ನವದೆಹಲಿ:ಪಾವತಿಸಿದ ಬ್ಲೂಟಿಕ್ ಚಂದಾದಾರರಿಗೆ ದೀರ್ಘಾವಧಿಯ ವಿಡಿಯೋಗಳನ್ನು ಪ್ರಾರಂಭಿಸಿದ ನಂತರ, ಟ್ವಿಟರ್ ಈಗ WeChat ನಂತಹ ಎಲ್ಲದಕ್ಕೂ ಆ್ಯಪ್ ಮಾಡಲು ಯೋಜಿಸಿದ್ದಾರೆ ಎಲೋನ್ ಮಸ್ಕ್. ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ವಾಯ್ಸ್ ಮತ್ತು ವಿಡಿಯೋ ಚಾಟ್ ಸೌಲಭ್ಯವನ್ನು ಶೀಘ್ರದಲ್ಲೇ ಬರಲಿದೆ ಎಂದು ಅವರು ಶುಕ್ರವಾರ ಘೋಷಿಸಿದ್ದಾರೆ. ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳ ಪ್ರಕಟಣೆಯ ನಂತರ, "ಈ ವೇದಿಕೆಯು ನಿಮಗೆ ಹೆಚ್ಚು ಸಂತೋಷ ಮತ್ತು ವಿವರಣೆ ಲಭಿಸುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿ ಹೊಸ ಫೀಚರ್ ಘೋಷಿಸಿದ ಮಸ್ಕ್:ಟೆಕ್ ಬಿಲಿಯನೇರ್ ಈ ತಿಂಗಳ ಆರಂಭದಲ್ಲಿ ಎನ್‌ಕ್ರಿಪ್ಟ್ ಮಾಡಿದ ಡಿಎಂಗಳಂತಹ ಇತರ ವೈಶಿಷ್ಟ್ಯಗಳೊಂದಿಗೆ ವಾಯ್ಸ್ ಮತ್ತು ವಿಡಿಯೋ ಚಾಟ್ ವೈಶಿಷ್ಟ್ಯವನ್ನು ಘೋಷಿಸಿದ್ದರು. "ಶೀಘ್ರದಲ್ಲೇ ಟಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿರುವ ನಿಮ್ಮ ಖಾತೆಯಿಂದ ಯಾರಿಗಾದರೂ ವಾಯ್ಸ್ ಮತ್ತು ವಿಡಿಯೋ ಚಾಟ್ ಮಾಡಬಹುದು. ಆದ್ದರಿಂದ ನೀವು ನಿಮ್ಮ ಫೋನ್ ಸಂಖ್ಯೆಯನ್ನು ನೀಡದೆಯೇ ಜಗತ್ತಿನಲ್ಲಿರುವ ಜನರೊಂದಿಗೆ ಮಾತನಾಡಬಹುದು" ಎಂದು ಮಸ್ಕ್ ತಿಳಿಸಿದ್ದಾರೆ.
ಇದನ್ನೂ ಓದಿ:ಗೂಗಲ್ ಸಿಇಒ ಸುಂದರ್ ಪಿಚೈ ಪೂರ್ವಿಕರ ಮನೆ ಮಾರಾಟ: ತಮಿಳು ನಟನಿಂದ ಖರೀದಿ
ಎರಡು ಗಂಟೆಗಳ ವಿಡಿಯೋಗಳನ್ನು ಅಪ್‌ಲೋಡ್ ಮಾಡಲು ಅವಕಾಶ:ಈಗ ಪಾವತಿಸಿದ ಬಳಕೆದಾರರಿಗಾಗಿ ಟ್ವಿಟರ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಅಪ್‌ಲೋಡ್ ಮಿತಿಯನ್ನು 60 ನಿಮಿಷಗಳಿಂದ ಎರಡು ಗಂಟೆಗಳವರೆಗೆ ವಿಸ್ತರಿಸಿದೆ. ಟ್ವಿಟರ್ ಬ್ಲೂಟಿಕ್ ಚಂದಾದಾರರು ಈಗ ಎರಡು ಗಂಟೆಗಳ ವಿಡಿಯೋಗಳನ್ನು (8GB) ಅಪ್ಲೋಡ್ ಮಾಡಬಹುದು ಎಂದು ಮಸ್ಕ್ ಗುರುವಾರ ಟ್ವೀಟ್ ಮಾಡಿದ್ದಾರೆ.