ಹೈದರಾಬಾದ್:ಕ್ರೆಡಿಟ್ ಕಾರ್ಡ್‌ಗಳನ್ನು ನೀಡುವಾಗ ಬ್ಯಾಂಕ್‌ಗಳು ನಾನಾ ಆಫರ್ಗಳನ್ನು ನೀಡುತ್ತೇವೆ ಎಂದು ಹೇಳುತ್ತವೆ. ಇದೇ ವೇಳೆ ಅವು ಷರತ್ತುಗಳು ಅನ್ವಯ ಎಂಬುದನ್ನು ಹೇಳಿರುತ್ತವೆ. ಹೀಗಾಗಿ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳುವಾಗ ಷರತ್ತುಗಳ ಬಗ್ಗೆ ಹಾಗೂ ಕಾರ್ಡ್ನ ನೀತಿ - ನಿಯಮಗಳು ಹಾಗೂ ಇನ್ನಿತರ ವಿನಾಯಿತಿ ಹಾಗೂ ಶುಲ್ಕಗಳ ಬಗ್ಗೆ ತಿಳಿದುಕೊಳ್ಳಬೇಕಾಗಿರುವುದು ಅಗತ್ಯ ಹಾಗೂ ಎಚ್ಚರಿಕೆ ವಹಿಸಬೇಕಾಗಿರುವುದು ಇನ್ನೂ ಅಗತ್ಯವಾಗಿದೆ.
ಬ್ಯಾಂಕ್‌ಗಳು ಗ್ರಾಹಕರಿಂದ ವಾರ್ಷಿಕ ಮತ್ತು ಇತರ ಶುಲ್ಕವನ್ನು ತೆಗೆದುಕೊಳ್ಳುತ್ತವೆ. ಕಳೆದು ಹೋದ ಕಾರ್ಡ್ ಬದಲಿಗೆ ಹೊಸ ಕಾರ್ಡ್ ನೀಡಲು ಪ್ರತ್ಯೇಕ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ನಾವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ಅಂತಹ ಎಲ್ಲ ಶುಲ್ಕಗಳು ನಮಗೆ ದೊಡ್ಡ ಹೊರೆಯಾಗುತ್ತವೆ. ಕಾರ್ಡ್‌ಗಳನ್ನು ತೆಗೆದುಕೊಳ್ಳುವವರು ಶೂನ್ಯ ಅಥವಾ ಕಡಿಮೆ ಶುಲ್ಕದೊಂದಿಗೆ ಬರುವ ಕಾರ್ಡ್‌ಗಳನ್ನು ಆರಿಸಿಕೊಳ್ಳಬೇಕು.
ಸಕಾಲಕ್ಕೆ ಬಿಲ್ ಪಾವತಿಸಿ, ಇಲ್ಲದಿದ್ದರೆ ದಂಡ ಗ್ಯಾರಂಟಿ:ಕಾರ್ಡ್ ಹೊಂದಿರುವವರು ಹೆಚ್ಚಿನ ಬಡ್ಡಿಯನ್ನು ತಪ್ಪಿಸಲು, ನಿಮ್ಮ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಸಕಾಲಕ್ಕೆ ಪಾವತಿಸಬೇಕು. ಈ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಸಾಮಾನ್ಯವಾಗಿ, ಬಡ್ಡಿ ರಹಿತ ಕ್ರೆಡಿಟ್ ಅನ್ನು 50 ದಿನಗಳವರೆಗೆ ನೀಡಲಾಗುತ್ತದೆ. ನಿಮ್ಮ ಕಾರ್ಡ್ ಬಿಲ್ಲಿಂಗ್ ಸೈಕಲ್ ಆಧರಿಸಿ ಇದನ್ನು ನಿರ್ಧರಿಸಲಾಗುತ್ತದೆ.
ಸಂಪೂರ್ಣ ಬಿಲ್ ಪಾವತಿಸಬೇಕು. ಯಾವುದೇ ವಿಳಂಬವು ಬಡ್ಡಿ ಹಾಗೂ ದಂಡವನ್ನು ಹೊಂದಿರುತ್ತದೆ. ಪ್ರತಿ ಕ್ರೆಡಿಟ್ ಕಾರ್ಡ್ ಗರಿಷ್ಠ ಕ್ರೆಡಿಟ್ ಮಿತಿಯನ್ನು ಹೊಂದಿದೆ. ನಿರ್ದಿಷ್ಟ ಬಿಲ್ಲಿಂಗ್ ಅವಧಿಯೊಳಗೆ ನೀವು ಬಿಲ್ ಪಾವತಿ ಮಾಡಬೇಕು ಹಾಗೂ ಖರೀದಿ ಬಗ್ಗೆ ಯೋಚಿಸಿ ನಿರ್ಧಾರ ಕೈಗೊಳ್ಳಬೇಕು. ಪಾವತಿ ಇತಿಹಾಸ, ಆದಾಯ, ಕ್ರೆಡಿಟ್ ಬಳಕೆಯ ಅನುಪಾತ, ಇತ್ಯಾದಿಗಳ ಆಧಾರದ ಮೇಲೆ ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧಾರವಾಗುತ್ತದೆ. ಹೊಸ ಕಾರ್ಡ್ ಹೊಂದಿರುವವರು ಸಾಮಾನ್ಯವಾಗಿ ಕಡಿಮೆ ಮಿತಿಯನ್ನು ಹೊಂದಿರುತ್ತಾರೆ. ಅವರು ನಿಯಮಿತವಾಗಿ ಬಿಲ್‌ಗಳನ್ನು ಪಾವತಿಸುವುದರಿಂದ, ಗರಿಷ್ಠ ಕ್ರೆಡಿಟ್ ಮಿತಿಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ.
ಕನಿಷ್ಠ ಬಿಲ್ ಮಾತ್ರ ಪಾವತಿ ಮಾಡದಿರಿ ಏಕೆಂದರೆ?:ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಕೆಲವರುಒಟ್ಟು ಬಿಲ್ ಅನ್ನು ಪಾವತಿಸದೇ ಕನಿಷ್ಠ ಬಿಲ್ ಪಾವತಿಸುತ್ತಾರೆ. ಹೀಗೆ ಮಾಡುವುದು ತಪ್ಪು. ನೀವು ಕನಿಷ್ಠ ಬಿಲ್ ಪಾವತಿ ಮಾಡಿದರೆ, ಅದು ನಿಮ್ಮ ಕಾರ್ಡ್ ವ್ಯವಹಾರವನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಲು ಮಾತ್ರವೇ ಸಹಾಯ ಮಾಡುತ್ತದೆ. ಆದರೆ ಉಳಿದ ಬಿಲ್ಗೆ ನೀವು ಶೇ 5 ರಷ್ಟು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.