ಹೈದರಾಬಾದ್: ರಸ್ತೆಬದಿ ಗೋಡೆಗಳಲ್ಲಿ ಅಥವಾ ವಾಹನಗಳ ಮೇಲೆ ಜಾಹೀರಾತು ಪೋಸ್ಟರ್ಗಳನ್ನು ಸಾಮಾನ್ಯವಾಗಿ ನಾವು ಪ್ರತಿದಿನ ನೋಡುತ್ತೇವೆ. ಈ ರೀತಿಯ ಕೆಲವೊಂದು ಜಾಹೀರಾತುಗಳು ಅದರಲ್ಲಿ ಪಂಚಿಂಗ್ ಲೈನ್ಗಳು, ಡೈಲಾಗ್ಗಳಿಂದಲೇ ಫೇಮಸ್ ಆಗಿರುತ್ತವೆ. ಆ ಸಾಲುಗಳನ್ನು ನೋಡಿದರೆ ಸಾಕು ಅದರ ಕಂಪನಿಯ ಹೆಸರೇ ನೆನಪಿಗೆ ಬರುವಷ್ಟು ಕ್ಯಾಚಿ ಆಗಿರುತ್ತವೆ. ಈ ಕ್ಯಾಚಿ ಡೈಲಾಗ್ಗಳ ಮೂಲಕವೇ ಕೆಲವು ಕಂಪನಿಗಳು ಗ್ರಾಹಕರನ್ನು ಸೆಳೆಯುತ್ತವೆ.
ಇನ್ನೊಂದು ನಾವು ಯಾವುದಾದರೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಿ ಮನೆಗೆ ತರುತ್ತೇವೆ. ಈ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ, ಅವುಗಳನ್ನು ಉಪಯೋಗಿಸುವುದರ ಬಗ್ಗೆ ಎಲ್ಲರಿಗೂ ಅತೀ ವಿರಳ. ವಸ್ತು ತಂದೊಡನೆ ಅದನ್ನು ಉಪಯೋಗಿಸುವುದು ಹೇಗೆ ಎನ್ನುವುದು ಗೊಂದಲವಾಗಿದ್ದರೆ ತಕ್ಷಣ ನಾವು ಅದರೊಳಗೆ ಇರುವ ಪುಟ್ಟ ಪುಸ್ತಕವನ್ನೇ(ಟೈಟಲ್ ಬುಕ್) ತೆರೆದು ನೋಡುತ್ತೇವೆ. ಕಬ್ಬಿಣದ ಕಡಲೆ ತಂತ್ರಜ್ಞಾನದ ಕುರಿತು ಸರಳವಾಗಿ ಆ ಪುಸ್ತಕದಲ್ಲಿ ಬರೆದು ವಿವರಿಸಲಾಗಿರುತ್ತದೆ.
ವಿಷಯ ತಲುಪಿಸುವುದು ಒಂದು ಕಲೆ:ಎಲೆಕ್ಟ್ರಾನಿಕ್ ವಸ್ತು ಖರೀದಿಸುವ ಒಬ್ಬ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತೆ ಸರಳವಾಗಿ, ಆಕರ್ಷವಾಗಿ ಅದನ್ನು ಬರೆಯಲಾಗಿರುತ್ತದೆ. ಅಲ್ಲಿರುವ ಸಮಫೂರ್ಣವಾದ, ಸ್ಪಷ್ಟವಾದ ವಿವರಣೆಯನ್ನು ಓದಿ ನಮ್ಮ ಅನುಮಾನಗಳನ್ನು ನಾವು ನಿವಾರಿಸಿಕೊಳ್ಳುತ್ತೇವೆ. ಈಗ ಯಾವುದೇ ವಿಷಯದ ಬಗ್ಗೆ ಆನ್‌ಲೈನ್‌ನಲ್ಲಿ ಸರ್ಚ್ ಮಾಡಿದರೆ ಕ್ಷಣ ಮಾತ್ರದಲ್ಲಿ ಮಾಹಿತಿ ಲಭ್ಯವಾಗುತ್ತದೆ. ಆದರೆ ಅದೇ ಮಾಹಿತಿಯನ್ನು ಸರಳವಾಗಿ, ಮನಮುಟ್ಟುವಂತೆ ತಲುಪಿಸುವುದು ಕೂಡ ಒಂದು ಕಲೆ.
ಈ ರೀತಿ ಸರಳವಾಗಿ ಬರೆಯುವವರು ಯಾರು ಎಂದು ಯೋಚಿಸುತ್ತಿದ್ದೀರಾ? ಅವರೇ ಕಂಟೆಂಟ್ ರೈಟರ್ಸ್. ಜಗತ್ತಿನಲ್ಲಿ ಈ ರೀತಿ ಯಾವುದೇ ವಿಷಯಗಳ ಬಗ್ಗೆ ಸರಳವಾಗಿ ಸ್ಪಷ್ಟವಾಗಿ, ವಿಸ್ತಾರವಾದ ಸುಂದರವಾದ ಭಾಷೆಯಲ್ಲಿ ಬರೆಯುವವರ ಅಗತ್ಯವಿದೆ. ಎಲ್ಲವೂ ಅಂಗೈಯಲ್ಲೇ ಸಿಗುತ್ತಿರುವ ಈ ಹೊತ್ತಿನಲ್ಲಿಯೂ ಅಂತಹ ಬರಹಗಾರರಿಗೆ ಬೇಡಿಕೆ ಹೆಚ್ಚಿದೆ.
ಒಂದು ಪೊರಕೆಯಿಂದ ಹಿಡಿದು ಚೀನಾದ ಮಹಾಗೋಡೆಯವರೆಗೂ ಯಾವುದೇ ವಸ್ತು, ವಿಷಯದ ಬಗ್ಗೆ ಆಸಕ್ತಿದಾಯಕವಾಗಿ, ಓದಲು ಖುಷಿಯಾಗುವಂತೆ ಬರೆಯುವುದು ಒಂದು ಕಲೆ. ಯಾವುದೇ ಒಂದು ಬರವಣಿಗೆ ಆಗಿದ್ದರೂ ಆದನ್ನು ಕಂಟೆಂಟ್ ರೈಟರ್ ಒಬ್ಬರು ಕುಳಿತು ಸಂಶೋಧನೆ ಮಾಡಿ ಬರೆದಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಅಂತಹ ಬರಹಗಾರರು ಉತ್ಪನ್ನ ಕಂಪನಿಗಳು, ವೆಬ್‌ಸೈಟ್‌ಗಳು, ವಿವಿಧ ರೀತಿಯ ಸಂಸ್ಥೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಪಡೆಯುತ್ತಿದ್ದಾರೆ
ಇವಿಷ್ಟೇ ಅಲ್ಲ, ಪಿಆರ್ ಡಿಪಾರ್ಟ್ಮೆಂಟ್ಗಳು, ಡಾಕ್ಯುಮೆಂಟೇಶನ್ ಅಗತ್ಯವಿರುವವರು, ಯಾವುದೇ ಕಂಪನಿಗಳಿಗೆ ಇಂತಹ ಬರಹಗಾರರು ಅಗತ್ಯ ತುಂಬಾ ಇದೆ. ಅದರಲ್ಲೂ ಪತ್ರಿಕೆಗಳು, ಟಿವಿ ಚಾನೆಲ್‌ಗಳು ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಬರೆಯಲು ತಿಳಿದಿರುವವರಿಗೆ ಈ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ಅದಕ್ಕಾಗಿಯೇ ಉದ್ಯೋಗಾಕಾಂಕ್ಷಿಗಳು ಇದನ್ನು ವೃತ್ತಿಯ ಒಂದು ಆಯ್ಕೆಯಾಗಿಯೂ ಪರಿಗಣಿಸಬಹುದು.
ಕಂಟೆಂಟ್ ರೈಟರ್ ಆಗುವುದು ಹೇಗೆ?:ಕಂಟೆಂಟ್ ರೈಟಿಂಗ್ನ ವಿಶೇಷತೆಯೆಂದರೆ ಈ ಕ್ಷೇತ್ರಕ್ಕೆ ಬರಲು ಇಂತಹದ್ದೇ ಪದವಿಗಳನ್ನು ಅಧ್ಯಯನ ಮಾಡಿರಬೇಕು ಎಂದಿಲ್ಲ. ನಿಮ್ಮ ವಿದ್ಯಾರ್ಹತೆ ಏನೇ ಇರಲಿ. ಈ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ಪ್ರೂವ್ ಮಾಡಲು ಅವಕಾಶವಿದೆ. ಆದರೆ ಮಾಡಬೇಕಾಗಿರುವ ಮೊದಲ ವಿಷಯವೆಂದರೆ.. ಆದಷ್ಟು ಹೆಚ್ಚು ಹೆಚ್ಚು ಓದಬೇಕು. ನೀವು ಎಷ್ಟು ಹೆಚ್ಚು ಓದುತ್ತೀರೋ ಅಷ್ಟು ಚೆನ್ನಾಗಿ ಬರೆಯುತ್ತೀರಿ. ನೀವು ಬರೆಯಲು ಬಯಸುವ ಭಾಷೆಯಲ್ಲಿ ಸಾಹಿತ್ಯವನ್ನು ಓದಲು ಪ್ರಯತ್ನಿಸಿ. ಪ್ರಸಿದ್ಧ ಲೇಖಕರು ಬರೆದ ವಿವಿಧ ರೀತಿಯ ಸಾಹಿತ್ಯ ಪುಸ್ತಕಗಳನ್ನು ಓದುವುದರಿಂದ ಅವರ ತಿಳಿವಳಿಕೆ ಹೆಚ್ಚಾಗುತ್ತದೆ. ಆಂತರಿಕವಾಗಿ ನಮ್ಮ ಬರವಣಿಗೆಯ ಶೈಲಿಯನ್ನು ನಮ್ಮ ಓದು ಸುಧಾರಿಸುತ್ತದೆ. ಭಾಷೆಯಲ್ಲಿ ಹಿಡಿತ ಸಿಕ್ಕಿದರೆ ಯಾವುದನ್ನಾದರೂ ಸರಳವಾಗಿ, ಅಸಾಧಾರಣವಾಗಿ ಹೇಳುವ ಪ್ರತಿಭೆ ನಿಮ್ಮದಾಗುತ್ತದೆ!
ಹೆಚ್ಚು ಹೆಚ್ಚು ಓದುತ್ತಿದ್ದಂತೆಯೇ ಸ್ವಂತ ಬರೆಯುವುದನ್ನು ಅಭ್ಯಾಸ ಮಾಡಿ. ನಮ್ಮ ಆಯ್ಕೆಯ ವಿಷಯವನ್ನು ಆರಿಸಿಕೊಂಡು ಅದನ್ನು ಓದುಗರಿಗೆ ಪ್ರಸ್ತುತಪಡಿಸಲು ಸಂಪೂರ್ಣ ವಿಶ್ಲೇಷಣಾತ್ಮಕ ರೀತಿಯಲ್ಲಿ ಬರೆಯಬಹುದೇ ಎಂಬುದನ್ನು ನೋಡಿ, ಪ್ರಯತ್ನ ಪಡಿ. ಸಾಧ್ಯವಾದರೆ, ನೀವು ಬರೆದಿರುವುದನ್ನು ಇತರ ನಿಮ್ಮ ಸ್ನೇಹಿತರಿಗೆ ಅಥವಾ ಅದೇ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡುತ್ತಿರುವ ನಿಮ್ಮ ಸ್ನೇಹಿತರಿಗೆ ತೋರಿಸಿ ಮತ್ತು ಅವರ ಅಭಿಪ್ರಾಯಗಳನ್ನು ಕೇಳಿ. ತಪ್ಪುಗಳನ್ನು ಸರಿಪಡಿಸಿಕೊಂಡು ಹೊಸತನದೊಂದಿಗೆ ಬರೆಯಲು ಪ್ರಯತ್ನಿಸಿ