ಕರ್ನಾಟಕ

karnataka

ETV Bharat / business

ಬೆಂಗಳೂರಿನಲ್ಲಿದೆ ಕಾಶ್ಮೀರಿ ರೆಸ್ಟೋರೆಂಟ್: ಇಲ್ಲಿ ಸಿಗುತ್ತೆ ಪ್ಯೂರ್​ ಕಣಿವೆಯ ಖಾದ್ಯ

ದೇಶದ ಶಿಖರಪ್ರಾಯವಾದ ಕಾಶ್ಮೀರದ ಭೋಜನದ ಪದ್ಧತಿಯೇ ಬೇರೆ. ಇದನ್ನು ಉದ್ಯಮಿಯೊಬ್ಬರು ಬೆಂಗಳೂರಿಗೂ ವಿಸ್ತರಿಸಿದ್ದು, ಇಂದಿರಾನಗರದಲ್ಲಿ ಕಾಶ್ಮೀರಿ ಮಾದರಿಯ ರೆಸ್ಟೋರೆಂಟ್​ ಆರಂಭಿಸಿದ್ದಾರೆ.

an-authentic-kashmiri-restaurant-in-bangalore
ಬೆಂಗಳೂರಿನಲ್ಲಿದೆ ಕಾಶ್ಮೀರಿ ರೆಸ್ಟೋರೆಂಟ್

By

Published : Oct 25, 2022, 11:01 PM IST

ಬೆಂಗಳೂರು:ಚುಮುಚುಮು ಚಳಿಯನ್ನೇ ಹೊದ್ದುಕೊಂಡು ಬದುಕುವ ಕಾಶ್ಮೀರಿಗಳ ಭೋಜನ ಶೈಲಿಯೇ ಬೇರೆ. ಮಾಂಸದೂಟ, ಸಾಲ್ಟ್​ ಟೀ, ಕಾಶ್ಮೀರಿ ಕೆಹ್ವಾ ಕಣಿವೆಯ ವಿಶೇಷ ಖಾದ್ಯ. ಕಾಶ್ಮೀರಕ್ಕೆ ಸೀಮಿತವಾಗಿದ್ದ ಈ ಕಣಿವೆಯ ಪದಾರ್ಥಗಳೀಗ ಬೆಂಗಳೂರಿನಲ್ಲೂ ಲಭ್ಯವಿವೆ.

ನಿಜ, ಕಾಶ್ಮೀರಿ ಮಹಿಳಾ ಉದ್ಯಮಿಯೊಬ್ಬರು ಬೆಂಗಳೂರು ದಕ್ಷಿಣದಲ್ಲಿ ಕಾಶ್ಮೀರಿ ಫುಡ್​ ಸ್ಟೈಲ್​ನ ಹೋಟೆಲ್​ ಅನ್ನು ಆರಂಭಿಸಿದ್ದಾರೆ. ಇದು ಕಾಶ್ಮೀರದ ಅಭಿರುಚಿ ಮತ್ತು ಸಂಪ್ರದಾಯಗಳನ್ನು ಒಳಗೊಂಡಿದೆ.

ಶ್ರೀನಗರದವರಾದ ಅಜ್ಮತ್ ಅಲಿ ಮಿರ್ ಅವರು, ಕಾಶ್ಮೀರೇತರ ಕುಟುಂಬವನ್ನು ವಿವಾಹವಾಗಿದ್ದಾರೆ. ಕಂಪ್ಯೂಟರ್ ಇಂಜಿನಿಯರ್ ಪಡೆದಿರುವ ಇವರು ಬೆಂಗಳೂರಿನ ಇಂದಿರಾನಗರದಲ್ಲಿ ವಾಸವಾಗಿದ್ದಾರೆ. ಇಲ್ಲಿಯೇ ಕಾಶ್ಮೀರಿ ಸ್ಟೈಲ್​ನ ಸರ್ಪೋಶ್ ಹೆಸರಿನ ಹೋಟೆಲ್​ ಶುರು ಮಾಡಿದ್ದಾರೆ.

ವಾಜ್ವಾನ್, ನನ್​ ಟೀ ಸ್ಪೆಷಲ್:ಕಾಶ್ಮೀರದ ಏಳು ಖಾದ್ಯಗಳಲ್ಲಿ ವಿಶೇಷ ಊಟವಾದ ವಾಜ್ವಾನ್​ ಇಲ್ಲಿ ಲಭ್ಯವಿದೆ. ಅಲ್ಲದೆ, ಕಾಶ್ಮೀರಿ ಕೆಹ್ವಾ ಮತ್ತು ನನ್-ಚಾಯ್ (ಉಪ್ಪು ಚಹಾ) ಇಲ್ಲಿನ ವಿಶೇಷ. ಕಾಶ್ಮೀರದಲ್ಲಿ ಸಿಗುವ ರುಚಿಯಂತೆಯೇ ಇಲ್ಲಿ ಭೋಜನವನ್ನು ತಯಾರು ಮಾಡಲಾಗುತ್ತದೆ.

ಕಾಶ್ಮೀರಿಗಳಿಗೆ ತಮ್ಮ ಮಣ್ಣಿನ ಸೊಗಡಿನ ಭೋಜನ ಕೈತಪ್ಪಬಾರದು ಎಂದು ಯೋಚಿಸಿ, ಬೆಂಗಳೂರಿನಲ್ಲಿಯೇ ಕಾಶ್ಮೀರಿ ಸರ್ಪೋಶ್​ ಆರಂಭಿಸಿದೆ. ಇಲ್ಲಿರುವ ಕಾಶ್ಮೀರಿಗಳಿಗೆ ಇದು ನೆರವಾಗಲಿದೆ. ಅಲ್ಲದೇ, ಬೇರೆಯವರು ಕೂಡ ಇದನ್ನು ರುಚಿ ನೋಡಿ ಸವಿಯಬಹುದು. ಕಣಿವೆಯಲ್ಲಿ ಸಿಗುವ ರುಚಿಯಂತೆಯೇ ಇಲ್ಲಿ ಊಟ ಇರುತ್ತದೆ ಎನ್ನುತ್ತಾರೆ ಉದ್ಯಮಿ ಅಜ್ಮತ್ ಅಲಿ ಮಿರ್.

ಹೋಟೆಲಲ್ಲಿದೆ ಕಾಶ್ಮೀರಿ ಸಂಸ್ಕೃತಿ:ಊಟ, ತಿನಿಸು ಮಾತ್ರವಲ್ಲದೇ ರೆಸ್ಟೋರೆಂಟ್​ ಅನ್ನು ಕಾಶ್ಮೀರಿಗಳ ಸಂಸ್ಕೃತಿಯ ಮಾದರಿಯಲ್ಲೇ ರೂಪಿಸಲಾಗಿದೆ. ಸರ್ಪೋಶ್ ಅನ್ನು ಬಿದಿರಿನಿಂದ ರೂಪಿಸಿದ ವಸ್ತುಗಳು, ದೊಡ್ಡ ತಾಮ್ರದ ತಟ್ಟೆ, ಕಾಶ್ಮೀರಿ ಕರಕುಶಲ ವಸ್ತುಗಳು ಮತ್ತು ಕಲಾಕೃತಿಗಳನ್ನು ಎಲ್ಲೆಡೆ ಪ್ರದರ್ಶಿಸಲಾಗಿದೆ.

ಇದನ್ನೂ ಓದಿ:ತನ್ನದೇ ಕೇಸ್​ ವಾದಿಸಲು 68 ರ ಪ್ರಾಯದಲ್ಲಿ ಕಾನೂನು ಓದಿ ವಕೀಲನಾದ ವ್ಯಕ್ತಿ!

ABOUT THE AUTHOR

...view details