ಮುಂಬೈ:ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿರುವ ಮುಖೇಶ್ ಅಂಬಾನಿ ತಮ್ಮ ಪುತ್ರ ಆಕಾಶ್ ಅಂಬಾನಿ ಅವರನ್ನು ಸಂಸ್ಥೆಯ ನೂತನ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಇದೀಗ ಪುತ್ರಿ ಇಶಾ ಅಂಬಾನಿಗೂ ಮಹತ್ವದ ಸ್ಥಾನ ನೀಡಿದ್ದಾರೆಂದು ವರದಿಯಾಗಿದೆ.
ಪುತ್ರನ ಜೊತೆಗೆ ಮಗಳಿಗೂ ಜವಾಬ್ದಾರಿ; ರಿಲಯನ್ಸ್ ರಿಟೇಲ್‌ನ ಚೇರ್ಮನ್ ಆಗಿ ಇಶಾ ಅಂಬಾನಿ ನೇಮಕ - Reliance retail unit
ರಿಲಯನ್ಸ್ ಸಾಮ್ರಾಜ್ಯವನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ಮುಂದಾಗಿರುವ ಜಗತ್ತಿನ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಇದೀಗ ತಮ್ಮ ಇಬ್ಬರು ಮಕ್ಕಳಿಗೆ ಮಹತ್ವದ ಹೊಣೆಗಾರಿಕೆ ನೀಡಿದ್ದಾರೆ.
Mukesh Ambani's Daughter Isha
ಇದನ್ನೂ ಓದಿ:ರಿಲಯನ್ಸ್ ಜಿಯೋ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮುಖೇಶ್ ಅಂಬಾನಿ.. ಪುತ್ರನಿಗೆ ಸಾರಥ್ಯ
ಇಶಾ ಅಂಬಾನಿಗೆ ರಿಲಯನ್ಸ್ ಇಂಡಸ್ಟ್ರೀಸ್ನ ರಿಟೇಲ್ ವಿಭಾಗದ ಉಸ್ತುವಾರಿ ನೀಡಲಾಗಿದೆ. ಪ್ರಸ್ತುತ ಇವರು ರಿಲಯನ್ಸ್ ರಿಟೇಲ್ ವೆಂಚರ್ನ ನಿರ್ದೇಶಕಿಯಾಗಿದ್ದಾರೆ. 30 ವರ್ಷದ ಇಶಾ, ಯೇಲ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.