ಕರ್ನಾಟಕ

karnataka

ETV Bharat / business

Stock Market: ನಿಫ್ಟಿ 100 & ಸೆನ್ಸೆಕ್ಸ್ 388 ಅಂಕ ಇಳಿಕೆ; ರೂಪಾಯಿ ಕುಸಿತ - ನಿಫ್ಟಿ 100 ಪಾಯಿಂಟ್

Closing Bell: ಗುರುವಾರದ ವಹಿವಾಟಿನಲ್ಲಿ ಭಾರತದ ಶೇರು ಮಾರುಕಟ್ಟೆ ಇಳಿಕೆಯಲ್ಲಿ ಕೊನೆಗೊಂಡಿದೆ.

Rupee at 10-month low
Rupee at 10-month low

By

Published : Aug 17, 2023, 6:12 PM IST

ನವದೆಹಲಿ : ಪ್ರಸ್ತುತ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ವ್ಯಾಪಿಸಿರುವ ನಕಾರಾತ್ಮಕ ಭಾವನೆಗಳ ಹಿನ್ನೆಲೆಯಲ್ಲಿ ಡಾಲರ್​ ಎದುರು ಭಾರತೀಯ ರೂಪಾಯಿ 10 ತಿಂಗಳ ಕನಿಷ್ಠವಾದ 83.14ಕ್ಕೆ ಕುಸಿದಿದೆ. ಆಗಸ್ಟ್​​ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಶೇರು ಮಾರುಕಟ್ಟೆಯಿಂದ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಹೂಡಿಕೆಯನ್ನು ಹಿಂಪಡೆದಿರುವುದು ಕೂಡ ರೂಪಾಯಿ ಮೌಲ್ಯದ ಮೇಲೆ ಪರಿಣಾಮ ಬೀರಿದೆ ಎಂದು ಮೋತಿಲಾಲ್ ಓಸ್ವಾಲ್ ಫೈನಾನ್ಷಿಯಲ್ ಸರ್ವೀಸಸ್​​ನ ರಿಟೇಲ್ ರಿಸರ್ಚ್ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ ಖೇಮ್ಕಾ ಹೇಳಿದ್ದಾರೆ.

ದುರ್ಬಲ ಜಾಗತಿಕ ಸೂಚನೆಗಳ ನಡುವೆ ದೇಶೀಯ ಶೇರುಗಳು ಒತ್ತಡಕ್ಕೆ ಸಿಲುಕುತ್ತಿವೆ. ಏತನ್ಮಧ್ಯೆ ಇಂದು ನಿಫ್ಟಿ 100 ಪಾಯಿಂಟ್ ಅಥವಾ ಶೇಕಡಾ -0.5 ನಷ್ಟದೊಂದಿಗೆ 19,365 ಮಟ್ಟದಲ್ಲಿ ಕೊನೆಗೊಂಡರೆ, ಸೆನ್ಸೆಕ್ಸ್ 388.40 ಪಾಯಿಂಟ್​ಗಳು ಅಥವಾ ಶೇಕಡಾ 0.59 ರಷ್ಟು ಕುಸಿದು 65,151.02 ಕ್ಕೆ ತಲುಪಿದೆ. ನಿಫ್ಟಿ ಮಿಡ್ ಕ್ಯಾಪ್-100 ಶೇಕಡಾ 0.2 ರಷ್ಟು ಮತ್ತು ನಿಫ್ಟಿ ಸ್ಮಾಲ್ ಕ್ಯಾಪ್-100 ಶೇಕಡಾ 0.1 ರಷ್ಟು ಏರಿಕೆಯಾಗಿವೆ. ಪಿಎಸ್​ಯು ಬ್ಯಾಂಕುಗಳು ಮತ್ತು ಗ್ರಾಹಕ ಸರಕು ಸೂಚ್ಯಂಕ ಹೊರತುಪಡಿಸಿ ಎಲ್ಲಾ ವಲಯಗಳ ಶೇರುಗಳು ಇಳಿಕೆಯಲ್ಲಿ ಕೊನೆಗೊಂಡವು.

ಉತ್ತಮ ಆರಂಭದ ನಂತರ ಮಾರುಕಟ್ಟೆಗಳು ಇಳಿಯಲಾರಂಭಿಸಿದವು. ವಹಿವಾಟಿನ ಒಂದು ಸಮಯದಲ್ಲಿ ಸೆನ್ಸೆಕ್ಸ್ 65,000 ಕ್ಕೆ ಮತ್ತು ನಿಫ್ಟಿ 19,350 ಕ್ಕಿಂತ ಕೆಳಕ್ಕೆ ಇಳಿದಿತ್ತು. ಆದಾಗ್ಯೂ, ಇಂಟ್ರಾ- ಡೇ ಚೇತರಿಕೆಯ ಮಧ್ಯೆ ದಿನದ ಕನಿಷ್ಠ ಮಟ್ಟದಿಂದ ಶೇರುಗಳು ಮೇಲೆದ್ದವು. ಐಟಿಸಿ, ಎಲ್​ಟಿಐ, ದಿವಿಸ್ ಲ್ಯಾಬ್, ಪವರ್ ಗ್ರಿಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ನಿಫ್ಟಿಯಲ್ಲಿ ಹೆಚ್ಚು ನಷ್ಟ ಅನುಭವಿಸಿದ ಪ್ರಮುಖ ಶೇರುಗಳಾದರೆ ಅದಾನಿ ಪೋರ್ಟ್ಸ್, ಟೈಟಾನ್ ಕಂಪನಿ, ಅದಾನಿ ಎಂಟರ್​ ಪ್ರೈಸಸ್​, ಬಜಾಜ್ ಆಟೋ ಮತ್ತು ಎಸ್​ಬಿಐ ಬ್ಯಾಂಕ್ ಲಾಭ ಗಳಿಸಿದವು.

ಬಿಎಸ್ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ ಕ್ಯಾಪ್​ ಸೂಚ್ಯಂಕಗಳ ಸ್ವಲ್ಪ ಏರಿಕೆಯೊಂದಿಗೆ ವಿಶಾಲ ಸೂಚ್ಯಂಕಗಳು ಮುಖ್ಯ ಸೂಚ್ಯಂಕಗಳನ್ನು ಮೀರಿಸಿದವು. ವೈಯಕ್ತಿಕ ಶೇರುಗಳ ಪೈಕಿ ಬಾಟಾ ಇಂಡಿಯಾ, ಡಾಬರ್ ಇಂಡಿಯಾ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್​​ ಶೇರುಗಳ ಮೌಲ್ಯ ಶೇಕಡಾ 200 ಕ್ಕಿಂತ ಹೆಚ್ಚು ಏರಿಕೆ ಕಂಡುಬಂದಿದೆ.

ತ್ರಿಭುವನ್ ದಾಸ್ ಭೀಮ್​ಜಿ ಜವೇರಿ, ಎಸ್ಎಂಎಲ್ ಇಸುಜು, ಸಕ್ ಸಾಫ್ಟ್, ಪ್ರಜ್ ಇಂಡಸ್ಟ್ರೀಸ್, ಪಟೇಲ್ ಎಂಜಿನಿಯರಿಂಗ್, ಲುಪಿನ್, ಜ್ಯೋತಿ ಲ್ಯಾಬ್ಸ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಐಡಿಎಫ್​ಸಿ ಫಸ್ಟ್ ಬ್ಯಾಂಕ್, ಗ್ರಾವಿಟಾ ಇಂಡಿಯಾ, ಫೋರ್ಸ್ ಮೋಟಾರ್ಸ್, ಎಸ್ಕಾರ್ಟ್ಸ್ ಕುಬೋಟಾ, ಡಿಬಿ ರಿಯಾಲ್ಟಿ ಮತ್ತು ಅಜಂತಾ ಫಾರ್ಮಾ ಸೇರಿದಂತೆ 200 ಕ್ಕೂ ಹೆಚ್ಚು ಶೇರುಗಳು ಬಿಎಸ್ಇಯಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿದವು.

ಇದನ್ನೂ ಓದಿ : Elon Musk: ಸಂತಾನಾಭಿವೃದ್ಧಿ ಸಂಶೋಧನೆಗೆ $10 ಮಿಲಿಯನ್ ನೀಡಿದ 10 ಮಕ್ಕಳ ತಂದೆ ಮಸ್ಕ್!

ABOUT THE AUTHOR

...view details