ನವದೆಹಲಿ: 2023-23ರ ಹೊಸ ಆರ್ಥಿಕ ವರ್ಷ ಇಂದಿನಿಂದ ಆರಂಭವಾಗುತ್ತಿದೆ. ಇದರ ಜೊತೆಗೆ ಆಯವ್ಯಯದ ಕೆಲವು ಯೋಜನೆಗಳು ಜಾರಿಗೆ ಬರಲಿದ್ದು, ಇದು ಪ್ರತಿಯೊಬ್ಬರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಲಿದೆ. ಅಂತಹ ಹೊಸ ಯೋಜನೆಗಳು ಯಾವುದು, ಯಾವೆಲ್ಲಾ ಬದಲಾವಣೆ ಆಗಲಿದೆ ಎಂಬ ಮಾಹಿತಿ ಇಲ್ಲಿದೆ..
ಹೊಸ ತೆರಿಗೆ ಪದ್ಧತಿ: ಆಯವ್ಯಯದಲ್ಲಿ ಘೋಷಣೆಯಾದ ಹೊಸ ತೆರಿಗೆ ಪದ್ಧತಿ ಇಂದಿನಿಂದ ಅಂದರೆ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಹೊಸ ತೆರಿಗೆ ಪದ್ಧತಿ ಅಡಿ ಏಳು ಲಕ್ಷ ಆದಾಯ ಪಡೆಯುತ್ತಿರುವ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. ಹಳೆಯ ತೆರರಿಗೆ ಪದ್ಧತಿಯಲ್ಲಿ ಹೂಡಿಕೆ ಮತ್ತು ವಸತಿ ಭತ್ಯೆಯಂತಹ ವಿನಾಯಿತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಜೊತೆಗೆ ಹೊಸ ತೆರಿಗೆ ಪದ್ಧತಿಯಲ್ಲಿ 50 ಸಾವಿರ ಕಡಿತದ ಪ್ರಸ್ತಾವನೆಯನ್ನು ನೀಡಲಾಗಿದೆ. ಇನ್ನು ಈ ಎರಡು ತೆರಿಗೆ ಆಯ್ಕೆಯನ್ನು ಮಾಡಿಕೊಳ್ಳಲು ಅವಕಾಶ ನೀಡಿದ್ದು, ಒಂದು ವೇಳೆ ಯಾವುದೇ ತೆರಿಗೆಯನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂದರೆ ಹೊಸ ತೆರಿಗೆ ಆಡಳಿತಕ್ಕೆ ನೀವು ಹೋಗುತ್ತಿರ ಇದರಿಂದ ಸೇವೆಗಳ ಶುಲ್ಕದ ಮೇಲಿನ ತೆರಿಗೆ ದರವನ್ನು ಶೇಕಡಾ 10 ರಿಂದ ಶೇಕಡಾ 20 ಕ್ಕೆ ಹೆಚ್ಚಿಸಲಾಗುವುದು.
ಐದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವಾರ್ಷಿಕ ಪ್ರೀಮಿಯಂ ಹೊಂದಿರುವ ಪಾಲಿಸಿಯ ಪಡೆದ ಮೊತ್ತದ ಮೇಲಿನ ತೆರಿಗೆ ವಿನಾಯಿತಿಯ ಮಿತಿ ಕೊನೆಗೊಳ್ಳುತ್ತದೆ. ಇದರ ಅಡಿಯಲ್ಲಿ, ಏಪ್ರಿಲ್ 1, 2023 ರ ನಂತರ ನೀಡಲಾದ ಎಲ್ಲಾ ಜೀವ ವಿಮಾ ಪಾಲಿಸಿಗಳ (ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪಾಲಿಸಿಗಳು ಅಥವಾ ಯುಲಿಪ್‌ಗಳನ್ನು ಹೊರತುಪಡಿಸಿ) ಮೆಚ್ಯೂರಿಟಿ ಮೊತ್ತಕ್ಕೆ ತೆರಿಗೆ ವಿಧಿಸಲಾಗುತ್ತದೆ
ಸಣ್ಣ ಉಳಿತಾಯ ಯೋಜನೆ: ಇಂದಿನಿಂದ ಮಹಿಳಾ ಸಮ್ಮಾನ್ ಬಚತ್ ಪತ್ರ ಎಂಬ ಹೊಸ ಸಣ್ಣ ಉಳಿತಾಯ ಯೋಜನೆ ಆರಂಭವಾಗಲಿದೆ. ಈ ಯೋಜನೆ ಅಡಿ ಮಹಿಳೆ ಅಥವಾ ಯುವತಿ ಹೆಸರಿನಲ್ಲಿ ಏಕ ಕಾಲದಲ್ಲಿ ಎರಡು ಲಕ್ಷ ಹೂಡಿಕೆ ಮಾಡಬಹುದು. ಈ ಯೋಜನೆ ಬಡ್ಡಿದರ 7.5ರಷ್ಟಿದೆ. ಇದರಲ್ಲಿ ಭಾಗಶಃ ಹಣವನ್ನು ಕೂಡ ಹಿಂಪಡೆಯುವ ಸೌಲಭ್ಯವಿದೆ.
ಹಿರಿಯ ನಾಗರಿಕರಿಗೆ ಯೋಜನೆ: ಹಿರಿಯ ನಾಗರಿಕರ ಉಳಿತಾಯ ಯೋಜನೆ ಠೇವಣಿ ಮೊತ್ತವನ್ನು 15 ಲಕ್ಷ ದಿಂದ 30 ಲಕ್ಷಕ್ಕೆ ಏರಿಸಲಾಗಿದೆ. ಮಾಸಿಕ ಆದಾಯ ಯೋಜನೆಯಲ್ಲಿ ಠೇವಣಿ ಮಿತಿ 9 ಲಕ್ಷದವರೆಗೆ ಇದೆ.
ತೆರಿಗೆ ಲಾಭ: ಏಪ್ರಿಲ್ 1 ರಿಂದ, ಬಾಂಡ್‌ಗಳು ಅಥವಾ ಸ್ಥಿರ ಆದಾಯದ ಉತ್ಪನ್ನಗಳಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳ ಮೇಲೆ ಅಲ್ಪಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ವಿಧಿಸಲಾಗುತ್ತದೆ. ಈ ಯೋಜನೆಯಲ್ಲಿ ಈ ಹಿಂದೆ ಹೂಡಿಕೆದಾರರು ದೀರ್ಘಾವಧಿಯ ತೆರಿಗೆ ಪ್ರಯೋಜನಗಳನ್ನು ಪಡೆಯುತ್ತಿದ್ದರು.