ನವದೆಹಲಿ:ವಿಮಾನಯಾನ ಸೇವೆಗೆ ಮತ್ತೊಂದು ಸಂಸ್ಥೆ ಸೇರ್ಪಡೆಯಾಗಿದೆ. ಮುಂಬೈ-ಅಹಮದಾಬಾದ್ ಮಾರ್ಗದ ನಡುವೆ ಭಾನುವಾರ ಮೊದಲ ವಿಮಾನ ಸಂಚರಿಸುವ ಮೂಲಕ ಆಕಾಸಾ ಏರ್ಲೈನ್ಸ್ ಅಧಿಕೃತವಾಗಿ ಕಾರ್ಯಾರಂಭಿಸಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ಹಾರಾಟಕ್ಕೆ ಚಾಲನೆ ಕೊಟ್ಟರು.
ಆಕಾಸಾ ವಿಮಾನವು ಮೊದಲ ಹಂತದಲ್ಲಿ ಮುಂಬೈ-ಅಹಮದಾಬಾದ್ ನಗರಗಳ ನಡುವೆ ವಾರಕ್ಕೊಮ್ಮೆ ಸಂಚರಿಸಲಿದೆ. ಹೀಗೆ 28 ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಆ.13 ರಿಂದ ಬೆಂಗಳೂರು ಮತ್ತು ಕೊಚ್ಚಿ ನಡುವೆ 28 ವಾರಾಂತ್ಯ ವಿಮಾನಗಳು ಸಂಚರಿಸಲಿವೆ. ತಕ್ಷಣವೇ ಜಾರಿಗೆ ಬರುವಂತೆ ಟಿಕೆಟ್ ಮಾರಾಟ ಆರಂಭಿಸಲಾಗಿದೆ. ಮೊಬೈಲ್ ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಆದ www.akasaair.com ಮೂಲಕ ವಿಮಾನಗಳ ಟಿಕೆಟ್ ಬುಕಿಂಗ್ ಮಾಡಿಕೊಳ್ಳಬಹುದು.