ಕರ್ನಾಟಕ

karnataka

ETV Bharat / business

ಒಂದೇ ಮನೆಯಲ್ಲಿ ಇಬ್ಬರು ಐಎಎಸ್​​ ಅಧಿಕಾರಿಗಳು.. ಇವರ ಯಶಸ್ಸಿನ ಹಿಂದಿದೆ ಅಮ್ಮನ ತ್ಯಾಗ!

ರಾಜಸ್ಥಾನದಲ್ಲಿ ಒಂದೇ ಮನೆಯಲ್ಲಿ ಇಬ್ಬರು ಐಎಎಸ್​ ಅಧಿಕಾರಿಗಳು.. ಇವರ ಯಶಸ್ಸಿನ ಹಿಂದೆ ಅವರ ತಾಯಿಯ ಹಿರಿಮೆ ಮತ್ತು ತ್ಯಾಗವಿದೆ

By

Published : Mar 18, 2023, 10:21 AM IST

Updated : Mar 18, 2023, 10:49 AM IST

Etv Bharatಒಂದೇ ಮನೆಯಲ್ಲಿ ಇಬ್ಬರು ಐಎಎಸ್​​ ಅಧಿಕಾರಿಗಳು... ಇವರ ಯಶಸ್ವಿನ ಹಿಂದಿದೆ ಅಮ್ಮನ ತ್ಯಾಗ!
Etv Bharatಒಂದೇ ಮನೆಯಲ್ಲಿ ಇಬ್ಬರು ಐಎಎಸ್​​ ಅಧಿಕಾರಿಗಳು... ಇವರ ಯಶಸ್ವಿನ ಹಿಂದಿದೆ ಅಮ್ಮನ ತ್ಯಾಗ!

ಜೈಸಲ್ಮೇರ್​​(ರಾಜಸ್ಥಾನ):ಒಂದೂರು ಅಥವಾ ಜಿಲ್ಲೆಯಲ್ಲಿ ಒಬ್ಬ ಐಎಎಸ್ ಅಧಿಕಾರಿ ಇರುವುದೇ ದೊಡ್ಡ ವಿಷಯ.. ಮನೆಯಲ್ಲಿ ಇಬ್ಬರಿದ್ದಾರಂತೆ. ಅದು ಇಬ್ಬರೂ ಹುಡುಗಿಯರೇ ಆಗಿರುವುದು ಇನ್ನೂ ವಿಶೇಷ. ಹೆಣ್ಣುಮಕ್ಕಳನ್ನು ಡಿಸಿ ಮಾಡುವವರೆಗೂ ಓದಿಸಲು ಅವರ ತಾಯಿ ಮಾಡಿದ ತ್ಯಾಗವೇನೂ ಸಣ್ಣದಲ್ಲ ಬಿಡಿ! ಅವರು ಯುಪಿಎಸ್ ಸಿ ಟಾಪರ್ ಕೂಡ ಹೌದು. ಹಾಗಾದರೆ ತಾಯಿ ಮತ್ತು ಮಗಳು ಯಾರು? ಅವಳ ತ್ಯಾಗವಾದರೂ ಏನು? ಯಾರಿವರು ಟೀನಾ ದಾಬಿ, ರಿಯಾ ದಾಬಿ.. ಅವರ ತಾಯಿ ಹಿಮಾನಿ ಕಾಂಬಳೆ ಎಷ್ಟೋ ಜನರಿಗೆ ಸ್ಪೂರ್ತಿಯಾಗಿದ್ದಾರೆ.

ಟೀನಾ ದಾಬಿ ರಾಜಸ್ಥಾನದ ಜೈಸಲ್ಮೇರ್‌ ಡಿಸಿ ಆಗಿದ್ದರೆ, ರಿಯಾ ದಾಬಿ ಅದೇ ರಾಜ್ಯದ ಅಲ್ವಾರ್‌ನ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಟೀನಾ 2016ರ ಟಾಪರ್ ಆಗಿ ಎಲ್ಲರ ಗಮನ ಸೆಳೆದಿದ್ದರು. ಆ ಸಮಯದಲ್ಲಿ ರಿಯಾ ಹೈಸ್ಕೂಲ್ ವಿದ್ಯಾರ್ಥಿನಿ ಆಗಿದ್ದರು. ಅಕ್ಕನ ಯಶಸ್ಸು ಅವರಲ್ಲಿಯೂ ಐಎಎಸ್ ಆಗುವ ಉತ್ಸಾಹವನ್ನು ಇಮ್ಮಡಿಗೊಳಿಸಿತು. ರಿಯಾ ಕೂಡ 2020 ರಲ್ಲಿ ಸಿವಿಲ್​ ಪರೀಕ್ಷೆ ಪಾಸ್​ ಮಾಡಿ ಅಕ್ಕನ ಹಾದಿಯನ್ನು ಹಿಡಿದು, ಗುರಿ ಸಾಧಿಸಿದ್ದಾರೆ.

ಈ ಇಬ್ಬರೂ ಸಹೋದರಿಯರು ಈಗ ಯುವ ಜನರ ಕಣ್ಮಣಿಗಳಾಗಿದ್ದಾರೆ. ಲಕ್ಷಾಂತರ ಜನರು Instagram ಮತ್ತು Twitter ನಲ್ಲಿ ಈ ಇಬ್ಬರು ಐಎಎಸ್​​ ಸಹೋದರಿಯರನ್ನು ಅನುಸರಿಸುತ್ತಿದ್ದಾರೆ. ಟೀನಾ ಇನ್‌ಸ್ಟಾಗ್ರಾಮ್‌ನಲ್ಲಿ 16 ಲಕ್ಷ ಮತ್ತು ಟ್ವಿಟರ್‌ನಲ್ಲಿ 4 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಸಹೋದರಿ ರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಐದೂವರೆ ಮಿಲಿಯನ್‌ಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಪ್ರಸಿದ್ಧ ಡಿಸಿಗಳಾಗಿ ಜನಪ್ರಿಯರಾಗಿದ್ದಾರೆ. ಅವರ ಯಶಸ್ಸಿನ ಹಿಂದೆ ತಾಯಿ ಹಿಮಾನಿ ಕಾಂಬಳೆ ಇದ್ದಾರೆ. ಮಕ್ಕಳಿಗಾಗಿ ತಮ್ಮ ವೃತ್ತಿಜೀವನವನ್ನು ತ್ಯಜಿಸಿದ ಹಿಮಾನಿ, ಮಕ್ಕಳು ಅತಿ ಎತ್ತರಕ್ಕೆ ಏರುವಂತೆ ಮಾಡಿದ್ದಾರೆ.

ತಮ್ಮ ಕನಸನ್ನು ತ್ಯಾಗ ಮಾಡಿದ ಮಹಾತಾಯಿ:ಟೀನಾ ಮತ್ತು ರಿಯಾ ತಮ್ಮ ಅಧ್ಯಯನದಲ್ಲಿ ಯಶಸ್ಸು ಗಳಿಸಲಿ ಎಂಬ ಕಾರಣಕ್ಕೆ ಹಿಮಾನಿ ಕಾಂಬ್ಳೆ ತಮ್ಮ ವೃತ್ತಿಜೀವನವನ್ನು ತ್ಯಾಗ ಮಾಡಿದರು. ಅವರು ಭೋಪಾಲ್‌ನ ಮೌಲಾನಾ ಆಜಾದ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಟಾಪರ್ ಆಗಿದ್ದರು. UPSC ಪರೀಕ್ಷೆ ತೆಗೆದುಕೊಂಡಿದ್ದ ಅವರು, ಭಾರತೀಯ ಎಂಜಿನಿಯರಿಂಗ್ ಸೇವೆ (IES) ಅಧಿಕಾರಿಯಾಗಿ ಸೇವೆಗೆ ಸೇರ್ಪಡೆಗೊಂಡಿದ್ದರು. ಅನೇಕ ಕನಸುಗಳು ಮತ್ತು ಮಹತ್ವಾಕಾಂಕ್ಷೆಗಳೊಂದಿಗೆ ಐಇಎಸ್ ಆಗಿದ್ದ ಅವರು, ತಮ್ಮ ಮಕ್ಕಳ ಭವಿಷ್ಯ ರೂಪಿಸುವುದಕ್ಕಾಗಿ ಆದ್ಯತೆ ನೀಡಿದರು. ಕೆಲಸ ಮಾಡುವಾಗಲೂ ಮಕ್ಕಳಿಗೆ ಶಿಕ್ಷಣ ಕೊಡಿಸಬಹುದು. ಆದರೆ, ಹಿಮಾನಿ ತಮ್ಮ ಪೂರ್ಣ ಸಮಯವನ್ನು ಇಬ್ಬರು ಹೆಣ್ಣು ಮಕ್ಕಳಿಗಾಗಿ ಮೀಸಲಿಟ್ಟರು.

''ಯುಪಿಎಸ್‌ಸಿ ಪರೀಕ್ಷೆ ಪಾಸ್​ ಮಾಡುವುದು ಎಷ್ಟು ಕಷ್ಟ ಎಂಬುದು ಪರೀಕ್ಷೆ ಎದುರಿಸಿದವರಿಗೆ ಚನ್ನಾಗಿಯೇ ಗೊತ್ತಿರುತ್ತದೆ. ಹೀಗೆ ಪರೀಕ್ಷೆ ಎದುರಿಸಿ ಅದು ಎಷ್ಟು ಕಷ್ಟ ಎಂದು ಅರಿತಿದ್ದ ನನಗೆ, ಮಕ್ಕಳ ಕನಸು ನನಸು ಮಾಡುವುದಕ್ಕಾಗಿ ನಾನು ಕೆಲಸ ಬಿಟ್ಟೆ ಎನ್ನುತ್ತಾರೆ ಹಿಮಾನಿ ಕಾಂಬ್ಳೆ.

ಇನ್ನು ಈ ಬಗ್ಗೆ ಮಾತನಾಡಿರುವ ಟೀನಾ, ನನ್ನ ತಂದೆ BSNL ನಲ್ಲಿ ಜನರಲ್ ಮ್ಯಾನೇಜರ್. ನಮ್ಮ ಅಧ್ಯಯನಕ್ಕಾಗಿ ನನ್ನ ತಾಯಿ ಸ್ವಯಂ ನಿವೃತ್ತಿ ಪಡೆದರು. ಹುಡುಗಿಯರು ಯಾವುದೇ ಕ್ಷೇತ್ರದಲ್ಲಿ ಹುಡುಗರಿಗೆ ಸರಿ ಸಮಾನರು ಎಂದು ಅವರು ಪದೇ ಪದೇ ಹೇಳುತ್ತಿದ್ದರು. ಬಯಸಿದ ಗುರಿಗಳನ್ನು ಸಾಧಿಸಲು ಮತ್ತು ಅವುಗಳ ಕಡೆಗೆ ಸಾಗಲು ಅವರು ನಮಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಪ್ರತಿ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕೆಂದು ಅವರು ನಮಗೆ ಕಲಿಸಿದರು. ತಮ್ಮ ವೃತ್ತಿಯನ್ನೇ ತ್ಯಾಗ ಮಾಡಿ ನಮ್ಮನ್ನು ಬೆಳೆಸಿದ ನನ್ನ ತಾಯಿಗಿಂತ ನಾವೇನೂ ಮಿಗಿಲಲ್ಲ'' ಅಂತಾ ನೆನಪು ಮಾಡಿಕೊಂಡರು.

ಟಾಪರ್ ಆಗಿ ಮಾತ್ರವಲ್ಲ..ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಸೆಲೆಬ್ರಿಟಿಗಳಲ್ಲಿ ಟೀನಾ ಕೂಡ ಒಬ್ಬರು. ಸಿವಿಲ್ಸ್ ಟಾಪರ್ ಆಗುವಾಗ ಇವರಿಗೆ ಆಗ ಕೇವಲ 22 ವರ್ಷ. ಪ್ರಥಮ ಬಾರಿಗೆ ದಲಿತ ಬಾಲಕಿ ಟಾಪರ್ ಆಗಿದ್ದು, ಪ್ರಶಂಸೆ ಕಾರಣವಾಗಿತ್ತು. ಅಂದಿನಿಂದ ಐಎಎಸ್ ಆಗಬೇಕೆಂಬ ಕನಸು ಹೊತ್ತ ಲಕ್ಷಾಂತರ ಮಂದಿ ಇವರನ್ನು ಹಿಂಬಾಲಿಸಲು ಆರಂಭಿಸಿದ್ದಾರೆ. ಆ ನಂತರ ಇವರ ಮದುವೆ ಮತ್ತು ಎರಡನೇ ಮದುವೆ ಕೂಡ ದೊಡ್ಡ ಸಂಚಲನಕ್ಕೆ ಕಾರಣವಾಗಿತ್ತು. ಆದರೆ, ಇವರ ಹಿಂಬಾಲಕರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಕಲೆಕ್ಟರ್​​ ಆಗಿ, ಅವರ ನಿರ್ಧಾರಗಳು ಮಾತ್ರವಲ್ಲದೇ ಅವರ ಶೈಲಿಯೂ ಅನೇಕ ಅಭಿಮಾನಿಗಳನ್ನು ಸೃಷ್ಟಿಸಿದೆ. ಅವರ ವಿಡಿಯೋಗಳು ಲಕ್ಷಾಂತರ ವೀಕ್ಷಣೆಗಳನ್ನು ಗಳಿಸುತ್ತಿವೆ.

ನನ್ನ ತಂಗಿಯೊಂದಿಗೆ... ಬಡತನ, ಅನಕ್ಷರತೆ ಮತ್ತು ನಿರುದ್ಯೋಗದ ಮುಖ್ಯ ವಿಷಯಗಳಾಗಿರುವ ಅಮೃತಸೇನ್ ಅವರ ಬರಹಗಳನ್ನು ಟೀನಾ ತುಂಬಾ ಇಷ್ಟಪಟ್ಟಿದ್ದಾರೆ. ಆ ಪುಸ್ತಕಗಳ ಪ್ರಭಾವದಿಂದ ನಾನು ಸಾರ್ವಜನಿಕ ಸೇವೆಗೆ ಪ್ರವೇಶಿಸಿದೆ ಎಂದು ಟೀನಾ ಹೇಳಿದ್ದಾರೆ

''ಪುಸ್ತಕಗಳನ್ನು ಓದುವ ಮೂಲಕ ಅನೇಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಸ್ಫೂರ್ತಿ ಮತ್ತು ತಿಳಿವಳಿಕೆ ಪಡೆಯಿರಿ. ನಮ್ಮ ಕರ್ತವ್ಯದಲ್ಲಿ ಪಾರದರ್ಶಕವಾಗಿರಲು ಅದೇ ಕಾರಣ'' ಎಂದು ಟೀನಾ ಹೇಳುತ್ತಾರೆ, ಇತರರು ನಮ್ಮನ್ನು ನೋಡಿ ಸ್ಫೂರ್ತಿ ಪಡೆಯುತ್ತಾರೆ. ಸಮಯ ಸಿಕ್ಕಾಗಲೆಲ್ಲ ಮಧುಬನಿಯ ಚಿತ್ರಗಳನ್ನು ಬಿಡಿಸಿ ಒತ್ತಡವನ್ನು ದೂರ ಮಾಡುತ್ತಾರೆ. ಅಕ್ಕನ ಪ್ರಭಾವದಿಂದ ಐಎಎಸ್ ಆಗಿರುವ ರಿಯಾ ರಾಜಸ್ಥಾನದ ಹಳ್ಳಿಗಳ ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಇದನ್ನು ಓದಿ:ಕಸದಿಂದ ರಸ ತೆಗೆದ ಮಹಿಳೆ: ಸಾವಿರ ಕೋಟಿ ರೂಪಾಯಿ ಉದ್ಯಮದ ಒಡತಿ!

Last Updated : Mar 18, 2023, 10:49 AM IST

ABOUT THE AUTHOR

...view details