ನವದೆಹಲಿ :ಅದಾನಿ ಗ್ರೂಪ್‌ನ ಮಾಧ್ಯಮ ವಿಭಾಗವು ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್ (NDTV) ನಲ್ಲಿ 29.18 ರಷ್ಟು ಪಾಲನ್ನು ಖರೀದಿಸಿದೆ ಎನ್ನಲಾಗುತ್ತಿದೆ. ಕಂಪನಿಯಲ್ಲಿ ಇನ್ನೂ 26 ಶೇಕಡಾ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಕ್ತ ಕೊಡುಗೆಯನ್ನು ಪ್ರಾರಂಭಿಸುತ್ತದೆ ಎಂದು ಹೇಳಿದೆ. ಈ ಮೂಲಕ ಅದಾನಿ ಸಮೂಹವು ಬ್ರಾಡ್‌ಕಾಸ್ಟರ್‌ನಲ್ಲಿ ಶೇಕಡಾ 55 ರಷ್ಟು ಪಾಲನ್ನು ಹೊಂದಿರುವ ಬಹುಪಾಲು ಷೇರು ಹೊಂದಿರುವ ಸಂಸ್ಥೆಯಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಪರೋಕ್ಷವಾಗಿ 29.18 ರಷ್ಟು ಪಾಲನ್ನು ಸ್ವಾಧೀನಪಡಿಸಿಕೊಳ್ಳುತ್ತಿದೆ. ಅಂದರೆ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ (AEL) ಒಡೆತನದ ಎಎಮ್ಜಿ(AMG) ಮೀಡಿಯಾ ನೆಟ್‌ವರ್ಕ್ ಲಿಮಿಟೆಡ್ (AMNL)ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ವಿಶ್ವಪ್ರದನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (VCPL) ಮೂಲಕ ಈ ಷೇರು ಖರೀದಿ ಮಾಡಲಾಗಿದೆ ಎಂದು ಹೇಳಲಾಗ್ತಿದೆ.
ಸಾರ್ವಜನಿಕ ಷೇರುದಾರರಿಂದ 4 ರೂಪಾಯಿ ಮುಖಬೆಲೆಯ NDTV ಯ 1,67,62,530 ಸಂಪೂರ್ಣ ಪಾವತಿಸಿದ ಈಕ್ವಿಟಿ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಅದಾನಿ ಸಮೂಹವು ಬ್ರಾಡ್‌ಕಾಸ್ಟರ್‌ನಲ್ಲಿ ಶೇಕಡಾ 55ರಷ್ಟು ಪಾಲುದಾರಿಕೆಯನ್ನು ಹೊಂದಲಿದೆ.