ಮುಂಬೈ(ಮಹಾರಾಷ್ಟ್ರ):ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ತಿಮಿಂಗಲ ಆಕೃತಿಯ ಏರ್‌ಬಸ್ ಬೆಲುಗಾ ಸರಕು ಸಾಗಣೆ ವಿಮಾನವನ್ನು ಕಂಡು ಜನರು ಅಚ್ಚರಿಗೊಂಡಿದ್ದಾರೆ. ಇಂಧನ ತುಂಬಿಸಿಕೊಳ್ಳಲು ಇಲ್ಲಿ ಇಳಿದ ವಿಮಾನದ ಆಕೃತಿ ಪ್ರಯಾಣಿಕರನ್ನು ಅಚ್ಚರಿಗೆ ದೂಡಿತು.
A300 -600ST ಸೂಪರ್ ಟ್ರಾನ್ಸ್‌ಪೋರ್ಟರ್ ಎಂದು ಕರೆಯಲ್ಪಡುವ ಏರ್‌ಬಸ್ ಬೆಲುಗಾ ದೈತ್ಯ ಗಾತ್ರದ ಸರಕು ಸಾಗಣೆ ವಿಮಾನವಾಗಿದೆ. ಇದನ್ನು 1990 ರ ದಶಕದಿಂದ ಕೈಗಾರಿಕಾ ಏರ್ಲಿಫ್ಟ್ಗಾಗಿ ಇದನ್ನು ಬಳಸುತ್ತದೆ.
ಏರ್‌ಬಸ್ ಬೆಲುಗಾ ವಿಮಾನದ ಮುಂಭಾಗ ತಿಮಿಂಗಿಲದ(ವೇಲ್ಸ್) ಮೂಗಿನ ಆಕಾರ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿಯೂ ಒಂದಾಗಿದೆ. ಬಾಹ್ಯಾಕಾಶ, ಇಂಧನ, ಮಿಲಿಟರಿ, ಏರೋನಾಟಿಕ್ಸ್ ಒಳಗೊಂಡಂತೆ ವಿವಿಧ ವಲಯಗಳ ಸರಕು ಸಾಗಣೆ ಸೇವೆ ನೀಡುತ್ತದೆ. ಇದರ ಗಾತ್ರ 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ.