ಕರ್ನಾಟಕ

karnataka

By

Published : Jun 16, 2023, 7:36 AM IST

ETV Bharat / business

ಬಾಂಡ್​​ಗಳಿಂದ ನೀವು ತಿಂಗಳ ಆದಾಯವನ್ನೂ ಗಳಿಸಬಹುದು!.. ಬಾಂಡ್​​ಗಳ ಸಾಧಕ -ಬಾಧಕಗಳೇನು?

ಪ್ರತಿ ತಿಂಗಳು ಬಡ್ಡಿ ರೂಪದಲ್ಲಿ ಆದಾಯ ಪಡೆಯಲು ಬಯಸುವವರಿಗೆ ಬಾಂಡ್‌ಗಳು ಉತ್ತಮ ಆಯ್ಕೆಯಾಗಿದೆ. ಆದರೆ ಇವುಗಳ ಸಾಧಕ -ಬಾಧಕಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ

Bonds, a best investment plan for monthly income
ಬಾಂಡ್​​ಗಳಿಂದ ನೀವು ತಿಂಗಳ ಆದಾಯವನ್ನೂ ಗಳಿಸಬಹುದು!.. ಬಾಂಡ್​​ಗಳ ಸಾಧಕ -ಬಾಧಕಗಳೇನು?

ಹೈದರಾಬಾದ್: ಸರ್ಕಾರಗಳು ಮತ್ತು ನಿಗಮಗಳು ತಮ್ಮ ನಗದು ಅಗತ್ಯಗಳಿಗಾಗಿ ಜನರಿಂದ ಹಣವನ್ನು ಸಂಗ್ರಹಿಸಲು ಬಾಂಡ್‌ಗಳನ್ನು ಬಿಡುಗಡೆ ಮಾಡುತ್ತವೆ. ಬಾಂಡ್‌ನಲ್ಲಿ ಹೂಡಿಕೆ ಮಾಡುವುದು ಎಂದರೆ, ವಿತರಕರಿಗೆ( ಕಂಪನಿಗಳಿಗೆ) ನಿಗದಿತ ಅವಧಿಗೆ ಸಾಲವನ್ನು ನೀಡುವುದು ಎಂಬುದಾಗಿದೆ. ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ನಿಯಮಿತ ಬಡ್ಡಿಯನ್ನು ಪಾವತಿಸುವ ಮೂಲಕ ಮುಕ್ತಾಯದ ವೇಳೆ ಅಸಲು ಮೊತ್ತವನ್ನು ಹಿಂತಿರುಗಿಸಲಾಗುತ್ತದೆ. ನಿಮ್ಮ ಹೂಡಿಕೆ ಹಣಕ್ಕೆ ಬದಲಾಗಿ ಬಾಂಡ್ ನೀಡಲಾಗುತ್ತದೆ. ಕೆಲವು ಬಾಂಡ್‌ಗಳು ಮಾಸಿಕ ಬಡ್ಡಿಯನ್ನು ಪಾವತಿಸಿದರೆ, ಕೆಲವು ಪ್ರತಿ ಮೂರರಿಂದ ಆರು ತಿಂಗಳಿಗೊಮ್ಮೆ ಅಥವಾ ವಾರ್ಷಿಕವಾಗಿ ಬಡ್ಡಿಯನ್ನು ನೀಡುತ್ತವೆ.

ನೀವು 12 ಪ್ರತಿಶತ ಬಡ್ಡಿಯಲ್ಲಿ 10 ವರ್ಷಗಳವರೆಗೆ ರೂ 1,00,000 ಬಾಂಡ್‌ನಲ್ಲಿ ಹೂಡಿಕೆ ಮಾಡುತ್ತೀರಿ ಎಂದು ಭಾವಿಸುವುದಾದರೆ, ಆಗ ತಿಂಗಳಿಗೆ 1,000 ರೂಪಾಯಿ ಆದಾಯ ಪಡೆಯಬಹುದು. ಸ್ಥಿರವಾದ ನಗದು ಹರಿವು ಅಥವಾ ದೀರ್ಘಾವಧಿಯ ಬಡ್ಡಿ ಠೇವಣಿಗಳ ಅಗತ್ಯವಿರುವವರಿಗೆ ಬಾಂಡ್‌ಗಳು ಆಕರ್ಷಕ ಆಯ್ಕೆ ಎಂದು ಹೇಳಬಹುದು.

ನಿಯಮಿತ ಬಾಂಡ್​ : ಬಾಂಡ್‌ಗಳು ಗ್ಯಾರಂಟಿ ಬಡ್ಡಿ ದರವನ್ನು ನೀಡುತ್ತವೆ. ಇತರ ಹೂಡಿಕೆಗಳಿಗೆ ಹೋಲಿಸಿದರೆ, ಈ ಬಾಂಡ್​ಗಳಲ್ಲಿ ಹೂಡಿಕೆದಾರರು ತಮ್ಮ ಆದಾಯವನ್ನು ನಿಖರವಾಗಿ ಊಹಿಸಬಹುದು.

ರಿಸ್ಕ್​​​​ ಕಡಿಮೆ : ಷೇರುಗಳಿಗೆ ಹೋಲಿಸಿದರೆ ಬಾಂಡ್‌ಗಳು ಕಡಿಮೆ ಅನಿಶ್ಚಿತತೆಯನ್ನು ಹೊಂದಿರುತ್ತವೆ. ಮಾರುಕಟ್ಟೆ ಕುಸಿಯುತ್ತಿರುವಾಗ ಬಂಡವಾಳಕ್ಕೆ ಅಷ್ಟೊಂದು ತೊಂದರೆಯೇನು ಆಗುವುದಿಲ್ಲ.

ಸಾಧಕ-ಬಾಧಕಗಳೇನು?: ಬಾಂಡ್‌ಗಳು ನಿಗದಿತ ಅವಧಿ ಹೊಂದಿರುತ್ತವೆ. ಹೂಡಿಕೆದಾರರು ತಮ್ಮ ಆಯ್ಕೆಯ ಅವಧಿಗೆ ಇವುಗಳನ್ನು ತೆಗೆದುಕೊಳ್ಳಬಹುದು. ಹಣಕಾಸಿನ ಗುರಿಗಳನ್ನು ಅವಲಂಬಿಸಿ, ಅವಧಿಗಳನ್ನು ನಿರ್ಧರಿಸಲು ಈ ಬಾಂಡ್​ಗಳ ಸೂಕ್ತವಾಗಿವೆ.

ಎಫ್‌ಡಿಗಳಿಗೆ ಬಾಂಡ್‌ಗಳು ಪರ್ಯಾಯವೇ?:ಫಿಕ್ಸೆಡ್ ಡೆಪಾಸಿಟ್ ಎಂದರೆ ಹೆಚ್ಚಿನವರು ಹೂಡಿಕೆಯ ಗ್ಯಾರಂಟಿ ಎಂದು ಭಾವಿಸುತ್ತಾರೆ. ಮತ್ತು ಈ ಬಾಂಡ್‌ಗಳು ಇವುಗಳಿಗೆ ಪರ್ಯಾಯವೇ ಎಂಬ ಅನುಮಾನ ಮೂಡುವುದು ಸಹಜ. ಎಫ್‌ಡಿಗಳ ಹೊರತಾಗಿ ಬೇರೊಂದು ಯೋಜನೆಯನ್ನು ಆಯ್ಕೆಮಾಡುವಾಗ ಬಾಂಡ್‌ಗಳನ್ನು ಪರಿಗಣಿಸಬಹುದು.

ಪ್ರತಿ ತಿಂಗಳು ಆದಾಯವನ್ನು ಪಡೆಯಲು ಬಯಸುವವರಿಗೆ ಬಾಂಡ್‌ಗಳು ಉತ್ತಮ ಆಯ್ಕೆಯಾಗಿದೆ. ಬಾಂಡ್‌ಗಳು ಸಾಮಾನ್ಯವಾಗಿ ಸ್ಥಿರ ಠೇವಣಿಗಳಿಗಿಂತ ಹೆಚ್ಚಿನ ಬಡ್ಡಿದರವನ್ನು ಪಾವತಿಸುತ್ತವೆ. ನಿಮ್ಮ ಹೂಡಿಕೆಯ ಅವಧಿಗೆ ಅನುಗುಣವಾಗಿ ನೀವು ಮುಕ್ತಾಯ ದಿನಾಂಕಗಳನ್ನು ಆಯ್ಕೆ ಮಾಡಬಹುದು.

ವಿನಿಮಯ ಕೇಂದ್ರಗಳಲ್ಲಿ ಬಾಂಡ್‌ಗಳನ್ನು ಸುಲಭವಾಗಿ ವ್ಯಾಪಾರ ಮಾಡಬಹುದು. ಹೂಡಿಕೆದಾರರಿಗೆ ನಗದು ಅಗತ್ಯವಿದ್ದಾಗ ಮತ್ತು ತಮ್ಮ ಪೋರ್ಟ್‌ಫೋಲಿಯೊಗಳನ್ನು ಸರಿಹೊಂದಿಸಲು ಬಯಸಿದಾಗ ಇದು ಅನುಕೂಲಕರವಾಗಿರುತ್ತದೆ. ಮತ್ತೊಂದೆಡೆ, ನಿಗದಿತ ಠೇವಣಿಗಳನ್ನು ಮುಂಚಿತವಾಗಿ ಹಿಂಪಡೆದರೆ, ದಂಡ ವಿಧಿಸಲಾಗುತ್ತದೆ. ಇದು ಬದಲಾಗುತ್ತಿರುವ ಹಣಕಾಸಿನ ಅಗತ್ಯಗಳಿಗಾಗಿ ನಿಧಿಯ ಕ್ರೋಢೀಕರಣವನ್ನು ತಡೆಯುತ್ತದೆ.

ಬಾಂಡ್‌ಗಳು ನಿಶ್ಚಿತ ಲಾಕ್ - ಇನ್ ಅವಧಿಯನ್ನು ಹೊಂದಿಲ್ಲ. ಮಾರುಕಟ್ಟೆಯ ಪರಿಸ್ಥಿತಿಗಳನ್ನು ಅವಲಂಬಿಸಿ, ಹೂಡಿಕೆದಾರರು ಅವುಗಳನ್ನು ಮಾರಾಟ ಮಾಡಬಹುದು. ವಾಪಸಾತಿಗೆ ಯಾವುದೇ ದಂಡಗಳಿರುವುದಿಲ್ಲ. ಬಾಂಡ್‌ಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಕೆಲವು ಮಿತಿಗಳು ಮತ್ತು ಅನಾನುಕೂಲಗಳೂ ಇವೆ.

ಇದನ್ನು ಓದಿ:Investing in Bonds: ಬಡ್ಡಿ ರೂಪದಲ್ಲಿ ಆದಾಯ ಗಳಿಸುವವರಿಗೆ ಬಾಂಡ್​ಗಳು ಉತ್ತಮ ಆಯ್ಕೆ

ಬಡ್ಡಿ ದರ: ಬಾಂಡ್ ಬೆಲೆಗಳು ಮತ್ತು ಬಡ್ಡಿದರಗಳ ನಡುವೆ ವಿಲೋಮ ಸಂಬಂಧವಿದೆ. ಬಡ್ಡಿದರಗಳು ಏರಿದರೆ, ಬಾಂಡ್‌ಗಳ ಮೌಲ್ಯವು ಕುಸಿಯುತ್ತದೆ. ಇದು ಹೂಡಿಕೆದಾರರ ಬಂಡವಾಳದ ಮೇಲೆ ಪರಿಣಾಮ ಬೀರುತ್ತದೆ.

ಹಣದುಬ್ಬರ: ಹಣದುಬ್ಬರವು ಕಾಲಾನಂತರದಲ್ಲಿ ಹೆಚ್ಚಾಗುತ್ತಿರುತ್ತದೆ. ಸ್ಥಿರ ಬಡ್ಡಿಯನ್ನು ಹುಡುಕುತ್ತಿರುವಾಗ, ನೀಡುವ ಲಾಭವು ಕೊಳ್ಳುವ ಶಕ್ತಿಯನ್ನು ಕುಗ್ಗಿಸುತ್ತದೆ. ವಿಶೇಷವಾಗಿ ಏರುತ್ತಿರುವ ಬೆಲೆಗಳೊಂದಿಗೆ ನೀವು ಹೂಡಿಕೆ ಮಾಡಿರುವ ಬಾಂಡ್‌ಗಳು ಆದಾಯವನ್ನು ನೀಡದೇ ಇರಬಹುದು.

ನಗದೀಕರಣ: ಕೆಲವು ಬಾಂಡ್‌ಗಳನ್ನು ಎಕ್ಸ್‌ಚೇಂಜ್‌ಗಳಲ್ಲಿ ತ್ವರಿತವಾಗಿ ಮಾರಾಟ ಮಾಡಲಾಗುವುದಿಲ್ಲ. ಆಗ ನಗದಾಗಿ ಪರಿವರ್ತಿಸಲು ತೊಂದರೆಯಾಗಬಹುದು. FD ಗಳಲ್ಲಿ ಕನಿಷ್ಠ ದಂಡ ವಿಧಿಸಲಾಗುತ್ತದೆ.

ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುಲಭ: ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆ ಅಗತ್ಯ. ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು ನಾವು ಎಲ್ಲಾ ವಿವರಗಳನ್ನು ತಿಳಿದಿರಬೇಕು. ಅಗತ್ಯವಿದ್ದರೆ, ಆರ್ಥಿಕ ತಜ್ಞರ ಸಲಹೆಯನ್ನು ತೆಗೆದುಕೊಳ್ಳಿ ಎಂದು IndiaBonds.com ನ ಸಹ ಸಂಸ್ಥಾಪಕ ವಿಶಾಲ್ ಗೋಯೆಂಕಾ ಸಲಹೆ ನೀಡಿದ್ದಾರೆ.

ಇದನ್ನು ಓದಿ:ಆರೋಗ್ಯ ವಿಮೆ ಎಷ್ಟು ಅಗತ್ಯ..! ಪೂರಕ ಪಾಲಿಸಿಗಳಿಂದ ಆಗುವ ಪ್ರಯೋಜನಗಳೇನೇನು ಗೊತ್ತಾ?

ABOUT THE AUTHOR

...view details