ಕರ್ನಾಟಕ

karnataka

ETV Bharat / business

ಭಾರ್ತಿ ಏರ್​ಟೆಲ್‌ಗೆ 5 ತಿಂಗಳಲ್ಲೇ ಒಂದು ಕೋಟಿ​ 5ಜಿ ಬಳಕೆದಾರರು!

ಭಾರ್ತಿ ಏರ್​ಟೆಲ್​ ದೇಶಾದ್ಯಂತ ಅತಿ ವೇಗವಾಗಿ 5ಜಿ ಸೇವೆಯನ್ನು ವಿಸ್ತರಿಸುತ್ತಿದೆ.

By

Published : Feb 27, 2023, 3:28 PM IST

ಏರ್​ಟೆಲ್​ 5ಜಿ ಬಳಕೆದಾರರು
ಏರ್​ಟೆಲ್​ 5ಜಿ ಬಳಕೆದಾರರು

ನವದೆಹಲಿ:ಅತಿ ವೇಗದ ಅಂತರ್ಜಾಲ ಸಂಪರ್ಕ ನೀಡುವ 5ಜಿ ತರಂಗಾಂತರವನ್ನು ಕೇಂದ್ರ ಸರ್ಕಾರ ಕಳೆದ ಅಕ್ಟೋಬರ್​ನಲ್ಲಿ ದೇಶಕ್ಕೆ ಪರಿಚಯಿಸಿತು. ಇದಾದ ಬಳಿಕ ಟೆಲಿಕಾಂ ದೈತ್ಯ ಭಾರ್ತಿ ಏರ್​ಟೆಲ್​ ಈವರೆಗೂ 10 ಮಿಲಿಯನ್​ (ಒಂದು ಕೋಟಿ) 5ಜಿ ಬಳಕೆದಾರರನ್ನು ದಾಟಿದೆ. ಈ ಬಗ್ಗೆ ಕಂಪನಿಯೇ ಮಾಹಿತಿ ನೀಡಿದೆ.

2024ರ ಅಂತ್ಯದ ವೇಳೆಗೆ ಪ್ರತಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಏರ್‌ಟೆಲ್ 5G ಸೇವೆಗಳನ್ನು ವಿಸ್ತರಿಸಲಾಗುವುದು. 5 ತಿಂಗಳೊಳಗೆ ಐದನೇ ತಲೆಮಾರಿನ ಅಂತರ್ಜಾಲ ಸೇವೆಯ ಬಳಕೆದಾರರ ಸಂಖ್ಯೆ 5 ಮಿಲಿಯನ್​ ದಾಟಿದೆ. ಸೇವೆ ಆರಂಭವಾದ ಒಂದೇ ತಿಂಗಳಲ್ಲಿ 1 ಮಿಲಿಯನ್(10 ಲಕ್ಷ)​ ಜನರನ್ನು ಹೊಂದುವ ಇಷ್ಟು ಪ್ರಮಾಣದಲ್ಲಿ ಬಳಕೆದಾರರ ಹೊಂದಿದ ದೇಶದ ಮೊದಲ ಮತ್ತು ಏಕೈಕ ಟೆಲಿಕಾಂ ಸಂಸ್ಥೆ ನಮ್ಮದು ಎಂದು ಭಾರ್ತಿ ಏರ್‌ಟೆಲ್ ಸೋಮವಾರ ಪ್ರಕಟಿಸಿದೆ.

ಅನುಕೂಲವೇನು?: 2022 ರ ಅಕ್ಟೋಬರ್ 1 ರಂದು ದೇಶದಲ್ಲಿ ಅತಿ ವೇಗದ 5G ಸೇವೆಗಳನ್ನು ಪ್ರಾರಂಭಿಸಲಾಯಿತು. 5G ಸೇವೆಗಳು ಅಲ್ಟ್ರಾ ಲೋ ಲ್ಯಾಟೆನ್ಸಿ ಸಂಪರ್ಕ ಹೊಂದಿದೆ. ಮೊಬೈಲ್​ನಲ್ಲಿ ಉತ್ತಮ ಗುಣಮಟ್ಟದ ವಿಡಿಯೋ ಅಥವಾ ಸಿನಿಮಾವನ್ನು ಸೆಕೆಂಡುಗಳ ಅಂತರದಲ್ಲೇ ಹೆಚ್ಚು ಜನಸಂದಣಿಯ ಪ್ರದೇಶದಲ್ಲೂ ಡೌನ್‌ಲೋಡ್ ಮಾಡಬಹುದು. ಭಾರ್ತಿ ಏರ್‌ಟೆಲ್ ತನ್ನ 5G ನೆಟ್‌ವರ್ಕ್ ಸಂಪರ್ಕವನ್ನು ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿದೆ. ಏರ್‌ಟೆಲ್ 5G ಪ್ಲಸ್ ಇತ್ತೀಚೆಗೆ ಈಶಾನ್ಯ ಭಾರತದ 7 ಹೊಸ ನಗರಗಳಿಗೆ ತನ್ನ ಐದನೇ ತಲೆಮಾರಿನ ನೆಟ್‌ವರ್ಕ್ ಸಂಪರ್ಕವನ್ನು ಆರಂಭಿಸಿದೆ. ಕೊಹಿಮಾ, ಇಟಾನಗರ, ಐಜ್ವಾಲ್, ಗ್ಯಾಂಗ್ಟಾಕ್, ಸಿಲ್ಚಾರ್, ದಿಬ್ರುಗಢ್ ಮತ್ತು ಟಿನ್ಸುಕಿಯಾದಲ್ಲಿ ವಾಸಿಸುವ ಏರ್‌ಟೆಲ್ ಬಳಕೆದಾರರು ಈಗ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಬಳಸಬಹುದು. ಈ ಹಿಂದೆ ಏರ್​ಟೆಲ್ ಗುವಾಹಟಿ, ಶಿಲ್ಲಾಂಗ್, ಇಂಫಾಲ್, ಅಗರ್ತಲಾ ಮತ್ತು ದಿಮಾಪುರ್ ಸೇರಿದಂತೆ ಈಶಾನ್ಯ ಭಾರತದ ಇತರ ನಗರಗಳಲ್ಲಿ ತನ್ನ 5G ಸೇವೆಯನ್ನು ಪ್ರಾರಂಭಿಸಿತ್ತು.

ಸ್ಪೀಡ್​ ಚಾರ್ಟ್​ನಲ್ಲಿ ಭಾರತ:ದೇಶದಲ್ಲಿ 5ಜಿ ಆರಂಭಿಸಿದ ಬಳಿಕ ಮೊಬೈಲ್​ ಡೇಟಾ ವೇಗದ ವಿಚಾರದಲ್ಲಿ ಭಾರತವು ಜಾಗತಿಕವಾಗಿ ಭಾರಿ ಏರಿಕೆ ಕಂಡಿತ್ತು. ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂ ಕಂಪನಿಗಳು 5ಜಿ ನೆಟ್​ವರ್ಕ್​ ಆರಂಭಿಸಿದ ಬಳಿಕ ಮೊಬೈಲ್​ ಡೇಟಾ ವೇಗದ ವಿಚಾರದಲ್ಲಿ ಭಾರತವು ಜಾಗತಿಕವಾಗಿ 10 ಸ್ಥಾನಗಳಷ್ಟು ಹೆಚ್ಚಳ ಕಂಡಿದೆ. ಕಳೆದ ಡಿಸೆಂಬರ್​ನಲ್ಲಿ 79ನೇ ಸ್ಥಾನದಲ್ಲಿದ್ದ ದೇಶ ಜನವರಿಯಲ್ಲಿ 69 ನೇ ಸ್ಥಾನಕ್ಕೆ ತಲುಪಿತ್ತು. ನೆಟ್‌ವರ್ಕ್ ಇಂಟೆಲಿಜೆನ್ಸ್ ಮತ್ತು ಕನೆಕ್ಟಿವಿಟಿ ವಿಶ್ಲೇಷಕ ಕಂಪನಿ ಓಕ್ಲಾ (Ookla) ನೀಡಿದ ಮಾಹಿತಿಯ ಪ್ರಕಾರ, ಭಾರತ ಜಾಗತಿಕವಾಗಿ ಒಟ್ಟಾರೆ ಮಧ್ಯಮ ಸ್ಥಿರ ಬ್ರಾಡ್‌ಬ್ಯಾಂಡ್ ವೇಗದ ಶ್ರೇಣಿಯಲ್ಲಿ ಎರಡು ಸ್ಥಾನಗಳಷ್ಟು ಮೇಲಕ್ಕೇರಿದೆ. ಡಿಸೆಂಬರ್‌ನಲ್ಲಿ 81 ರಷ್ಟಿದ್ದು, ಅದು ಜನವರಿಯಲ್ಲಿ 79 ಕ್ಕೆ ಹೆಚ್ಚಳವಾಗಿದೆ.

ಇದನ್ನೂ ಓದಿ:ದೇಶದಲ್ಲಿ 5G ಸೇವೆ ಯುಗಾರಂಭ.. ಹೈಸ್ಪೀಡ್​ ಇಂಟರ್​ನೆಟ್​ಗೆ ಚಾಲನೆ ನೀಡಿದ ಪ್ರಧಾನಿ ಮೋದಿ

ABOUT THE AUTHOR

...view details