ನವದೆಹಲಿ:ದೇಶದ ಕೇಂದ್ರೀಯ ಬ್ಯಾಂಕ್(ಆರ್‌ಬಿಐ) ತನ್ನ ಗ್ರಾಹಕರಿಗೆ ಮಹತ್ವದ ಸುದ್ದಿ ನೀಡಿದೆ. ಅಕ್ಟೋಬರ್ ತಿಂಗಳಲ್ಲಿ ಈ ಎಲ್ಲ ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನೀವು ನಿಮ್ಮ ಬ್ಯಾಂಕಿಂಗ್ ಚಟುವಟಿಕೆಗಳನ್ನು ಮುಂಚಿತವಾಗಿ ಯೋಜಿಸುವುದು ಒಳಿತು. ಆರ್‌ಬಿಐ ಪ್ರತಿ ತಿಂಗಳು ಬ್ಯಾಂಕ್ ರಜೆಗಳ ಪಟ್ಟಿಯನ್ನು ಮುಂಚಿತವಾಗಿ ಬಿಡುಗಡೆ ಮಾಡುತ್ತದೆ.
ಭಾರತ ವೈವಿಧ್ಯಮಯ ದೇಶ. ಅನೇಕ ರಾಷ್ಟ್ರೀಯ ಮತ್ತು ಪ್ರಾದೇಶಿಕ ಹಬ್ಬಗಳು ಸಾಮಾನ್ಯ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಆಯಾ ಹಬ್ಬಗಳಂತೆ ರಜಾದಿನಗಳನ್ನು ಘೋಷಿಸುತ್ತದೆ. ಆದ್ದರಿಂದ, ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ವಿಶೇಷ ರಜಾದಿನಗಳನ್ನು ಹೊಂದಿವೆ.
*ಅಕ್ಟೋಬರ್ 2 (ಸೋಮವಾರ): ಮಹಾತ್ಮ ಗಾಂಧಿ ಜಯಂತಿ
*ಅಕ್ಟೋಬರ್ 12 (ಭಾನುವಾರ): ವಾರದ ರಜೆ
*ಅಕ್ಟೋಬರ್ 14 (ಎರಡನೇ ಶನಿವಾರ): ಮಹಾಲಯ (ಕರ್ನಾಟಕ, ಒಡಿಶಾ, ತ್ರಿಪುರ, ಬಂಗಾಳದಲ್ಲಿ ಬ್ಯಾಂಕ್‌ಗಳಿಗೆ ರಜೆ)
*ಅಕ್ಟೋಬರ್ 15 (ಭಾನುವಾರ): ಮಹಾರಾಜ ಅಗ್ರಸೇನ್ ಜಯಂತಿ (ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನದಲ್ಲಿ ಬ್ಯಾಂಕ್‌ಗಳಿಗೆ ರಜೆ)
*ಅಕ್ಟೋಬರ್ 18 (ಬುಧವಾರ): ಕತಿ ಬಿಹು (ಅಸ್ಸಾಂನಲ್ಲಿ ಬ್ಯಾಂಕ್‌ಗಳಿಗೆ ರಜೆ)
*ಅಕ್ಟೋಬರ್ 19 (ಗುರುವಾರ): ಹೊಸ ವರ್ಷದ ಹಬ್ಬ (ಗುಜರಾತ್ನಲ್ಲಿ ಬ್ಯಾಂಕ್ಗೆ ರಜೆ)