ಡಿಜಿಟಲ್ ಪಾವತಿ ಇಂದು ಅನಿವಾರ್ಯ. ಜನರು ಆನ್‌ಲೈನ್ ಪೇಮೆಂಟ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಹೀಗೆ ಬಳಕೆ ಮಾಡುವಾಗ ಮೋಸ ಹೋಗುವ ಸಾಧ್ಯತೆಯೂ ಇರುತ್ತದೆ. ಆನ್‌ಲೈನ್ ಪಾವತಿಯನ್ನು ಅತಿಯಾದ ಎಚ್ಚರಿಕೆಯಿಂದಲೇ ನಾವು ನಿರ್ವಹಿಸಬೇಕಾಗುತ್ತದೆ.
ನೀವು ಡಿಜಿಟಲ್ ಪಾವತಿಯನ್ನೇ ಅವಲಂಬಿಸಿದ್ದೀರಾ? ಈ ಎಚ್ಚರಿಕೆಗಳನ್ನು ಕಡ್ಡಾಯ ಪಾಲಿಸಿ.. - ಡಿಜಿಟಲ್ ಪಾವತಿಯ ಮುನ್ನೆಚ್ಚರಿಕಾ ಕ್ರಮಗಳು
ಈಗ ಡಿಜಿಟಲ್ ಪಾವತಿ ಸಾಮಾನ್ಯವಾಗಿದೆ. ಆನ್‌ಲೈನ್‌ನಲ್ಲಿ ಎಲ್ಲ ವ್ಯವಹಾರಗಳನ್ನು ಮಾಡುತ್ತೇವೆ. ಇದು ಸುಲಭ ಮತ್ತು ವೇಗವಾದ ಪ್ರಕ್ರಿಯೆಯಾದ ಕಾರಣ ಇದರ ಬಳಕೆಯನ್ನು ಹೆಚ್ಚಿಸಿದ್ದೇವೆ. ಹೀಗೆ ಮಾಡುವ ವೇಳೆ ಅವುಗಳಿಂದ ಮೋಸ ಹೋಗುವುದರ ಬಗ್ಗೆಯೂ ತಿಳಿದುಕೊಳ್ಳುವುದು ಅನಿವಾರ್ಯ.
ಡಿಜಿಟಲ್ ಪಾವತಿ
ಡಿಜಿಟಲ್ ಪಾವತಿಗಳನ್ನು ಉತ್ತಮವಾಗಿ ಹೇಗೆ ನಿರ್ವಹಣೆ ಮಾಡಬಹುದು ಎಂಬುದರ ಕುರಿತು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಕಂಪನಿಯು ಕೆಲವು ಉತ್ತಮ ಸಲಹೆಗಳನ್ನು ಪಟ್ಟಿ ಮಾಡಿದೆ. ಈ ಸಲಹೆಗಳು ನಮ್ಮನ್ನು ಜಾಗರೂಕರಾಗಿರಲು ಮತ್ತು ಹಣಕಾಸಿನ ಮಾಹಿತಿ ಮತ್ತು ವಹಿವಾಟಿನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ.
- ಕ್ಯೂಆರ್ ಕೋಡ್‌ಗಳನ್ನು ಎಚ್ಚರಿಕೆಯಿಂದ ಬಳಸಿ:ಹಣವನ್ನು ಪಾವತಿ ಮಾಡಲು ನಾವು ಕ್ಯೂಆರ್ ಕೋಡ್‌ಗಳನ್ನು ಬಳಕೆ ಮಾಡುತ್ತೇವೆ. ಈ ವೇಳೆ ನಮಗೆ ಬಹುಮಾನ, ಕೊಡುಗೆ ರೂಪದಲ್ಲಿ ಬರುವ ಕ್ಯೂಆರ್ ಕೋಡ್ ಬಂದಲ್ಲಿ ಈ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಸಂಶಯಾಸ್ಪದ ಸಂದೇಶಗಳ ಬಗ್ಗೆ ಎಚ್ಚರದಿಂದಿರಿ. QR ಕೋಡ್‌ಗಳನ್ನು ಪಾವತಿಸಲು ಮಾತ್ರ ಬಳಸಬೇಕು.
- ಒಟಿಪಿಗಳನ್ನು ಆಯ್ಕೆ ಮಾಡಿ:ಆನ್‌ಲೈನ್ ಪಾವತಿ ಮಾಡುವಾಗ ಒಟಿಪಿಗಾಗಿ ಸ್ವಲ್ಪ ಕಾಲ ಕಾಯಬೇಕಾಗುತ್ತದೆ. ಹೀಗೆ ಕಾದರೂ ಪರವಾಗಿಲ್ಲ. ಒಟಿಪಿ ವಿಧಾನವನ್ನು ಬಳಸುವುದು ಆನ್‌ಲೈನ್ ಪಾವತಿ ಉತ್ತಮ ವಿಧಾನವಾಗಿದೆ. ಗ್ರಾಹಕರಿಗೆ ಲಭ್ಯವಿರುವ ಅತ್ಯಂತ ಸುರಕ್ಷಿತ ವಿಧಾನಗಳಲ್ಲಿ ಇದು ಒಂದಾಗಿದೆ. ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು.
- ಸ್ಕ್ರೀನ್ ಶೇರಿಂಗ್ ಆ್ಯಪ್ ಬಳಸಬೇಡಿ:ಖಾತೆದಾರರ ಮಾಹಿತಿಯನ್ನು ತಿಳಿದುಕೊಳ್ಳಲು ಸೈಬರ್ ಕಳ್ಳರು ಇದೀಗ ಸ್ಕ್ರೀನ್ ಶೇರಿಂಗ್ ಆ್ಯಪ್ ಬಳಸುತ್ತಿದ್ದಾರೆ. ಬ್ಯಾಂಕ್ ಪ್ರತಿನಿಧಿಗಳಂತೆಯೇ ಮಾತನಾಡಿ, ನಿಮ್ಮ ಮೊಬೈಲ್, ಕಂಪ್ಯೂಟರ್ ಸ್ಕ್ರೀನ್ ಶೇರ್ ಮಾಡಲು ಕೇಳುತ್ತಾರೆ. ನಂತರ ಕಾರ್ಡ್ ಮಾಹಿತಿ, ಒಟಿಪಿಯನ್ನು ಪಡೆದುಕೊಂಡು ವಂಚಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಯಾವುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದೇ ಇದ್ದರೆ ಉತ್ತಮ.
- ಬಯೋಮೆಟ್ರಿಕ್ ದೃಢೀಕರಣ ಬಳಸಿ:ಫಿನ್‌ಟೆಕ್ ಅಪ್ಲಿಕೇಶನ್‌ಗಳು ಬಯೋಮೆಟ್ರಿಕ್ ದೃಢೀಕರಣಕ್ಕೆ ಪರಿವರ್ತನೆಗೊಂಡಿವೆ. 4 ಅಂಕಿಯ ಅಥವಾ 6 ಅಂಕಿಯ ಪಿನ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿವೆ. ಡಿಜಿಟಲ್ ಪಾವತಿಯನ್ನು ಮಾಡುವಾಗ ಬಳಕೆದಾರರು ತಮ್ಮ ಫಿಂಗರ್ ಪ್ರಿಂಟ್ ಬಳಸುವ ಮೂಲಕ ವಹಿವಾಟು ನಡೆಸಲು ಸ್ಮಾರ್ಟ್‌ಫೋನ್‌ಗಳು ಶಿಫಾರಸು ಮಾಡಿದೆ.
- ಕಸ್ಟಮರ್ ಕೇರ್ ಆ್ಯಪ್ ಇರಲಿ:ಆನ್‌ಲೈನ್ ವಹಿವಾಟು ನಡೆಸಿದಾಗ ಅದು ಅಪೂರ್ಣಗೊಂಡ ನಿಮ್ಮ ಹಣ ಪಾವತಿಯಾಗದೇ ಕಡಿತವಾದಲ್ಲಿ ಅಂತಹ ದೂರುಗಳನ್ನು ಸಲ್ಲಿಸಲು ನೀವು ಗ್ರಾಹಕ ಸೇವಾ ಆ್ಯಪ್ಗಳ ಮೂಲಕವೇ ಮಾಹಿತಿ ನೀಡಿ. ಇದು ಮೋಸ ಹೋಗುವುದನ್ನು ತಪ್ಪಿಸುತ್ತದೆ.
- ವಹಿವಾಟಿನ ಸಂದೇಶಗಳ ಮೇಲೆ ಗಮನವಿರಲಿ:ವಹಿವಾಟಿನ ಬಳಿಕ ನಿಮಗೆ ಸಂದೇಶಗಳನ್ನು ತಪ್ಪದೆ ಪರಿಶೀಲಿಸಿ. ಇವು ನೀವು ನಡೆಸಿದ ವಹಿವಾಟಿನ ಚಿತ್ರಣವನ್ನು ತಿಳಿಸುತ್ತದೆ. ಈ ವೇಳೇ ಏನಾದರೂ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಬಹುದು.
ಇದನ್ನೂ ಓದಿ:ಸೈಬರ್ ಕಳ್ಳರಿದ್ದಾರೆ ಎಚ್ಚರಿಕೆ: ಆನ್‌ಲೈನ್ ವ್ಯವಹಾರದ ವೇಳೆ ಈ ಎಲ್ಲ ಮುನ್ನೆಚ್ಚರಿಕೆ ಇರಲಿ!