ನವದೆಹಲಿ:ವೇತನದಾರರು ಪಿಎಫ್ ಬದಲಾಗಿ ಪಡೆಯುವ ಟಿಡಿಎಸ್ ಮೊತ್ತದಲ್ಲಿ ಇಂತಿಷ್ಟನ್ನು ತೆರಿಗೆ ರೂಪದಲ್ಲಿ ಕಟ್ಟಬೇಕು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಸುತ್ತೋಲೆ ಹೊರಡಿಸಿದೆ. ಕಳೆದ ವಾರ ಸಿಬಿಡಿಟಿ ಈ ಆದೇಶವನ್ನು ಜಾರಿ ಮಾಡಿದೆ.
ಪ್ರಸಕ್ತ ಹಣಕಾಸು ವರ್ಷಕ್ಕೆ ಅನ್ವಯಿಸುವಂತೆ ವೇತನದಾರರು ಪಡೆಯುವ ಟಿಡಿಎಸ್ ಹಣದಲ್ಲಿ ಆದಾಯ ತೆರಿಗೆಯನ್ನು ಕಡಿತ ಮಾಡಬೇಕು. ಜಾರಿಯಲ್ಲಿರುವ ದರಗಳ ಆಧಾರದ ಮೇಲೆ ಮತ್ತು ವೇತನದಾರನ ವೇತನದ ಆದಾಯದ ಸರಾಸರಿ ಲೆಕ್ಕ ಹಾಕಿ ಟ್ಯಾಕ್ಸ್ ಕಟ್ ಮಾಡಬೇಕು ಎಂದು ಸುತ್ತೋಲೆ ಹೇಳಿದೆ.