ನೀವು ತೆರಿಗೆ ಪಾವತಿದಾರರಾಗಿದ್ದು, ನಿಮ್ಮ ಆದಾಯದಿಂದ ಅಗತ್ಯಕ್ಕಿಂತ ಹೆಚ್ಚು ಟಿಡಿಎಸ್ ಕಡಿತವಾಗಿದ್ದಲ್ಲಿ, ಆದಾಯ ತೆರಿಗೆ ರಿಟರ್ನ್ ಫೈಲ್ ಮಾಡುವಾಗ ಅದನ್ನು ಹಿಂಪಡೆಯಲು ಕ್ಲೇಮ್ ಸಲ್ಲಿಸಬಹುದು.
ಸಂಬಳ, ಬಾಡಿಗೆ ಆದಾಯ, ಹೂಡಿಕೆಯಿಂದ ಬಂದ ಆದಾಯ ಹಾಗೂ ಇಂಥ ಇನ್ನಿತರ ಆದಾಯಗಳಿಂದ ಟಿಡಿಎಸ್ ಕಡಿತ ಮಾಡಲಾಗುತ್ತದೆ. ಆದರೆ, ಒಂದೊಮ್ಮೆ ತೆರಿಗೆದಾರರ ಬಾಧ್ಯತೆಗಿಂತ ಹೆಚ್ಚು ಕಡಿತ ಆದಲ್ಲಿ, ಆ ವ್ಯತ್ಯಾಸದ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ನೀವೂ ಟಿಡಿಎಸ್ ಮರುಪಾವತಿ ಪಡೆಯಲು ಅರ್ಹರಾಗಿದ್ದರೆ, ಟಿಡಿಎಸ್ ಹೇಗೆ ಕ್ಲೇಮ್ ಮಾಡುವುದು ಎಂಬುದನ್ನು ತಿಳಿಯೋಣ ಬನ್ನಿ.
ಟಿಡಿಎಸ್ ರಿಫಂಡ್ ಕ್ಲೇಮ್ ಮಾಡುವುದು ಹೇಗೆ?ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವಾಗ ಅದರಲ್ಲಿ ಟಿಡಿಎಸ್ ಕಡಿತವನ್ನು ಉಲ್ಲೇಖಿಸುವ ಮೂಲಕ ತೆರಿಗೆದಾರರು ತಮ್ಮ ಟಿಡಿಎಸ್ ರಿಫಂಡ್ ಕ್ಲೇಮ್ ಮಾಡಬಹುದು. ಕ್ಲೇಮ್ ಪರಿಶೀಲನೆಯ ನಂತರ ಆದಾಯ ತೆರಿಗೆ ಇಲಾಖೆಯು ಹೆಚ್ಚುವರಿ ಟಿಡಿಎಸ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತದೆ. ಯಾವುದೇ ವಿಳಂಬ ಶುಲ್ಕ ಅಥವಾ ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.
ನಿಮ್ಮ ಟಿಡಿಎಸ್ ಕ್ಲೇಮ್ ಪಡೆಯುವ ಇನ್ನೊಂದು ವಿಧಾನವೆಂದರೆ, ಅಗತ್ಯ ಮಾಹಿತಿ ಮತ್ತು ದಾಖಲೆಗಳೊಂದಿಗೆ ನಿಮ್ಮ ಬ್ಯಾಂಕ್‌ಗೆ ಫಾರ್ಮ್ 15G ಅನ್ನು ಸಲ್ಲಿಸುವುದು. ಸಾಲದಾತನು ಸಾಮಾನ್ಯವಾಗಿ ಟಿಡಿಎಸ್ ಅನ್ನು ಆನ್‌ಲೈನ್‌ನಲ್ಲಿ ಸಲ್ಲಿಸುತ್ತಾನೆ ಮತ್ತು ವಾರ್ಷಿಕ ಹಣಕಾಸು ಘೋಷಣೆಯ ಸಮಯದಲ್ಲಿ ಮರುಪಾವತಿಯ ವಿನಂತಿ ಸಲ್ಲಿಸಬಹುದು.
ಟಿಡಿಎಸ್ ಮರುಪಾವತಿ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು
- ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್‌ಗೆ ಹೋಗಿ
- ಅಗತ್ಯವಿರುವ ಮಾಹಿತಿಗಳನ್ನು ಸಲ್ಲಿಸುವ ಮೂಲಕ ನಿಮ್ಮ ಖಾತೆಗೆ ಸೈನ್ ಇನ್ ಮಾಡಿ
- ಡ್ರಾಪ್-ಡೌನ್ ಮೆನುವಿನಿಂದ "View Return / Forms" ಆಯ್ಕೆಮಾಡಿ
- ಡ್ರಾಪ್-ಡೌನ್ ಮೆನುವಿನಿಂದ "Income Tax Returns" ಆಯ್ಕೆಮಾಡಿ
- ನಂತರ ಸಂಬಂಧಿತ ಮೌಲ್ಯಮಾಪನ ವರ್ಷವನ್ನು ನಮೂದಿಸಿ ಮತ್ತು submit ಕ್ಲಿಕ್ ಮಾಡಿ
- ಅಂತಿಮವಾಗಿ, ನಿಮ್ಮ ವಿನಂತಿಯ ಸ್ಥಿತಿಯನ್ನು ವೀಕ್ಷಿಸಲು ಡ್ರಾಪ್-ಡೌನ್ ಮೆನುವಿನಿಂದ acknowledgement number ಆಯ್ಕೆಮಾಡಿ
NSDL ವೆಬ್‌ಸೈಟ್‌ನಲ್ಲಿರುವ ಮರುಪಾವತಿ ಟ್ರ್ಯಾಕಿಂಗ್ ಪೇಜ್ ಮೂಲಕ ಕೂಡ ತೆರಿಗೆದಾರರು ತಮ್ಮ ಟಿಡಿಎಸ್ ಮರುಪಾವತಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು. ಇಲ್ಲಿ, ವ್ಯಕ್ತಿಯು ತಾನು ಮರುಪಾವತಿ ಕ್ಲೇಮ್ ಮಾಡಿರುವ ಅಸೆಸ್ಮೆಂಟ್ ಮತ್ತು ಪ್ಯಾನ್ ವಿವರಗಳನ್ನು ಸಲ್ಲಿಸಬೇಕು.
ಆದಾಯ ತೆರಿಗೆ ಇಲಾಖೆಯಿಂದ ಅನುಮೋದನೆಗೊಳಪಟ್ಟ ನಂತರ ಟಿಡಿಎಸ್ ರಿಫಂಡ್ ನಿಮಗೆ ಬರಲು ಕೆಲ ತಿಂಗಳು ತೆಗೆದುಕೊಳ್ಳುತ್ತದೆ. ಹಣಕಾಸು ವರ್ಷವೊಂದರಲ್ಲಿ ಟಿಡಿಎಸ್ ಒಟ್ಟಾರೆ ತೆರಿಗೆ ಮೊತ್ತಕ್ಕಿಂತಲೂ ಹೆಚ್ಚಾಗಿದ್ದಲ್ಲಿ, ಆ ಮೊತ್ತಕ್ಕೆ ವಾರ್ಷಿಕ ಶೇ 10 ರಂತೆ ಬಡ್ಡಿ ನೀಡಲಾಗುತ್ತದೆ.