ಕರ್ನಾಟಕ

karnataka

ETV Bharat / business

Air India flight to San Francisco: ಎಲ್ಲ 216 ಪ್ರಯಾಣಿಕರಿಗೆ ಟಿಕೆಟ್​ ದರ ವಾಪಸ್​ ಪಾವತಿಸಿದ ಏರ್​​ಲೈನ್ಸ್​ - ರಷ್ಯಾದ ಮಗದನ್​​​ ವಿಮಾನ ನಿಲ್ದಾಣ

ತಾಂತ್ರಿಕ ದೋಷದಿಂದ ರಷ್ಯಾದ ಮಗದನ್​​​ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ಲ್ಯಾಂಡಿಂಗ್​ ಆಗಿತ್ತು. ಈ ಹಿನ್ನೆಲೆಯಲ್ಲಿ ಏರ್​ ಇಂಡಿಯಾ, ವಿಮಾನದ ಎಲ್ಲ ಪ್ರಯಾಣಿಕರಿಗೆ ಟಿಕೆಟ್​ ದರವನ್ನು ವಾಪಸ್​ ಮಾಡಲು ನಿರ್ಧಾರ ಮಾಡಿದೆ.

Etv BharatAir India flight to San Francisco: ಎಲ್ಲ 216 ಪ್ರಯಾಣಿಕರಿಗೆ ಟಿಕೆಟ್​ ದರ ವಾಪಸ್​ ಪಾವತಿಸಿದ ಏರ್​​ಲೈನ್ಸ್​
Air India flight to San Francisco: ಎಲ್ಲ 216 ಪ್ರಯಾಣಿಕರಿಗೆ ಟಿಕೆಟ್​ ದರ ವಾಪಸ್​ ಪಾವತಿಸಿದ ಏರ್​​ಲೈನ್ಸ್​

By

Published : Jun 9, 2023, 6:46 AM IST

ನವದೆಹಲಿ: ತಾಂತ್ರಿಕ ದೋಷದಿಂದ ರಷ್ಯಾದ ಮಗದನ್​ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ಲ್ಯಾಂಡಿಂಗ್​ ಆಗಿತ್ತು. ಹೀಗಾಗಿ ಪ್ರಯಾಣಿಕರು ಸಂಕಷ್ಟ ಅನುಭವಿಸಿದ್ದರು. ಎರಡು ದಿನಗಳ ಕಾಲ ಮಗದನ್​ ವಿಮಾನ ನಿಲ್ದಾಣದಲ್ಲಿ ನಿಲುಗಡೆ ಆಗಿದ್ದ ದೆಹಲಿ-ಸ್ಯಾನ್ ಫ್ರಾನ್ಸಿಸ್ಕೋ ವಿಮಾನದ ಎಲ್ಲ 216 ಪ್ರಯಾಣಿಕರಿಗೆ ಏರ್​​ ಇಂಡಿಯಾ, ಟಿಕೆಟ್​​​ ಖರೀದಿಸಿದ ಹಣವನ್ನ ಮರುಪಾವತಿ ಮಾಡಲಾಗವುದು ಎಂದು ಟಾಟಾ ಒಡೆತನದ ಏರ್ ಇಂಡಿಯಾ ಗುರುವಾರ ತಿಳಿಸಿದೆ.

"ನಾವು ಪ್ರಯಾಣದ ದರವನ್ನು ಸಂಪೂರ್ಣವಾಗಿ ಮರುಪಾವತಿಸುತ್ತೇವೆ ಮತ್ತು ಹೆಚ್ಚುವರಿಯಾಗಿ, ಏರ್ ಇಂಡಿಯಾದಲ್ಲಿ ಪ್ರಯಾಣಿಕರಿಗೆ ಮುಂದಿನ ಪ್ರಯಾಣಕ್ಕಾಗಿ ವೋಚರ್​ ನೀಡುತ್ತೇವೆ ಎಂದು‘‘ ಹಿರಿಯ ಏರ್‌ಲೈನ್ ಕಾರ್ಯನಿರ್ವಾಹಕ ರಾಜೇಶ್ ಡೋಗ್ರಾ ತಿಳಿಸಿದ್ದಾರೆ. ತಾಂತ್ರಿಕ ತೊಂದರೆಯಿಂದ ಮಗದನ್​ ವಿಮಾನ ನಿಲ್ದಾಣದಲ್ಲಿ ಏರ್​ ಇಂಡಿಯಾ ವಿಮಾನ ಲ್ಯಾಂಡ್​ ಆಗಿದ್ದ ಹಿನ್ನೆಲೆಯಲ್ಲಿ ಕ್ಷಮೆ ಯಾಚಿಸಿರುವ ಏರ್​ ಇಂಡಿಯಾ, ಎಲ್ಲ ಪ್ರಯಾಣಿಕರಿಗೆ ಪತ್ರ ಬರೆದಿತ್ತು.

ಇದನ್ನು ಓದಿ:ಕಾಣೆಯಾದ ಬಾಲಕ ಸೇತುವೆ ಪಿಲ್ಲರ್​ಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದ್ದ; 24 ಗಂಟೆ ಶ್ರಮಿಸಿ, ರಕ್ಷಿಸಿದರೂ ಉಳಿಯಲಿಲ್ಲ ಪ್ರಾಣ!

ಮಂಗಳವಾರ ಸ್ಯಾನ್​ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ AI173 ಎಂಜಿನ್‌ನಲ್ಲಿ ಕಂಡು ಬಂದ ತಾಂತ್ರಿಕ ದೋಷದಿಂದಾಗಿ ಮಗದನ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿತ್ತು. ತಾಂತ್ರಿಕ ದೋಷದಿಂದ ಏರ್​ ಇಂಡಿಯಾ ತುರ್ತು ಲ್ಯಾಂಡಿಂಗ್ ಆಗಿದ್ದರಿಂದ ಜೂನ್ 7 ರಂದು ಮುಂಬೈನಿಂದ ಮಗದನ್ ವಿಮಾನ ನಿಲ್ದಾಣಕ್ಕೆ ಪರ್ಯಾಯ ವಿಮಾನ AI173D ಅನ್ನು ರವಾನಿಸಿ, ಪ್ರಯಾಣಿಕರನ್ನ ಸ್ಯಾನ್​ ಫ್ರಾನ್ಸಿಸ್ಕೋಗೆ ರವಾನೆ ಮಾಡಲಾಗಿತ್ತು.

ಇದಕ್ಕೂ ಮುನ್ನ ಗುರುವಾರ ಏರ್ ಇಂಡಿಯಾ ತಾನು ನೀಡಿದ್ದ ಹೇಳಿಕೆಯಲ್ಲಿ AI173D ವಿಮಾನವು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ (SFO) 00:07 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡಿಂಗ್​ ಆಗಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಅವರವರ ಸ್ಥಳಗಳಿಗೆ ತೆರಳಲು ಅನುಕೂಲ ಮಾಡಿಕೊಟ್ಟಿತು ಎಂದು ಹೇಳಿದೆ.

"ನಮ್ಮ ಎಲ್ಲಾ ಪ್ರಯಾಣಿಕರಿಗೆ ಕ್ಲಿಯರೆನ್ಸ್ ಔಪಚಾರಿಕತೆಗಳೊಂದಿಗೆ ಗರಿಷ್ಠ ಆನ್-ಗ್ರೌಂಡ್ ಸಹಾಯ ನೀಡಲಾಗಿದೆ. ಮತ್ತು ಇತರ ಅಗತ್ಯ ಬೆಂಬಲವನ್ನು ಒದಗಿಸಲಾಗಿದೆ" ಎಂದು ಏರ್​ ಇಂಡಿಯಾ ಹೇಳಿದೆ.

ಹವಾಮಾನ ವೈಪರೀತ್ಯ ಹಾಗೂ ತಾಂತ್ರಿಕ ಸಮಸ್ಯೆಗಳಿಂದ ಆಗಾಗ ಇಂತಹ ಸಮಸ್ಯೆಗಳು ತಲೆದೋರುತ್ತವೆ. ಕಳೆದ ತಿಂಗಳು ಮೇ 25ರಂದು ದೆಹಲಿ ವಿಮಾನ ನಿಲ್ದಾಣದಲ್ಲಿ ಹವಾಮಾನ ವೈಪರೀತ್ಯ ಇದ್ದುದರಿಂದ ವಿಸ್ತಾರಾ ಯುಕೆ 996 ವಿಮಾನ ರಾಜಸ್ಥಾನದ ಜೈಪುರದಲ್ಲಿ ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್​ ಮಾಡಲಾಗಿತ್ತು. ದೆಹಲಿಯ ಕೆಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿತ್ತು. ಹಠಾತ್ ಹವಾಮಾನ ಬದಲಾವಣೆ ಮತ್ತು ತಾಪಮಾನ ಕುಸಿತಕ್ಕೆ ಕಾರಣವಾಗಿತ್ತು.

ಇಂಡಿಗೋ ವಿಮಾನ ಇಂಡೋನೇಷ್ಯಾದಲ್ಲಿ ಲ್ಯಾಂಡಿಂಗ್:ಇನ್ನುಕ್ಯಾಬಿನ್‌ ಸಿಬ್ಬಂದಿಗೆ ರಬ್ಬರ್ ಮತ್ತು ಇಂಧನ ವಾಸನೆ ಬಂದ ಕಾರಣ, ಸಿಂಗಾಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಕಳೆದ ಮೇ 10ರಂದು ಇಂಡೋನೇಷ್ಯಾದ ಮೆಡಾನ್‌ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿತ್ತು.

ಇದನ್ನು ಓದಿ:ಸ್ಯಾನ್‌ ಫ್ರಾನ್ಸಿಸ್ಕೋಗೆ ಹೊರಟ ​​​​ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; ರಷ್ಯಾದಲ್ಲಿ ಲ್ಯಾಂಡಿಂಗ್

ABOUT THE AUTHOR

...view details