚ್ಚು ಟರ್ಮ್ ಪಾಲಿಸಿಗಳನ್ನು ಹೊರತರುತ್ತಿವೆ. ಜೀವ ವಿಮೆಯು ಅನಿರೀಕ್ಷಿತ ಸಂದರ್ಭಗಳಲ್ಲಿ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡುತ್ತವೆ. ಟರ್ಮ್ ಪಾಲಿಸಿಗಳು ಕಡಿಮೆ ಪ್ರೀಮಿಯಂಗಳೊಂದಿಗೆ ಹೆಚ್ಚಿನ ಭದ್ರತೆಯನ್ನು ನೀಡುತ್ತವೆ. ಸರಿಯಾದ ವಿಮಾ ಕಂಪನಿಯನ್ನು ಆಯ್ಕೆ ಮಾಡಿಕೊಳ್ಳುವುದು ಎಷ್ಟು ಮುಖ್ಯವೋ ಹಾಗೆಯೇ ನಮ್ಮ ಅಗತ್ಯಕ್ಕೆ ತಕ್ಕಂತೆ ಪಾಲಿಸಿ ತೆಗೆದುಕೊಳ್ಳುವುದೂ ಕೂಡ ಅಷ್ಟೇ ಮುಖ್ಯ.

ವಿಮಾ ಕಂಪನಿಯ ಕ್ಲೈಮ್ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ಪಾಲಿಸಿದಾರರಿಗೆ ಅಚಾನಕ್ಕಾಗಿ ಏನಾದರೂ ಸಂಭವಿಸಿದಾಗ ಪರಿಹಾರವನ್ನು ನೀಡುವಲ್ಲಿ ವಿನಾಕಾರಣ ತೊಂದರೆಗಳನ್ನು ಉಂಟುಮಾಡುವ ವಿಮಾ ಕಂಪನಿಯಿಂದ ದೂರವಿರಬೇಕು. ಪಾಲಿಸಿಗಳ ನಿಯಮಗಳು ಕಂಪನಿಯಿಂದ ಕಂಪನಿಗೆ ಭಿನ್ನವಾಗಿರುತ್ತವೆ. ಪಾಲಿಸಿಯನ್ನು ಖರೀದಿಸುವಾಗ ಈ ಎಲ್ಲಾ ವಿಷಯಗಳನ್ನು ಗಮನಿಸುವುದರ ಜೊತೆಗೆ ಕಂಪನಿಯ ಕ್ಲೈಮ್​ ಇತಿಹಾಸವನ್ನು ಪರಿಶೀಲಿಸಬೇಕು.

ಕ್ಲೈಮ್ ಇತ್ಯರ್ಥ​ ಅನುಪಾತ:ಕ್ಲೈಮ್ ಇತ್ಯರ್ಥ ಅನುಪಾತವು ಒಂದು ನಿರ್ದಿಷ್ಟ ಅವಧಿಯಲ್ಲಿ ವಿಮಾ ಕಂಪನಿ ಎಷ್ಟು ಕ್ಲೈಮ್‌ಗಳನ್ನು ಇತ್ಯರ್ಥಪಡಿಸಿದೆ ಎಂಬುದರ ಅಳತೆ ಗೋಲಾಗಿದೆ. ಪಾಲಿಸಿದಾರನ ಮರಣದ ಬಳಿಕ ನಾಮಿನಿಯು ವಿಮಾ ಕಂಪನಿಯನ್ನು ಸಂಪರ್ಕಿಸಿ, ಪಾಲಿಸಿಯನ್ನು ಕ್ಲೈಮ್ ಮಾಡಲು ಕೇಳಿಕೊಳ್ಳುತ್ತಾನೆ. ಆ ವಿಮಾ ಕಂಪನಿಯು ನಿಯಮಗಳ ಪ್ರಕಾರ ಕ್ಲೈಮ್ ಅನ್ನು ಸ್ವೀಕರಿಸುವ ಮತ್ತು ತಿರಸ್ಕರಿಸಲೂಬಹುದು. ಕ್ಲೈಮ್​ ಅನ್ನು ಉತ್ತಮವಾಗಿ ಇತ್ಯರ್ಥ ಮಾಡುವ ವಿಮಾ ಕಂಪನಿಯನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರಬೇಕು. ಇಲ್ಲವಾದಲ್ಲಿ ಮರಣಾನಂತರ ನಾಮಿನಿಗೆ ವಿಮೆ ಹಣ ಕೈತಪ್ಪಲಿದೆ.

ಕಡಿಮೆ ಅನುಪಾತ:ಕ್ಲೈಮ್​ಗಳ ಕಡಿಮೆ ಇತ್ಯರ್ಥ ಅನುಪಾತವು ಕಂಪನಿಯು ಪರಿಹಾರವನ್ನು ನೀಡುವಲ್ಲಿ ತೊಂದರೆಗಳನ್ನು ಉಂಟು ಮಾಡಿದೆ ಎಂದರ್ಥ. ಉದಾಹರಣೆಗೆ, ಒಂದು ಕಂಪನಿಯು ವರ್ಷದಲ್ಲಿ 100 ಕ್ಲೈಮ್‌ಗಳನ್ನು ಪಡೆಯುತ್ತದೆ. 90 ಪಾಲಿಸಿಗಳಿಗೆ ಯಾವುದೇ ತೊಂದರೆಯಿಲ್ಲದೆ ಪರಿಹಾರವನ್ನು ನೀಡಿದರೆ, ಪಾವತಿಗಳ ಅನುಪಾತವು 90 ಪ್ರತಿಶತ ಎಂದು ಲೆಕ್ಕಹಾಕಲಾಗುತ್ತದೆ. ಅದು ಕಡಿಮೆ ಆದಲ್ಲಿ ಅಂತಹ ಕಂಪನಿಯು ಪಾಲಿಸಿದಾರರಿಗೆ ನಷ್ಟ ಉಂಟು ಮಾಡಿದಂತಾಗುತ್ತದೆ.

ಇನ್ನೊಂದೆಡೆ, ಪಾಲಿಸಿದಾರರನ್ನು ಆಕರ್ಷಿಸಲು ವಿಮಾ ಕಂಪನಿಗಳು ಕಡಿಮೆ ಪ್ರೀಮಿಯಂನಲ್ಲಿ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡುತ್ತಿವೆ. ಪ್ರೀಮಿಯಂ ಕಡಿಮೆ ಎಂಬ ಕಾರಣಕ್ಕೆ ಪಾಲಿಸಿಗಳನ್ನು ತೆಗೆದುಕೊಳ್ಳುವುದು ಎಂದಿಗೂ ಒಳ್ಳೆಯದಲ್ಲ. ಟರ್ಮ್ ಪಾಲಿಸಿಯು ಉಳಿತಾಯ ಬದುಕಿನ ಅತ್ಯಂತ ದೊಡ್ಡ ನಿರ್ಧಾರವಾಗಿರುತ್ತದೆ. ಆದ್ದರಿಂದ, ಸಂಪೂರ್ಣವಾಗಿ ತಿಳಿದುಕೊಂಡ ಬಳಿಕವಷ್ಟೇ ಪಾಲಿಸಿಯನ್ನು ಆಯ್ದುಕೊಳ್ಳಿ.

ಐಆರ್​ಡಿಎಐ ಮಾಹಿತಿ ತಿಳಿಯಿರಿ:ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (IRDAI) ನಿಯಮಗಳ ಪ್ರಕಾರ, ಪ್ರತಿ ವಿಮಾ ಕಂಪನಿಯು ಕಾಲಕಾಲಕ್ಕೆ ತನ್ನ ಕ್ಲೈಮ್ ಇತ್ಯರ್ಥ ವಿವರಗಳನ್ನು ಬಹಿರಂಗಪಡಿಸುತ್ತದೆ. ಈ ವರದಿಗಳನ್ನು ಗಮಿಸಿದರೆ, ಕಂಪನಿಯ ವಹಿವಾಟಿನ ಬಗ್ಗೆ ತಿಳಿದುಕೊಳ್ಳಬಹುದು. ಬಳಿಕ ನೀವು ವಿಮೆ ತೆಗೆದುಕೊಳ್ಳಲು ಬಯಸುವ ಕಂಒನಿಯ ಬಗ್ಗೆ ಅಗತ್ಯವಿರುವಷ್ಟು ಮಾಹಿತಿಯನ್ನು ಸಂಗ್ರಹಿಸಿ, ಬಳಿಕ ಪಾಲಿಸಿಯನ್ನು ತೆಗೆದುಕೊಳ್ಳಿ. ವಿಮಾ ಕಂಪನಿಯು ನೀಡುವ ಜಾಹೀರಾತುಗಳಲ್ಲಿನ ಮಾಹಿತಿಯನ್ನು ನಾವು ಗಮನಿಸಿ ಅರ್ಥ ಮಾಡಿಕೊಳ್ಳಬೇಕು. ಇದೇ ಸಂಪೂರ್ಣವಲ್ಲ. ಅಗತ್ಯವಿದ್ದರೆ ತಜ್ಞರ ಸಲಹೆಯನ್ನು ಪಡೆಯಿರಿ. ಸಂಪೂರ್ಣ ವಿವರಗಳಿಗಾಗಿ ವಿಮಾ ಕಂಪನಿಯ ಸೇವಾ ಕೇಂದ್ರ ಅಥವಾ ಶಾಖೆಗಳನ್ನು ಸಂಪರ್ಕಿಸಿ.

ಪಾಲಿಸಿಯ ಪ್ರಯೋಜನಗಳು:ದತ್ತಿ, ಮನಿ ಬ್ಯಾಕ್, ಯುಲಿಪ್ (ಯುನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್) ಇತ್ಯಾದಿಗಳಿಗೆ ಸಂಬಂಧಿಸಿದ ಪಾಲಿಸಿಗಳಿಗೆ ಕ್ಲೈಮ್ ಪಾವತಿಗಳ ಅನುಪಾತವನ್ನು ಪರಿಶೀಲಿಸಬೇಕು. ಆಗ ಮಾತ್ರ ನಾವು ವಿಮಾದಾರರ ಹಿನ್ನೆಲೆಯನ್ನು ತಿಳಿದುಕೊಳ್ಳಲು ಸಾಧ್ಯ. ಸರಿಯಾದ ಕಂಪನಿಯನ್ನು ಆಯ್ಕೆ ಮಾಡಲೂ ಇದು ನೆರವಾಗುತ್ತದೆ. ವರ್ಷಾಶನ, ಹೊಣೆಗಾರಿಕೆ, ಪ್ರೀಮಿಯಂ ಪಾವತಿಸುವ ಸಾಮರ್ಥ್ಯ ಮತ್ತು ಪಾಲಿಸಿ ಒದಗಿಸುವ ಪ್ರಯೋಜನಗಳು ಟರ್ಮ್ ಪಾಲಿಸಿಗಳನ್ನು ತೆಗೆದುಕೊಳ್ಳುವಾಗ ಪ್ರಮುಖ ಅಂಶಗಳಾಗಿವೆ.

ಯಾವುದೇ ಮಾಹಿತಿ ಮುಚ್ಚಿಡಬೇಡಿ:ಪಾಲಿಸಿಯನ್ನು ತೆಗೆದುಕೊಳ್ಳುವಾಗ ಯಾವುದೇ ಮುಚ್ಚುಮರೆ ಇಲ್ಲದೆ ನಿಮ್ಮ ಆರೋಗ್ಯ ಮತ್ತು ಹಣಕಾಸಿನ ವಿವರಗಳ ಬಗ್ಗೆ ವಿಮಾ ಕಂಪನಿಗೆ ತಿಳಿಸಿ. ಅಸ್ತಿತ್ವದಲ್ಲಿರುವ ಪಾಲಿಸಿಗಳ ವಿವರಗಳನ್ನೂ ಸಹ ಉಲ್ಲೇಖಿಸಬೇಕು. ಆಗ ಪಾಲಿಸಿ ಕ್ಲೈಮ್​ನಲ್ಲಿ ಯಾವುದೇ ಸಮಸ್ಯೆ ಬರುವುದಿಲ್ಲ.

ಓದಿ:RBI ಎಂಪಿಸಿ ಸಭೆ ಆರಂಭ: ಫೆ.8 ರಂದು ಹೊಸ ರೆಪೋ ದರ ಘೋಷಣೆ ಸಾಧ್ಯತೆ

ABOUT THE AUTHOR

...view details