ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಜಗತ್ತು ಮುಂದುವರೆಯುತ್ತಿದ್ದು, ಅನೇಕ ಮಹತ್ತರ ಬದಲಾವಣೆಗಳು ನಡೆಯುತ್ತಿದೆ. ಆದರೂ ಕೂಡ ಲಿಂಗ ಅಸಮಾನತೆ ಕಲ್ಪನೆ ಸಂಪೂರ್ಣವಾಗಿ ದೂರಾಗಿಲ್ಲ. ಆದರೆ, ಈ ನಿರೀಕ್ಷೆಗಳನ್ನು ಮೀರುವ ಬೆಳವಣಿಗೆಗಳು ನಮ್ಮ ನಡುವೆ ಆಗುತ್ತಿದೆ. ಮಹಿಳೆ ಕೂಡ ಇಂದು ಸ್ಟೆಮ್ (STEM) ಕ್ಷೇತ್ರದಲ್ಲಿ ತನ್ನ ಸಾಮರ್ಥ್ಯವನ್ನು ತೋರಿಸುತ್ತಿದ್ದಾಳೆ. ಅಂತಹದ್ದೇ ಒಂದು ಸಾಧನೆಯ ಪಥದಲ್ಲಿ ತೆಲುಗು ಮೂಲದ ಎನ್ಆರ್ಐ ಅಪರ್ಣಾ ಚೆನ್ನಪ್ರಗಡ ಸಾಗಿದ್ದಾರೆ. ಇತ್ತೀಚೆಗೆ ಅವರು ಟೆಕ್ ದೈತ್ಯ ಸಂಸ್ಥೆಯಾಗಿರುವ ಮೈಕ್ರೋಸಾಫ್ಟ್ನ ಕಾರ್ಪೊರೇಟ್ ಉಪಾಧ್ಯಕ್ಷರಾಗಿ ಸ್ಥಾನ ಅಲಂಕರಿಸಿದ್ದಾರೆ.
ಮಹಿಳೆಯರು ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸುವ ಅನೇಕ ಮಂದಿಗೆ ಉತ್ತರ ಎಂದರೆ ಮಹಿಳೆಯರ ಯಶಸ್ಸು ಎಂದು ಅಪರ್ಣಾ ಹೇಳುತ್ತಾರೆ. ತೆಲುಗು ಮೂಲದ ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಅಪರ್ಣಾ 18ನೇ ವರ್ಷದವರೆಗೆ ಕಂಪ್ಯೂಟರ್ ಅನ್ನೇ ಕಾಣದವರು. ಇಂತಹ ಯುವತಿ ಇಂದು ಜಗತ್ತಿನ ಪ್ರಮುಖ ಟೆಕ್ ಸಂಸ್ಥೆಯನ್ನು ಜವಾಬ್ದಾರಿಯುತ ನಾಯಕತ್ವದ ಸ್ಥಾನವನ್ನು ನಡೆಸುತ್ತಿದ್ದಾರೆ.
ಇನ್ನು ತಮ್ಮ ಪ್ರಯಾಣದ ಕುರಿತು ಮಾತನಾಡಿರುವ ಅಪರ್ಣಾ, ಬಾಲ್ಯದಲ್ಲಿ ಆಡುತ್ತಿದ್ದ ವಿಡಿಯೋ ಗೇಮ್ ತಂತ್ರಜ್ಞಾವು ನನಗೆ ಆಸಕ್ತಿಯನ್ನು ಮೂಡಿಸುತ್ತಿತ್ತು ಎಂದಿದ್ದಾರೆ. ತಾಯಿ ಮಾತು ಮತ್ತು ಪ್ರೋತ್ಸಾಹದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಈ ಸಾಧನೆ ಮಾಡಲಾಯಿತು ಎನ್ನುತ್ತಾರೆ ಅಪರ್ಣಾ.
ಹಲವು ಹುದ್ದೆಗಳ ಗೌರವ:ಬಾಲ್ಯದಿಂದಲೂ ಓದಿನಲ್ಲಿ ಸಕ್ರಿಯವಾಗಿದ್ದ ಅಪರ್ಣಾ, ಐಐಟಿ ಮಡ್ರಾಸ್ನಲ್ಲಿ ಓದುವ ಕನಸನ್ನು ಹೊಂದಿದ್ದರು. ಅದನ್ನು ಪೂರೈಸಲು ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಮಾಡಿದರು, ಬಳಿಕ ಅಮೆರಿಕಕ್ಕೆ ಹೋದ ಅವರು ಟೆಕ್ಸಾಸ್ ಮತ್ತು ಎಂಐಟಿ ಯುನಿವರ್ಸಿಟಿಯಲ್ಲಿ ಎರಡು ಸ್ನಾತಕೋತ್ತರ ಪದವಿಯನ್ನು ಪಡೆದರು. ಅಕಮೈ ಟೆಕ್ನಾಲಾಜಿಯಲ್ಲಿ ಪ್ರೋಡಕ್ಟ್ ಡೆವಲಪರ್ ಆಗಿ ತಮ್ಮ ವೃತ್ತಿ ಆರಂಭಿಸಿದ ಅವರು, ಬಳಿಕ ಒರಾಕಲ್, ಇಂಕ್ ಡಾಟ್ನಂತಹ ಅನೇಕ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದರು. ಬಳಿಕ 12 ವರ್ಷಗಳ ಕಾಲ ಗೂಗಲ್ನಲ್ಲಿ ಸೇವೆ ಸಲ್ಲಿಸಿದರು. ಇಲ್ಲಿ ಯೂಟ್ಯೂಬ್, ಗೂಗಲ್ ಸರ್ಚ್, ಗೂಗಲ್ ನೌ ಮತ್ತು ಗೂಗಲ್ ಲೆನ್ಸ್ನಂತಹ ಅನೇಕ ಪ್ರಮುಖ ಪ್ರಾಡಕ್ಟ್ ಅಭಿವೃದ್ಧಿಯಲ್ಲಿ ಕಾರ್ಯ ನಿರ್ವಹಿಸಿದರು
ಗೂಗಲ್ ಸಿಇಒ ಸುಂದರ್ ಪಿಚ್ಛೈ ಅವರ ಟೆಕ್ನಿಕಲ್ ಅಸಿಸ್ಟೆಂಟ್ ಆಗಿ ಕೂಡ ಇವರು ಕಾರ್ಯ ನಿರ್ವಹಿಸಿದ್ದಾರೆ. ಅಪರ್ಣಾ ಇಬೆ ಸಂಸ್ಥೆಯಲ್ಲಿ ಗ್ರಾಹಕ ಮಾರಾಟದ ಉಪಾಧ್ಯಕ್ಷೆ ಮತ್ತು ಪ್ರಾಡಕ್ಟ್ನ ಎಆರ್ ಅಂಡ್ ವಿಶುಯಲ್ ಸರ್ಚ್ನ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು. ಸ್ಟಾಕ್ ಟ್ರೆಡಿಂಗ್ ಆ್ಯಪ್ ಆಗಿರುವ ರಾಬಿನ್ ಹುಡ್ನಲ್ಲಿ ಮುಖ್ಯ ಉತ್ಪಾದಕರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಮೈಕ್ರೋಸಾಫ್ಟ್ನ ಕಾರ್ಪೊರೇಟ್ನ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದು, ಇವರು ಮೈಕ್ರೋಸಾಫ್ಟ್ 365 ಮತ್ತು ಮೈಕ್ರೋಸಾಫ್ಟ್ ಡಿಸೈನರ್ನಲ್ಲಿ ಎಐನಲ್ಲಿ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಜೀವನದಲ್ಲಿ ಬೇಕಿದೆ ಸಹಯೋಗ: ಪ್ರಾಡಕ್ಟ್ ಡೆವಲ್ಮೆಂಟ್, ಡಿಸೈನ್ ಮತ್ತು ಸ್ಟಾರ್ಟಜಿ ಡಿಪಾರ್ಟ್ಮೆಂಟ್ನಲ್ಲಿ 20 ವರ್ಷಗಳ ಕಾಲ ಅನುಭವವನ್ನು ಅವರು ಹೊಂದಿದ್ದು, ವೃತ್ತಿ ಜೊತೆಗೆ ವೈಯಕ್ತಿಕ ಜೀವನಕ್ಕೂ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಮಹಿಳೆ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರ ಆಯ್ಕೆ ಮಾಡಿಕೊಂಡಾಗ ಆಕೆ ಅಲ್ಲಿ ದೀರ್ಘಕಾಲ ಇರುವುದಿಲ್ಲ. ಅದರಲ್ಲೂ ನಾಯಕತ್ವದಂತಹ ಜವಾಬ್ದಾರಿಯನ್ನು ಪಡೆಯಲು ಆಸಕ್ತಿ ತೋರುವುದಿಲ್ಲ. ಇದು ಬದಲಾಗಬೇಕಿದೆ. ನಾವು ನಮ್ಮ ಪ್ರತಿನಿಧ್ಯವನ್ನು ಬೋರ್ಡ್ರೂಮ್ವರೆಗೆ ಹೆಚ್ಚಿಸಬೇಕಿದೆ. ನಾವು ಒಬ್ಬರಿಗೆ ಒಬ್ಬರು ಸಹಾಯ ಮಾಡಬೇಕಿದೆ, ನಾವು ಕುಟುಂಬ ಮತ್ತು ವೃತ್ತಿಯೊಂದಿಗೆ ಯಾವುದೇ ಒತ್ತಡ ಮತ್ತು ಹಿಂಜರಿಕೆಯಿಲ್ಲದೇ ಸಹಯೋಗವನ್ನು ತೋರಬೇಕಿದೆ. ಇದಕ್ಕಾಗಿ ನಿಮ್ಮ ವೃತ್ತಿಯನ್ನು ತ್ಯಾಗ ಮಾಡುವ ಅಗತ್ಯವಿಲ್ಲ. ಬದಲಾಗಿ ಇದಕ್ಕೆ ಪರ್ಯಾಯಗಳನ್ನು ನೋಡಬೇಕಿದೆ.
ಇದೇ ರೀತಿಯ ಪರಿಸ್ಥಿತಿಯನ್ನು ನಾನು ಗೂಗಲ್ಗೆ ಸೇರಿದಾಗ ಅನುಭವಿಸಿದೆ. ಆಗ ನಾನು ಗರ್ಭಿಣಿಯಾಗಿದ್ದು, ಮಗುವನ್ನು ಸರಿಯಾಗಿ ಆರೈಕೆ ಮಾಡಲು ಸಾಧ್ಯವೇ, ಈ ಹುದ್ದೆ ನನಗೆ ಸರಿಯೇ ಎಂಬ ಅನೇಕ ಪ್ರಶ್ನೆಗಳು ಮೂಡಿದ್ದವು. ಈ ಸಮಯದಲ್ಲಿ ನನ್ನ ಕುಟುಂಬ ಮತ್ತು ಸ್ನೇಹಿತರು ಹಾಗೂ ಸಹೋದ್ಯೋಗಿಗಳು ಬೆಂಬಲ ನೀಡಿದರು. ಅವರು ತಮ್ಮ ಅನುಭವ ಹಂಚಿಕೊಂಡು ನನಗೆ ಮಾರ್ಗದರ್ಶನ ತೋರಿದರು. ನನ್ನ ಕೆಲಸಕ್ಕಾಗಿ ಮಗುವನ್ನು ಸಂಸ್ಥೆಯ ಡೇಕೇರ್ನಲ್ಲಿ ಬಿಡುತ್ತಿದ್ದೆ ಎಂದು ತಮ್ಮ ಜೀವನದ ಏರಿಳಿತಗಳನ್ನು ದಾಟಿ ಹೇಗೆ ನಿಧಾನವಾಗಿ ಜೀವನದಲ್ಲಿ ಸಹಯೋಗವನ್ನು ಕಲಿತೆ ಎಂಬ ಮಾತನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಸ್ಥೂಲ ಆರ್ಥಿಕ ವಾತಾವರಣ ಸಮೃದ್ಧವಾಗಿದೆ: ಐಎಂಎಫ್