ಕರ್ನಾಟಕ

karnataka

ETV Bharat / business

ಖುಷಿ ಸಮಾಚಾರ: ಸಾಮಾನ್ಯ ಸಿಲಿಂಡರ್ ಬೆಲೆ ಇಳಿಕೆ ಬಳಿಕ ವಾಣಿಜ್ಯ ಬಳಕೆ ಎಲ್​​​ಪಿಜಿ ಬೆಲೆಯಲ್ಲೂ 158 ರೂ ಇಳಿಕೆ​​​​​​​​​ - ಎಲ್​​​​ಪಿಜಿ ಸಿಲಿಂಡರ್ ಬೆಲೆ

ವಾಣಿಜ್ಯ ಬಳಕೆದಾರರಿಗೆ ತೈಲ ಕಂಪನಿಗಳು ಬಿಗ್​ ರಿಲೀಫ್​ ಕೊಟ್ಟಿವೆ. ವಾಣಿಜ್ಯ ಬಳಕೆ ಎಲ್​​​​ಪಿಜಿ ಸಿಲಿಂಡರ್ ಬೆಲೆಯಲ್ಲಿ 158 ರೂ ಕಡಿತವಾಗಿದೆ.

After domestic LPG price reduction, commercial LPG prices cut by Rs 158
ಖುಷಿ ಸಮಾಚಾರ: ಸಾಮಾನ್ಯ ಸಿಲಿಂಡರ್ ಬೆಲೆ ಇಳಿಕೆ ಬಳಿಕ ವಾಣಿಜ್ಯ ಬಳಕೆ ಎಲ್​​​ಪಿಜಿ ಬೆಲೆಯಲ್ಲೂ 158 ರೂ ಇಳಿಕೆ​​​​​​​​​

By ETV Bharat Karnataka Team

Published : Sep 1, 2023, 9:12 AM IST

ನವದೆಹಲಿ:ಮೊನ್ನೆ ಮೊನ್ನೆ ಪ್ರಧಾನಿ ಮೋದಿ ಗೃಹ ಬಳಕೆ ಎಲ್​ಪಿಜಿ ಬೆಲೆಯಲ್ಲಿ 200 ರೂ ಇಳಿಕೆ ಘೋಷಣೆ ಮಾಡಿದ್ದರು. ಇದೀಗ ಇವತ್ತಿನಿಂದ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್​ ಬೆಲೆಯಲ್ಲಿ 158 ರೂ ಕಡಿತ ಮಾಡಿ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿ (ಒಎಂಸಿ) ಹೊಸ ದರ ಘೋಷಣೆ ಮಾಡಿದೆ.

19 ಕೆ.ಜಿ ತೂಗುವ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 158 ರೂ.ಗಳಷ್ಟು ಕಡಿತಗೊಳಿಸಿ ಪ್ರಕಟಣೆ ಹೊರಡಿಸಿವೆ ಎಂದು ಮೂಲಗಳು ತಿಳಿಸಿವೆ. ಹೊಸ ಬೆಲೆಗಳು ಇಂದಿನಿಂದ ಜಾರಿಗೆ ಬರಲಿದ್ದು, ದೆಹಲಿಯ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟದ ಬೆಲೆ 1,522 ರೂ ಆಗಿರಲಿದೆ. ಈ ಹಿಂದೆ ಅಂದರೆ ರಕ್ಷಾ ಬಂಧನದ ಮುನ್ನಾದಿನದಂದು, ದೇಶದ ಮಹಿಳೆಯರಿಗೆ ಉಡುಗೊರೆಯಾಗಿ ಕೇಂದ್ರ ಸರ್ಕಾರವು ದೇಶೀಯ ಎಲ್‌ಪಿಜಿ ಬೆಲೆಯನ್ನು 200 ರೂ. ಕಡಿಮೆ ಮಾಡಿ ಘೋಷಣೆ ಹೊರಡಿಸಿತ್ತು.

ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳು ಮೊದಲ ತಾರೀಖಿನಂದು ದರ ಪರಿಷ್ಕರಣೆ ಮಾಡಲಾಗುತ್ತಿದೆ. ಅದರಂತೆ ಇಂದು ವಾಣಿಜ್ಯ ಬಳಕೆ ಸಿಲಿಂಡರ್​ನ ಎಲ್​​ಪಿಜಿ ಬೆಲೆಯಲ್ಲಿ 158 ರೂ ಕಡಿತ ಮಾಡಿ ತೈಲ ಕಂಪನಿಗಳು ಘೋಷಣೆ ಮಾಡಿವೆ. ಹೊಸ ದರಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುತ್ತವೆ. ಆಗಸ್ಟ್‌ನಲ್ಲಿ, ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಒಎಂಸಿಗಳು 99.75ರೂಪಾಯಿ ಕಡಿತ ಮಾಡಿ ಆದೇಶಿಸಿದ್ದವು. ಹೀಗಾಗಿ ಎರಡು ಸಾವಿರದ ಗಡಿ ದಾಟಿದ್ದ ವಾಣಿಜ್ಯ ಗ್ಯಾಸ್​ ಸಿಲಿಂಡರ್ ಬೆಲೆ 1500 ರ ಗಡಿಗೆ ಬಂದಿದೆ. ಇದು ಹೋಟೆಲ್​ ಸೇರಿದಂತೆ ಇನ್ನಿತರ ವಲಯಗಳ ಬಳಕೆದಾರರಿಗೆ ಅನುಕೂಲವಾಗಲಿದೆ.

ಜುಲೈನಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ತಲಾ 7 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಈ ಏರಿಕೆಗೆ ಮೊದಲು, ಈ ವರ್ಷದ ಮೇ ಮತ್ತು ಜೂನ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ಸತತ ಎರಡು ಬಾರಿ ಕಡಿತ ಮಾಡಲಾಗಿತ್ತು. ಮೇ ತಿಂಗಳಲ್ಲಿ OMC ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 172 ರೂಪಾಯಿಗಳಷ್ಟು ಕಡಿಮೆಗೊಳಿಸಿದರೆ, ಜೂನ್‌ನಲ್ಲಿ 83 ರೂಪಾಯಿಗಳಷ್ಟು ದರ ಕಡಿತ ಮಾಡಿದ್ದವು.

ಪೆಟ್ರೋಲಿಯಂ ಮತ್ತು ತೈಲ ಮಾರುಕಟ್ಟೆ ಕಂಪನಿಗಳು ಈ ವರ್ಷದ ಮಾರ್ಚ್ 1 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 350.50 ರೂ ಮತ್ತು ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಯೂನಿಟ್‌ಗೆ 50 ರೂ. ಹೆಚ್ಚಳ ಮಾಡಿ ಆದೇಶಿಸಿದ್ದವು. (ANI)

ಇದನ್ನು ಓದಿ:ಸೆಪ್ಟೆಂಬರ್​​ ತಿಂಗಳಲ್ಲಿ ಏನೆಲ್ಲಾ ಬದಲಾವಣೆ? ಯಾವ ರೂಲ್ಸ್​ ಚೇಂಜ್​.. ಹೀಗಿದೆ ಡೀಟೇಲ್ಸ್​​

ABOUT THE AUTHOR

...view details