ಕರ್ನಾಟಕ

karnataka

By

Published : Apr 26, 2022, 9:28 AM IST

ETV Bharat / business

ಸೈಬರ್​ ಕಳ್ಳರಿದ್ದಾರೆ ಎಚ್ಚರಿಕೆ: ಆನ್​​​ಲೈನ್​​ ವ್ಯವಹಾರದ ವೇಳೆ ಈ ಎಲ್ಲ ಮುನ್ನೆಚ್ಚರಿಕೆ ಇರಲಿ!

ಸುರಕ್ಷಿತ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್‌ ಅನ್ನು ಗ್ರಾಹಕರು ಹೆಚ್ಚೆಚ್ಚು ಮುನ್ನೆಚ್ಚರಿಕೆ ವಹಿಸುವ ಅಭ್ಯಾಸ ಮಾಡಬೇಕಿದೆ. ಡಿಜಿಟಲ್ ಪಾವತಿಗಳನ್ನು ಮಾಡುವಾಗ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಈಗಿನ ಅಗತ್ಯವಾಗಿದೆ.

A practical guide for safe online, mobile banking, use of credit-debit cards
ಸೈಬರ್​ ಕಳ್ಳರಿದ್ದಾರೆ ಎಚ್ಚರಿಕೆ: ಆನ್​​​ಲೈನ್​​ ವ್ಯವಹಾರದ ವೇಳೆ ಈ ಎಲ್ಲ ಮುನ್ನೆಚ್ಚರಿಕೆ ಇರಲಿ!

ಹೊಸದಿಲ್ಲಿ: ಕೋವಿಡ್​ನಿಂದಾಗಿ ಕೆಲಸದ ಶೈಲಿಯೇ ಬದಲಾದಂತಾಗಿದೆ. ಕಚೇರಿ ಕೆಲಸಕ್ಕಿಂತ ಮನೆಯಿಂದಲೇ ಕೆಲಸ ಎಂಬುದೀಗ ಜನಪ್ರೀಯವಾಗಿದೆ. ಇನ್ನು ಬ್ಯಾಂಕಿಂಗ್​ ವ್ಯವಸ್ಥೆಯಲ್ಲೂ ಭಾರಿ ಬದಲಾವಣೆಯಾಗಿದೆ. ನಗದು ವ್ಯವಹಾರವೀಗ ಡಿಜಿಟಲೀಕರಣಗೊಂಡಿದ್ದು, ಡಿಜಿಟಲ್ ಪಾವತಿಗಳ ಬಳಕೆ ಹೆಚ್ಚು ಜನಾನುರಾಗಿಯಾಗಿದೆ.

ಆದಾಗ್ಯೂ, ಕಳೆದ ಎರಡು ವರ್ಷಗಳಲ್ಲಿ ಆನ್‌ಲೈನ್ ವಂಚನೆ, ಬ್ಯಾಂಕಿಂಗ್ ಮತ್ತು ಮೊಬೈಲ್ ವಂಚನೆಗಳ ಪ್ರಕರಣಗಳಲ್ಲಿ ಭಾರಿ ಪ್ರಮಾಣದ ಹೆಚ್ಚಳ ಕಂಡು ಬಂದಿದೆ. ಇದು ಹೊಸ ರೀತಿಯ ಅಪಾಯಗಳು ಮತ್ತು ಸವಾಲುಗಳನ್ನು ಸಮಾಜದ ಮುಂದೆ ತಂದಿಟ್ಟಿದೆ. ಹೆಚ್ಚು ಹೆಚ್ಚು ಬ್ಯಾಂಕಿಂಗ್ ಗ್ರಾಹಕರು ಆನ್‌ಲೈನ್ ಪಾವತಿ, ಮೊಬೈಲ್ ಮತ್ತು UPI ಆಧಾರಿತ ಬ್ಯಾಂಕಿಂಗ್ ವಹಿವಾಟುಗಳತ್ತ ಚಿತ್ತ ಹರಿಸಿರುವುದರಿಂದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಬಳಕೆ ಹೆಚ್ಚಾಗಿದೆ.

ಇನ್ನು ಸುರಕ್ಷಿತ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್‌ ಅನ್ನು ಗ್ರಾಹಕರು ಹೆಚ್ಚೆಚ್ಚು ಅಭ್ಯಾಸ ಮಾಡಬೇಕಿದೆ. ಡಿಜಿಟಲ್ ಪಾವತಿಗಳನ್ನು ಮಾಡುವಾಗ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಈಗಿನ ಅಗತ್ಯವಾಗಿದೆ. ಗ್ರಾಹಕರು ತಮ್ಮ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ವಹಿವಾಟುಗಳು, ಎಲೆಕ್ಟ್ರಾನಿಕ್ ಪಾವತಿಗಳು ಮತ್ತು ಸಾಮಾಜಿಕ ಮಾಧ್ಯಮ ಭದ್ರತೆಯ ಬಗ್ಗೆ ತೀರಾ ಮುನ್ನೆಚ್ಚರಿಕೆ ವಹಿಸಬೇಕಾಗಿರುವುದು ಹೆಚ್ಚು ಸೂಕ್ತವಾಗಿದೆ.

ನಿಮ್ಮ ಲಾಗಿನ್ ಪ್ರಕ್ರಿಯೆಗಳನ್ನು ಹೇಗೆ ಸುರಕ್ಷಿತಗೊಳಿಸುವುದು?

  1. ತೀರಾ ವಿಭೀನ್ನ ಮತ್ತು ಸಂಕೀರ್ಣ ಪಾಸ್‌ವರ್ಡ್‌ಗಳನ್ನು ಬಳಸುವುದು ಉತ್ತಮ
  2. ಪಾಸ್​ವರ್ಡ್​ಗಳನ್ನು ಆಗ್ಗಾಗ್ಗೆ ಬದಲಾಯಿಸುವುದು ಸೂಕ್ತ
  3. ನಿಮ್ಮ ಬಳಕೆದಾರ ಐಡಿ, ಪಾಸ್‌ವರ್ಡ್‌ಗಳು ಅಥವಾ ಪಿನ್ ಅನ್ನು ಎಂದಿಗೂ ಬಹಿರಂಗಪಡಿಸಬೇಡಿ, ಸಂಗ್ರಹಿಸಬೇಡಿ ಅಥವಾ ಎಲ್ಲೂ ಬರೆದಿಟ್ಟುಕೊಳ್ಳಬೇಡಿ.
  4. ಬ್ಯಾಂಕ್ ಎಂದಿಗೂ ನಿಮ್ಮ ಬಳಕೆದಾರ ಐಡಿ/ಪಾಸ್‌ವರ್ಡ್‌ಗಳು/ಕಾರ್ಡ್ ಸಂಖ್ಯೆ/ಪಿನ್/ಪಾಸ್‌ವರ್ಡ್‌ಗಳು/ಸಿವಿವಿ/ಒಟಿಪಿಯನ್ನು ಕೇಳುವುದಿಲ್ಲ.
  5. ಬಳಕೆದಾರ ID ಮತ್ತು ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುವುದನ್ನು ತಪ್ಪಿಸಲು ನೀವು ಬಳಸುವ ಮೊಬೈಲ್​, ಲ್ಯಾಪ್​ಟಾಪ್​ ಇತರ ಸಾಧನದಲ್ಲಿ 'ಸ್ವಯಂ ಉಳಿಸಿ' ಅಥವಾ 'ನೆನಪಿಡಿ' ಎಂಬ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಇಂಟರ್ನೆಟ್ ಬ್ಯಾಂಕಿಂಗ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?

  1. ಬ್ಯಾಂಕಿನ ವೆಬ್‌ಸೈಟ್‌ನ ವಿಳಾಸ ಪಟ್ಟಿಯಲ್ಲಿ ಯಾವಾಗಲೂ “https” ನೋಡಿ.
  2. ತೆರೆದ ವೈ-ಫೈ ನೆಟ್‌ವರ್ಕ್‌ಗಳನ್ನು ಬಳಸಿಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಆನ್‌ಲೈನ್ ಬ್ಯಾಂಕಿಂಗ್ ವಹಿವಾಟು ನಡೆಸುವುದನ್ನು ಮೊದಲು ನಿಲ್ಲಿಸಿ/ ತಪ್ಪಿಸಿ.
  3. ನಿಮ್ಮ ಕೆಲಸವನ್ನು ಪೂರ್ಣಗೊಳಿಸಿದ ತಕ್ಷಣ ಲಾಗ್‌ಔಟ್ ಮಾಡಿ ಮತ್ತು ಬ್ರೌಸರ್ ಅನ್ನು ಕ್ಲೋಸ್ ಮಾಡಿ

UPI ಪಾವತಿಗಳನ್ನು ಸುರಕ್ಷಿತ ರೀತಿಯಲ್ಲಿ ಬಳಸುವುದು ಹೇಗೆ?

  1. ನಿಮ್ಮ ಮೊಬೈಲ್ ಪಿನ್ ಮತ್ತು ಯುಪಿಐ ಪಿನ್ ಅನ್ನು ವಿಭಿನ್ನವಾಗಿ ಮತ್ತು ಯಾದೃಚ್ಛಿಕವಾಗಿ ಇರಿಸಿಕೊಳ್ಳಲು ಪ್ರಯತ್ನಿಸಿ.
  2. ಯಾವುದೇ ಅಪರಿಚಿತ UPI ವಿನಂತಿಗಳಿಗೆ ಪ್ರತಿಕ್ರಿಯಿಸಬೇಡಿ.
  3. ಅನುಮಾನಾಸ್ಪದ ವಿನಂತಿಗಳ ಬಗ್ಗೆ ಸಂಬಂಧ ಪಟ್ಟವರಿಗೆ ವರದಿ ಮಾಡಿ
  4. ಪಿನ್ ಇರುವುದು ನೀವು ವರ್ಗಾಯಿಸಲು ಬಯಸುವ ಮೊತ್ತಕ್ಕೆ ಮಾತ್ರವೇ ಅಗತ್ಯ ಇದೆ. ನೀವು ಸ್ವೀಕರಿಸುವ ಹಣಕ್ಕೆ ಅಲ್ಲ ಎಂಬುದನ್ನು ನೆನಪಿಡಿ.
  5. ನೀವು ಏನನ್ನೂ ಮಾಡದೆಯೇ ವಹಿವಾಟು ನಡೆದಿದ್ದರೆ ನಿಮ್ಮ ಖಾತೆಯಲ್ಲಿ UPI ಸೇವೆಯನ್ನು ತಕ್ಷಣವೇ ನಿಷ್ಕ್ರಿಯಗೊಳಿಸಿ.

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಭದ್ರತೆ

  1. ATM ಯಂತ್ರಗಳು ಅಥವಾ POS ಸಾಧನಗಳ ಮೂಲಕ ATM ವಹಿವಾಟುಗಳನ್ನು ನಿರ್ವಹಿಸುವಾಗ ನಿಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಎಚ್ಚರದಿಂದಿರಿ.
  2. ಪಿನ್ ನಮೂದಿಸುವಾಗ ಕೀಪ್ಯಾಡ್ ಅನ್ನು ಕವರ್ ಮಾಡುವುದು ಉತ್ತಮ.
  3. ವಹಿವಾಟು ನಡೆಸುವ ಮೊದಲು ಇ-ಕಾಮರ್ಸ್ ವೆಬ್‌ಸೈಟ್‌ಗಳ ದೃಢೀಕರಣವನ್ನು ಯಾವಾಗಲೂ ಪರಿಶೀಲಿಸುವುದು ಸೂಕ್ತ.
  4. ಆನ್‌ಲೈನ್ ಬ್ಯಾಂಕಿಂಗ್ ಮೂಲಕ ನಿಮ್ಮ ಡೆಬಿಟ್ ಕಾರ್ಡ್ ವಹಿವಾಟುಗಳನ್ನು ನಿರ್ವಹಿಸಿ.
  5. ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಡ್ ವಹಿವಾಟುಗಳಿಗೆ ಮಿತಿಯನ್ನು ನಿಗದಿ ಮಾಡಿ

ಮೊಬೈಲ್ ಬ್ಯಾಂಕಿಂಗ್ ಅನ್ನು ಸುರಕ್ಷಿತ ರೀತಿಯಲ್ಲಿ ಬಳಸುವುದು ಹೇಗೆ?

  1. ಯಾವಾಗಲೂ ಹೆಚ್ಚು ಸುರಕ್ಷಿತವಾದ ಪಾಸ್‌ವರ್ಡ್‌ಗಳನ್ನು ಬಳಸಿ ಮತ್ತು ನಿಮ್ಮ ಫೋನ್‌, ಲ್ಯಾಪ್‌ಟಾಪ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ ಬಯೋಮೆಟ್ರಿಕ್ ಅನುಮತಿಯನ್ನು ಸಕ್ರಿಯಗೊಳಿಸಬೇಕು.
  2. ನಿಮ್ಮ ಮೊಬೈಲ್ ಪಿನ್ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  3. ಸಾಧ್ಯವಿರುವಲ್ಲೆಲ್ಲಾ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಲು ಪ್ರಯತ್ನಿಸಿ.
  4. ಅಪರಿಚಿತರು ಸೂಚಿಸಿದ ಯಾವುದೇ ಅಜ್ಞಾತ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ.
  5. ಅಪ್ಲಿಕೇಶನ್‌ಗಳನ್ನು ಅಧಿಕೃತ ಮಳಿಗೆಗಳ ಮೂಲಕ ಮಾತ್ರವೇ ಡೌನ್‌ಲೋಡ್ ಮಾಡಬೇಕು.
  6. ನಿಮ್ಮ ಮೊಬೈಲ್‌ನಲ್ಲಿ ಸ್ಥಾಪಿಸಲಾದ ನಿರ್ಣಾಯಕ ಅಪ್ಲಿಕೇಶನ್‌ಗಳ ಅನುಮತಿಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ ಮತ್ತು ಅನಗತ್ಯ ಮತ್ತು ಬಳಕೆಯಾಗದ ಅಪ್ಲಿಕೇಶನ್‌ಗಳ ಮೇಲೆ ಸದಾ ನಿಗಾ ಇಡಿ
  7. ಸಾರ್ವಜನಿಕ ವೈರ್‌ಲೆಸ್ ನೆಟ್‌ವರ್ಕ್‌ಗಳಿಗೆ ಫೋನ್‌ಗಳನ್ನು ಸಂಪರ್ಕಿಸುವುದನ್ನು ಆದಷ್ಟು ತಪ್ಪಿಸಿ.

ಇದನ್ನು ಓದಿ:ಇದೇ ಭಾರತದ 'ನಿಜವಾದ ಟೆಸ್ಲಾ ಕಾರು'.. ಚಕ್ಕಡಿ ಪೋಟೋ ಹಾಕಿ ಎಲೊನ್​ ಮಸ್ಕ್​ ಕಾಲೆಳೆದ ಮಹೀಂದ್ರಾ!

For All Latest Updates

ABOUT THE AUTHOR

...view details