ಅಹಮದಾಬಾದ್ (ಗುಜರಾತ್):ಅದಾನಿ ಬಂದರುಗಳು ಮತ್ತು ವಿಶೇಷ ಆರ್ಥಿಕ ವಲಯ (ಎಪಿಎಸ್ಇಜೆಡ್) ಡಿಸೆಂಬರ್ ತ್ರೈಮಾಸಿಕದಲ್ಲಿ ಶೇಕಡಾ 18ರಷ್ಟು ಅಂದ್ರೆ, 4,786 ಕೋಟಿ ರೂ. ಆದಾಯ ಹೆಚ್ಚಿಸಿಕೊಂಡಿದೆ. 2021ರ ಅದೇ ತ್ರೈಮಾಸಿಕದಲ್ಲಿ, ಆದಾಯವು ರೂ.4,072 ಆಗಿತ್ತು ಎಂದು ಕಂಪನಿಯು ಘೋಷಣೆ ಮಾಡಿದೆ.
4,786 ಕೋಟಿ ರೂ. ಆದಾಯ ಗಳಿಕೆ:ಅಕ್ಟೋಬರ್ - ಡಿಸೆಂಬರ್ 2022 ತ್ರೈಮಾಸಿಕ ಮತ್ತು 2022-23ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಎಪಿಎಸ್ಇಜೆಡ್ ಗಳಿಸಿರುವ ಆದಾಯದ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಅಕ್ಟೋಬರ್ - ಡಿಸೆಂಬರ್ ತ್ರೈಮಾಸಿಕದಲ್ಲಿ ಅದಾನಿ ಸಮೂಹ ಕಂಪನಿಯ ಆದಾಯವು ಶೇ.18 ರಷ್ಟು ಏರಿಕೆಯಾಗಿದ್ದು, 4,786 ಕೋಟಿ ರೂ.ಗಳಿಗೆ ತಲುಪಿದೆ.
15,055 ಕೋಟಿ ರೂ. ಆದಾಯ:2021ರ ಅದೇ ತ್ರೈಮಾಸಿಕದಲ್ಲಿ ಎಸ್ಇಜೆಡ್ ಆದಾಯವು 4,072 ಕೋಟಿ ರೂ. ಇದ್ದರೆ, 2022-23ರ ಮೊದಲ ಮೂರು ತ್ರೈಮಾಸಿಕಗಳಲ್ಲಿ ಆದಾಯವು ಶೇಕಡಾ 16 ರಷ್ಟು ಏರಿಕೆಯಾಗಿ 15,055 ಕೋಟಿ ರೂ. ಗೆ ಏರಿಕೆ ಆಗಿದೆ. ಇನ್ನೂ ಡಿಸೆಂಬರ್ ತ್ರೈಮಾಸಿಕದಲ್ಲಿ ಸರ್ಕಾರಕ್ಕೆ ಕೊಡಬೇಕಾಗಿರುವ ತೆರಿಗೆ ಪಾವತಿಸಿದ ಬಳಿಕ ಉಳಿದ ಆದಾಯದಲ್ಲಿ ಶೇಕಡಾ 13ರಷ್ಟು ಕುಸಿದಿದ್ದು, 1,337 ರೂ.ಗಳಷ್ಟು ಆಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ 1,535 ಕೋಟಿ ರೂ. ಆದಾಯವನ್ನು ಗಳಿಸಿತ್ತು. ಮೂರು ತ್ರೈಮಾಸಿಕಗಳಲ್ಲಿ ಒಟ್ಟಾರೆ ಲಾಭವು ವಾರ್ಷಿಕ ಆಧಾರದ ಮೇಲೆ ಶೇಕಡಾ 11 ರಷ್ಟು ಹೆಚ್ಚಾಗಿದ್ದು, 4,252 ಕೋಟಿ ರೂ.ಗಳ ಗಡಿಯನ್ನು ತಲುಪಿದೆ. 2022-23ಕ್ಕೆ ಒದಗಿಸಲಾದ ತನ್ನ ಪೂರ್ಣ ವರ್ಷದ ಆದಾಯ ಮತ್ತು ಇಬಿಐಟಿಡಿಎ ಮಾರ್ಗದರ್ಶನದ ಆಧಾರದ ಮೇಲೆ ಕಂಪನಿಯು ಉತ್ತಮ ಸ್ಥಾನದಲ್ಲಿದೆ ಎಂದು ತಿಳಿದು ಬಂದಿದೆ.
ಸಿಇಓ ಕರಣ್ ಅದಾನಿ ಮಾಹಿತಿ:" ಹೈಫಾ ಪೋರ್ಟ್ ಕಂಪನಿ, ಐಒಟಿಎಲ್, ಐಸಿಡಿ ಟಂಬ್, ಓಷನ್ ಸ್ಪಾರ್ಕಲ್ ಮತ್ತು ಗಂಗಾವರಂ ಬಂದರಿನ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಕಂಪನಿ ತನ್ನ ವ್ಯವಹಾರ ಮಾದರಿಯನ್ನು ಸಾರಿಗೆ ಉಪಯುಕ್ತತೆಯಾಗಿ ಪರಿವರ್ತಿಸುವಲ್ಲಿ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದೆ‘‘ ಎಂದು ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯದ ಸಿಇಒ ನಿರ್ದೇಶಕ ಕರಣ್ ಅದಾನಿ ಹೇಳಿದರು.
ಅಂದಾಜು ಬಂಡವಾಳ ವೆಚ್ಚ:"ನಮ್ಮ ಸಮೂಹದ ಬೆಳವಣಿಗೆಯ ಪ್ರಯಾಣವನ್ನು ಮುಂದುವರಿದೆ. ಅದಾನಿ ಪೋರ್ಟ್ಸ್ ಹಾಗೂ ವಿಶೇಷ ಆರ್ಥಿಕ ವಲಯ, ಎಫ್-24, ಇಬಿಐಟಿಡಿಎಯಿಂದ 14,500 ರೂ.ಗಳಿಂದ 15,000 ಕೋಟಿ ರೂ.ಗಳ ಗುರಿಯನ್ನು ಹೊಂದಿದೆ. 4,000 ರೂ.ಗಳಿಂದ 4,500 ಕೋಟಿ ರೂ. ಬಂಡವಾಳ ವೆಚ್ಚ ಮಾಡಲು ನಿರ್ಧರಿಸಿದೆ. ನಾವು ಒಟ್ಟು ಸಾಲ ಮರುಪಾವತಿ ಮತ್ತು 5,000 ಕೋಟಿ ರೂ.ಗಳ ಪೂರ್ವಪಾವತಿ ಮಾಡಲು ನಿರ್ಧರಿಸಿದ್ದು, ಒಟ್ಟಿನಲ್ಲಿ ಇದನ್ನು ಇನ್ನಷ್ಟು ಸುಧಾರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಕರಣ್ ಅದಾನಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಮಾರುಕಟ್ಟೆ ಮೌಲ್ಯಕ್ಕಿಂತ ಅರ್ಧದಷ್ಟು ಕುಸಿತ ಕಂಡ ಅದಾನಿ ಸಮೂಹದ ಷೇರುಗಳ ಬೆಲೆ