ಮುಂಬೈ:ತೆರಿಗೆ ಇಳಿಕೆ, ಅಭಿವೃದ್ಧಿ ಯೋಜನೆಗಳಿಗೆ ಭರಪೂರ ಅನುದಾನ ನೀಡಿದ ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಎಫೆಕ್ಟ್ನಿಂದಾಗಿ ಮುಂಬೈ ಷೇರುಪೇಟೆ ದಿಢೀರ್ ಏರಿಕೆ ಕಂಡಿದೆ. ಸೆನ್ಸೆಕ್ಸ್ನಲ್ಲಿ ಗೂಳಿ ಓಟ ಮುಂದುವರಿಸಿದೆ.
ಬಜೆಟ್ ಆರಂಭಕ್ಕೂ ಮೊದಲೇ 500 ಪಾಯಿಂಟ್ಸ್ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದ ಷೇರುಪೇಟೆ ಕೇಂದ್ರದ ಭರ್ಜರಿ ಕೊಡುಗೆಗಳಿಂದ ಇದೀಗ 1172.64 ರಷ್ಟು ಹೆಚ್ಚಿದೆ. ಪ್ರಸ್ತುತ 60,772.54 ರಲ್ಲಿ ವಹಿವಾಟು ನಡೆಸುತ್ತಿದೆ.
ನಿಫ್ಟಿ ಬ್ಯಾಂಕ್, ಹಣಕಾಸು ಸೇವೆಗಳು ಮತ್ತು ಖಾಸಗಿ ಬ್ಯಾಂಕ್ ಹೆಚ್ಚು ಏರಿಕೆ ಕಂಡಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ನಲ್ಲಿ 2023- 24 ರಲ್ಲಿ ಬಂಡವಾಳ ವೆಚ್ಚವು ಶೇ.33 ರಿಂದ 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ. ಇದು ಜಿಡಿಪಿಯ ಶೇ.3.3 ಆಗಿರುತ್ತದೆ.
ಓದಿ:Union Budget 2023: ಹಲವರಿಗೆ ಸಿಹಿ, ಕೆಲವರಿಗೆ ಕಹಿ.. ಯಾವುದು ಅಗ್ಗ? ಯಾವುದು ದುಬಾರಿ? ಇಂದಿನ ಬಜೆಟ್ನ ಪ್ರಮುಖ ಅಂಶ