ನವದೆಹಲಿ:ಕಳೆದ ಫೆಬ್ರವರಿ ತಿಂಗಳಲ್ಲಿ ಪ್ರತಿ ಲೀಟರ್ ಹಾಲಿನ ಬೆಲೆಯಲ್ಲಿ ಎರಡು ರೂ. ಏರಿಸಿದ್ದ ಅಮೂಲ್ ಹಾಗೂ ಮದರ್ ಡೈರಿ ಇದೀಗ ಮತ್ತೆ ಬೆಲೆಯಲ್ಲಿ ಏರಿಸಿದೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಸಲ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಅಮೂಲ್ ಹಾಗೂ ಮದರ್ ಡೈರಿ ಪ್ರತಿ ಲೀಟರ್ ಹಾಲಿನಲ್ಲಿ ಎರಡು ರೂ. ಹೆಚ್ಚಿಸಿದ್ದು, ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಅಮೂಲ್ ಗೋಲ್ಡ್ ಬೆಲೆ ಇದೀಗ ಪ್ರತಿ ಅರ್ಧ ಲೀಟರ್‌ಗೆ 31 ರೂ, ಅಮೂಲ್ ತಾಜಾ ಅರ್ಧ ಲೀಟರ್‌ಗೆ 25 ರೂ, ಹಾಗೂ ಅಮೂಲ್ ಶಕ್ತಿ ಅರ್ಧ ಲೀಟರ್‌ಗೆ 28 ರೂಪಾಯಿ ಆಗಲಿದೆ. ಎಂಆರ್ಪಿಯಲ್ಲಿ ಶೇ. 4ರಷ್ಟು ಜಾಸ್ತಿಯಾಗಿದೆ. ಮದರ್ ಡೈರಿ ಕೂಡ ಹಾಲಿನ ಉತ್ಪನ್ನಗಳಲ್ಲಿ ಏರಿಕೆ ಮಾಡಿ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಸದ್ಯ ಟೋನ್ಡ್ ಹಾಲು ಪ್ರತಿ ಲೀಟರ್‌ಗೆ 51 ರೂ. ಇದ್ದು, ಡಬಲ್ ಟೋನ್ಡ್ ಹಾಲಿನ ದರ ಲೀಟರ್‌ಗೆ 45 ರೂ ಆಗಲಿದೆ.