ಚೆನ್ನೈ :ಪ್ರಯಾಣಿಕರ ಸಂಖ್ಯೆಯ ವಿಷಯದಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತೀಯ ವಿಮಾನಯಾನ ವಲಯ ಬೆಳವಣಿಗೆ ಸಾಧಿಸಿದೆ ಎಂದು (ICRA study) ಐಸಿಆರ್ಎ ವರದಿ ಹೇಳಿದೆ. ಕ್ರೆಡಿಟ್ ರೇಟಿಂಗ್ ಏಜೆನ್ಸಿ ಐಸಿಆರ್ಎ ಪ್ರಕಾರ, ಮೇ 2023 ರಲ್ಲಿದ್ದಂತೆ ದೇಶೀಯ ವಿಮಾನ ಪ್ರಯಾಣಿಕರ ದಟ್ಟಣೆ ಸುಮಾರು 131.8 ಲಕ್ಷ ಎಂದು ಅಂದಾಜಿಸಲಾಗಿದೆ. ಏಪ್ರಿಲ್ 2023 ರಲ್ಲಿ ಇದ್ದ ಸುಮಾರು 128.9 ಲಕ್ಷಕ್ಕೆ ಹೋಲಿಸಿದರೆ ಸುಮಾರು 2.3 ಶೇಕಡಾ ಹೆಚ್ಚಾಗಿದೆ.
ಇದಲ್ಲದೆ ಮೇ 2022 ಕ್ಕೆ ಹೋಲಿಸಿದರೆ ಇದು ವರ್ಷದಿಂದ ವರ್ಷಕ್ಕೆ (YoY) ಸುಮಾರು 15 ಪ್ರತಿಶತದಷ್ಟು ಬೆಳವಣಿಗೆಯನ್ನು ಕಂಡಿದೆ. ಮೇ 2023 ರಲ್ಲಿ ದೇಶೀಯ ಪ್ರಯಾಣಿಕರ ದಟ್ಟಣೆಯು ಪೂರ್ವ ಕೋವಿಡ್ ಮಟ್ಟಗಳಿಗೆ ಹೋಲಿಸಿದರೆ ಸುಮಾರು 8 ಪ್ರತಿಶತದಷ್ಟು ಹೆಚ್ಚಾಗಿದೆ (ಅಂದರೆ ಮೇ 2019). ಮೇ 2023 ರಲ್ಲಿ ಏರ್‌ಲೈನ್ಸ್ ಸಾಮರ್ಥ್ಯದ ನಿಯೋಜನೆಯು ಮೇ 2022 ಕ್ಕಿಂತ ಸುಮಾರು 1.4 ಪ್ರತಿಶತದಷ್ಟು ಹೆಚ್ಚಾಗಿದೆ ಹಾಗೂ ಇದು ಪೂರ್ವ ಕೋವಿಡ್ ಮಟ್ಟವನ್ನು ತಲುಪಿದೆ (ಮೇ 2019).
ಹಣಕಾಸು ವರ್ಷ 2023 ರಲ್ಲಿ ಭಾರತೀಯ ವಿಮಾನಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು ಸರಿಸುಮಾರು 239.4 ಲಕ್ಷದಷ್ಟಿದೆ. ಇದರಿಂದಾಗಿ ಕೋವಿಡ್ ಪೂರ್ವದ (FY2020) ಮಟ್ಟದಿಂದ ಸುಮಾರು 227.2 ಲಕ್ಷದಷ್ಟು ಹೆಚ್ಚಾಗಿದೆ. ಆದರೂ ಹಣಕಾಸು ವರ್ಷದ 2019 ರ ಗರಿಷ್ಠ ಮಟ್ಟವಾದ 259 ಲಕ್ಷಕ್ಕಿಂತ 8 ಶೇಕಡಾ ಕಡಿಮೆಯಾಗಿದೆ. ಇದಲ್ಲದೆ, ಏಪ್ರಿಲ್ 2023 ರಲ್ಲಿದ್ದಂತೆ ಭಾರತೀಯ ವಿಮಾನಯಾನ ಕಂಪನಿಗಳ ವಿಮಾನಗಳಲ್ಲಿ ಅಂತರಾಷ್ಟ್ರೀಯ ಪ್ರಯಾಣಿಕರ ದಟ್ಟಣೆಯು ಸುಮಾರು 21.8 ಲಕ್ಷದಷ್ಟಿದೆ. ಇದು ಕೋವಿಡ್ ಪೂರ್ವದ (ಏಪ್ರಿಲ್ 2019) 18.3 ಲಕ್ಷಕ್ಕಿಂತ 20 ಪ್ರತಿಶತದಷ್ಟು ಹೆಚ್ಚಾಗಿದೆ.