ಕರ್ನಾಟಕ

karnataka

ETV Bharat / business

ಎರಡು ಹೊಸ ಥರ್ಮಲ್ ವಿದ್ಯುತ್ ಸ್ಥಾವರಗಳ ಆರಂಭಕ್ಕೆ ಸಂಪುಟ ಸಮಿತಿ ಅನುಮೋದನೆ - ಥರ್ಮಲ್ ವಿದ್ಯುತ್ ಸ್ಥಾವರ

ಕೋಲ್ ಇಂಡಿಯಾ ಲಿಮಿಟೆಡ್​​​ನ ಎರಡು ಥರ್ಮಲ್ ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆಗೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಅನುಮೋದನೆ ನೀಡಿದೆ.

Cabinet gives go-ahead for two CIL power projects worth Rs 21,547 cr
Cabinet gives go-ahead for two CIL power projects worth Rs 21,547 cr

By ETV Bharat Karnataka Team

Published : Jan 18, 2024, 6:49 PM IST

ನವದೆಹಲಿ: ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)ನ ಎರಡು ಪಿಟ್​ಹೆಡ್​ ಥರ್ಮಲ್ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸುವ ಎರಡು ಪ್ರಸ್ತಾಪಗಳಿಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಗುರುವಾರ ಅನುಮೋದನೆ ನೀಡಿದೆ. ಕೋಲ್ ಇಂಡಿಯಾ ಲಿಮಿಟೆಡ್ ತನ್ನ ಅಂಗಸಂಸ್ಥೆಗಳ ಮೂಲಕ ಇವುಗಳಲ್ಲಿ ಒಟ್ಟು 21,547 ಕೋಟಿ ರೂ. ಹೂಡಿಕೆ ಮಾಡಲಿದೆ.

ಸಿಐಎಲ್​ನ ಅಂಗಸಂಸ್ಥೆಗಳಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್​ ಲಿಮಿಟೆಡ್ (ಎಸ್ಇಸಿಎಲ್) ಮತ್ತು ಮಹಾನದಿ ಕೋಲ್​ ಫೀಲ್ಡ್ಸ್​ ಲಿಮಿಟೆಡ್ (ಎಂಸಿಎಲ್) ಗಳನ್ನು ಈ ಪ್ರಸ್ತಾಪ ಒಳಗೊಂಡಿದೆ. ಎಸ್ಇಸಿಎಲ್, ಎಂಸಿಎಲ್ ಮತ್ತು ಸಿಐಎಲ್​ನ ಈಕ್ವಿಟಿ ಹೂಡಿಕೆಯ ಪ್ರಸ್ತಾಪವನ್ನು ಸಿಸಿಇಎ ಅನುಮೋದಿಸಿದೆ.

ಎಸ್ಇಸಿಎಲ್ ಸರ್ಕಾರಿ ಸ್ವಾಮ್ಯದ ಮಧ್ಯಪ್ರದೇಶ ಪವರ್ ಜನರೇಷನ್ ಕಂಪನಿ ಲಿಮಿಟೆಡ್ (ಎಂಪಿಪಿಜಿಸಿಎಲ್) ಯೊಂದಿಗೆ ಜಂಟಿ ಉದ್ಯಮದ ಮೂಲಕ 1×660 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲಿದ್ದು, ಮಹಾನದಿ ಕೋಲ್​ಫೀಲ್ಡ್ಸ್​ ಲಿಮಿಟೆಡ್ (ಎಂಸಿಎಲ್) ತನ್ನ ಅಂಗಸಂಸ್ಥೆ ಮಹಾನದಿ ಬೇಸಿನ್ ಪವರ್ ಲಿಮಿಟೆಡ್ (ಎಂಬಿಪಿಎಲ್) ಮೂಲಕ 2×800 ಮೆಗಾವ್ಯಾಟ್ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸಲು ಪ್ರಸ್ತಾಪಿಸಿದೆ.

ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 1×660 ಮೆಗಾವ್ಯಾಟ್ ಸೂಪರ್ ಕ್ರಿಟಿಕಲ್ ಥರ್ಮಲ್ ವಿದ್ಯುತ್ ಸ್ಥಾವರಕ್ಕಾಗಿ ಅಂದಾಜು 5,600 ಕೋಟಿ ರೂ.ಗಳ ಯೋಜನಾ ಕ್ಯಾಪೆಕ್ಸ್ (±20 ಪ್ರತಿಶತ) ಹೊಂದಿರುವ ಜಂಟಿ ಉದ್ಯಮದ ಕಂಪನಿಯಲ್ಲಿ 70:30 ರ ಸಾಲ-ಈಕ್ವಿಟಿ ಅನುಪಾತ ಮತ್ತು 49 ಪ್ರತಿಶತದಷ್ಟು ಈಕ್ವಿಟಿ ಹೂಡಿಕೆಯನ್ನು ಪರಿಗಣಿಸಿ ಎಸ್ಇಸಿಎಲ್ ಪ್ರಸ್ತಾಪವು ಎಸ್ಇಸಿಎಲ್​ನಿಂದ 823 ಕೋಟಿ ರೂ.ಗಳ (± 20 ಪ್ರತಿಶತ) ಈಕ್ವಿಟಿ ಬಂಡವಾಳವನ್ನು ಒಳಗೊಂಡಿದೆ.

ಒಡಿಶಾದ ಸುಂದರ್ ಗಢ್ ಜಿಲ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ 2×800 ಮೆಗಾವ್ಯಾಟ್ ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್​ಗಾಗಿ ಎಂಸಿಎಲ್ 4,784 ಕೋಟಿ ರೂ.ಗಳ ಈಕ್ವಿಟಿ ಬಂಡವಾಳ (20 ಪ್ರತಿಶತ) ಹೂಡಿಕೆಯನ್ನು ಒಳಗೊಂಡಿದೆ.

ಎಸ್ಇಸಿಎಲ್-ಎಂಪಿಪಿಜಿಸಿಎಲ್​ನ ಜಂಟಿ ಉದ್ಯಮದಲ್ಲಿ (823 ಕೋಟಿ ರೂ. 20 ಪ್ರತಿಶತ) ಸಿಐಎಲ್ ತನ್ನ ನಿವ್ವಳ ಮೌಲ್ಯದ 30 ಪ್ರತಿಶತಕ್ಕಿಂತ ಹೆಚ್ಚಿನ ಈಕ್ವಿಟಿ ಹೂಡಿಕೆಗೆ ಮತ್ತು ಎಂಸಿಎಲ್​ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಎಂಬಿಪಿಎಲ್​ನಲ್ಲಿ (4,784 ಕೋಟಿ ರೂ. ± 20 ಪ್ರತಿಶತ) ಈಕ್ವಿಟಿ ಹೂಡಿಕೆಗೆ ಸಿಸಿಇಎ ಅನುಮೋದನೆ ನೀಡಿದೆ.

ಇದನ್ನೂ ಓದಿ :ಚೀನಾದಲ್ಲಿನ ಕಾರ್ಖಾನೆಯನ್ನು $221 ಮಿಲಿಯನ್​ಗೆ ಮಾರಾಟ ಮಾಡಿದ ಹ್ಯುಂಡೈ

ABOUT THE AUTHOR

...view details