ಕರ್ನಾಟಕ

karnataka

ETV Bharat / business

ತೆಲಂಗಾಣದಲ್ಲಿ ವಿವಿಧ ಯೋಜನೆಗೆ 12,400 ಕೋಟಿ ಹೂಡಿಕೆ ಒಡಂಬಡಿಕೆ ಸಹಿ ಹಾಕಿದ ಅದಾನಿ - ತೆಲಂಗಾಣದಲ್ಲಿ ದತ್ತಾಂಶ ಕೇಂದ್ರ

ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ತೆಲಂಗಾಣದಲ್ಲಿ ಹಲವು ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅದಾನಿ ಗ್ರೂಪ್​ ಮುಂದಾಗಿದೆ.

adani-to-invest-rs-12400-cr-in-data-centre-energy-projects-in-telangana
adani-to-invest-rs-12400-cr-in-data-centre-energy-projects-in-telangana

By ETV Bharat Karnataka Team

Published : Jan 17, 2024, 4:54 PM IST

Updated : Jan 17, 2024, 5:12 PM IST

ದಾವೋಸ್​​: ತೆಲಂಗಾಣದಲ್ಲಿ ದತ್ತಾಂಶ ಕೇಂದ್ರ, ಸ್ವಚ್ಛತಾ ಶಕ್ತಿ ಯೋಜನೆ ಮತ್ತು ಸಿಮೆಂಟ್​​ ಘಟಕ ಸೇರಿದಂತೆ ವಿವಿಧ ಯೋಜನೆಗಳಿಗೆ 12,400 ಕೋಟಿ ಹೂಡಿಕೆ ಮಾಡಲು ಅದಾನಿ ಗ್ರೂಪ್​ ನಿರ್ಧರಿಸಿದೆ. ಈ ಸಂಬಂಧ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಯಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಮತ್ತು ಅದಾನಿ ಗ್ರೂಪ್​ ಮುಖ್ಯಸ್ಥ ಗೌತಮ್​ ಅದಾನಿ ನೇತೃತ್ವದಲ್ಲಿ ಅದಾನಿ ಗ್ರೂಪ್​ ನಾಲ್ಕು ಒಡಂಬಡಿಕೆ ಸಹಿ ಹಾಕಿದೆ.

ಅದಾನಿ ಎಂಟರ್​​ಪ್ರೈಸಸ್​ 100 ಮೆಗಾವ್ಯಾಟ್​ನಲ್ಲಿ ಡಾಟಾ ಸೆಂಟರ್​ ನಿರ್ಮಾಣಕ್ಕೆ​​ 5 ಸಾವಿರ ಕೋಟಿ ಹೂಡಿಕೆ ಮಾಡಲಾಗುವುದು. ನವೀಕರಿಸಬಹುದಾದ ಶಕ್ತಿ ಘಟಕ ಅದಾನಿ ಗ್ರೀನ್​ ಎನರ್ಜಿ ಲಿಮಿಟೆಡ್​​ ಇಷ್ಟೇ ಪ್ರಮಾಣದ ಹಣದಲ್ಲಿ ಎರಡು ಪಂಪ್​ ಶೇಖರಣಾ ಯೋಜನೆ​ ಸ್ಥಾಪಿಸಲಿದೆ

ಇದರ ಅಂಬುಜಾ ಸಿಮೆಂಟ್​​​​ ಉದ್ಯಮವೂ ವರ್ಷಕ್ಕೆ 6 ಮಿಲಿಯನ್​ ಟನ್​ ಸಿಮೇಂಟ್​​​​​ ಉತ್ಪಾದನೆ ಘಟಕ ನಿರ್ಮಾಣಕ್ಕೆ 1,400 ಕೋಟಿ ಹೂಡಿಕೆ ಮಾಡಲಿದೆ. ಅದಾನಿ ರಕ್ಷಣಾ ಮತ್ತು ಏರೋಸ್ಪೇಸ್​​ ಡ್ರೋನ್​ ಮತ್ತು ಕ್ಷಿಪಣಿ ಸೌಲಭ್ಯ ನಿರ್ಮಾಣಕ್ಕೆ 1 ಸಾವಿರ ಕೋಟಿ ಹೂಡಿಕೆ ಮಾಡಲಿದೆ.

ವಿಶ್ವ ಆರ್ಥಿಕ ವೇದಿಕೆ 2024ರಲ್ಲಿ ಈ ನಾಲ್ಕು ಹೂಡಿಕೆಗೆ ಅದಾನಿ ಸಂಸ್ಥೆ ಮತ್ತು ತೆಲಂಗಾಣ ಸರ್ಕಾರ ಒಡಂಬಡಿಕೆಗೆ ಸಹಿ ಹಾಕಲಾಗಿದೆ. ಈ ಒಡಂಬಡಿಕೆಗಳು ತೆಲಂಗಾಣದ ಹಸಿರು, ಸುಸ್ಥಿರ, ಏಕೀಕರಣ ಆರ್ಥಿಕತೆ ಬೆಳವಣಿಗೆಗೆ ಬುನಾದಿ ಹಾಕಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹೀಗಿದೆ ನಾಲ್ಕು ಯೋಜನೆಗಳು: ಅದಾನಿ ಎಂಟರ್​ಪ್ರೈಸಸ್​ ಲಿಮಿಟೆಡ್​ (ಎಇಎಲ್​) ನವೀಕರಿಸಿದ ಶಕ್ತಿ ಬಳಕೆ ಮಾಡಿ, 100 ಮೆಗಾ ವ್ಯಾಟ್​ ಡಾಟಾ ಸೆಂಟರ್​ ಅನ್ನು ಮುಂದಿನ 5-7 ವರ್ಷದಲ್ಲಿ ನಿರ್ಮಾಣ ಮಾಡಲಾಗುವುದು. ಇದು ಸ್ಥಳೀಯ ಎಂಎಸ್​ಎಂಇ ಜೊತೆಗೆ ನಿಕಟವಾಗಿ ಕಾರ್ಯ ನಿರ್ವಹಿಸಲಿದೆ. ಇದರಿಂದ ನೇರ ಮತ್ತು ಪರೋಕ್ಷವಾಗಿ 600 ಮಂದಿಗೆ ಉದ್ಯೋಗ ಲಭಿಸಲಿದೆ. ಅದಾನಿ ಶಕ್ತಿ ಲಿಮಿಟೆಡ್​​​ ಕೊಯಬೆಸ್ತಗುಡೆಂನಲ್ಲಿ 850 ಮೆಗಾ ವ್ಯಾಟ್​​ ಮತ್ತು ನಚರಾಂನಲ್ಲಿ 500 ಮೆಗಾ ವ್ಯಾಟ್​​ನ ಎರಡು ಪಂಪ್​ ಶೇಖರಣಾ ಯೋಜನೆ ನಿರ್ಮಾಣ ಮಾಡಲಿದೆ.

ಅಂಬುಜಾ ಸಿಮೆಂಟ್​ ಮುಂದಿನ ಐದು ವರ್ಷದಲ್ಲಿ 70 ಎಕರೆ ಪ್ರದೇಶದಲ್ಲಿ 6 ಮಿಲಿಯನ್​ ಟನ್​ ಸಿಮೆಂಟ್​​​​​ ಉತ್ಪಾದನೆ ಸಾಮರ್ಥ್ಯದ​ ಘಟಕವನ್ನು ಅಭಿವೃದ್ಧಿಪಡಿಸಲಿದೆ. ಇದು ಅಂಬುಜಾ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸಲಿದ್ದು, 40 ಸಾವಿರ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ನೀಡಲಿದೆ.

ಅದಾನಿ ರಕ್ಷಣಾ ವ್ಯವಸ್ಥೆ ಮತ್ತು ತಂತ್ರಜ್ಞಾನವೂ ಪರಿಸರ ಸ್ನೇಹಿ ವ್ಯವಸ್ಥೆ ಮೂಲಕ ಮುಂದಿನ 10 ವರ್ಷದಲ್ಲಿ ಡ್ರೋನ್​​ ಮತ್ತು ಕ್ಷೀಪಣಿ ವ್ಯವಸ್ಥೆಗಳು ಸಂಶೋಧನೆ, ಅಭಿವೃದ್ಧಿ, ವಿನ್ಯಾಸ ಮತ್ತು ಉತ್ಪಾದನೆಗೆ 1ಸಾವಿರ ಕೋಟಿ ಹೂಡಿಕೆ ಮಾಡಿದೆ. ಇದರಿಂದ ಭಾರತದ ರಕ್ಷಣಾ ಸಾಮರ್ಥ್ಯ ಅಭಿವೃದ್ದಿಯಾಗಲಿದ್ದು, ಇದು 1 ಸಾವಿರ ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗ ನೀಡಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಅಹಮದಾಬಾದ್​ನಲ್ಲಿ ಮುಖ್ಯ ಕಚೇರಿ ಹೊಂದಿರುವ ದೇಶದ ಅತಿ ದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಅದಾನಿ ಗ್ರೂಪ್,​ ಬಂದರು, ವಿಮಾನ ನಿಲ್ದಾಣ, ಲಾಜಿಸ್ಟಿಕ್​, ಶಿಪ್ಪಿಂಗ್​ ಮತ್ತು ರೈಲ್​ ಲಾಜಿಸ್ಟಿಕ್​, ಸಂಪನ್ಮೂಲ, ಶಕ್ತಿ ಉತ್ಪಾದನೆ​ ಮತ್ತು​ ವಿತರಣೆ, ನವೀಕರಿಸಬಹುದಾದ ಶಕ್ತಿ, ಗ್ಯಾಸ್​, ಮೂಲಸೌಕರ್ಯ, ಅಗ್ರೋ, ರಿಯಲ್​ ಎಸ್ಟೇಟ್​​, ಸಾರ್ವಜನಿಕ ಸಾರಿಗೆ ಸೌಲಭ್ಯ, ಗ್ರಾಹಕ ಫೈನಾನ್ಸ್​ ಮತ್ತು ಸಾರ್ವಜನಿಕ ಸಾರಿಗೆ ಸೌಲಭ್ಯ ಮತ್ತು ರಕ್ಷಣ ಸೇರಿದಂತೆ ಮತ್ತಿತ್ತರವಲಯದಲ್ಲಿ ಉದ್ಯಮವನ್ನು ಹೊಂದಿದೆ.

ಇದನ್ನೂ ಓದಿ: ಹೈದರಾಬಾದ್​ನಿಂದ ಜರ್ಮನಿಯ ಫ್ರಾಂಕ್​ಫರ್ಟ್​ಗೆ ಲುಫ್ತಾನ್ಸ್​ ನೇರ ವಿಮಾನಯಾನ ಆರಂಭ

Last Updated : Jan 17, 2024, 5:12 PM IST

ABOUT THE AUTHOR

...view details