ಕರ್ನಾಟಕ

karnataka

ಪಾಲಿಸಿ ವಿಚಾರ.. ಎಲ್ಲಾ ವೆಚ್ಚಗಳನ್ನು ಭರಿಸುವಂತಹ ಆರೋಗ್ಯ ವಿಮೆಗೆ ಇರಲಿ ನಿಮ್ಮ ಆದ್ಯತೆ..

By

Published : Mar 1, 2023, 10:48 AM IST

ಆರೋಗ್ಯ ತುರ್ತು ಪರಿಸ್ಥಿತಿಯಲ್ಲಿ ಆರ್ಥಿಕ ಸ್ಥಿತಿ, ಹೂಡಿಕೆ ಮೇಲೆ ಪರಿಣಾಮ ಬೀರದಂತಹ ವಿಮೆಗಳ ಆಯ್ಕೆಗೆ ಗಮನ ನೀಡಬೇಕು. ಜೊತೆಗೆ ಅದರಲ್ಲಿನ ಹೆಚ್ಚುವರಿ ಪ್ರಯೋಜನ ಕುರಿತು ಕೂಡ ಮಾಹಿತಿ ಹೊಂದಬೇಕು.

A health insurance that covers all medical expenses should be preferred
A health insurance that covers all medical expenses should be preferred

ಬೆಂಗಳೂರು: ಅನೇಕ ಕಂಪನಿಗಳು ವಿವಿಧ ಆರೋಗ್ಯ ಸೌಲಭ್ಯ ಒದಗಿಸುವ ಅನೇಕ ವಿಮಾ ಪಾಲಿಸಿಗಳನ್ನು ವಿಮೆದಾರರಿಗೆ ನೀಡುತ್ತದೆ. ಈ ಆರೋಗ್ಯ ವಿಮೆಗಳನ್ನು ನಿಮ್ಮ ಆಸ್ಪತ್ರೆಯ ವೆಚ್ಚಗಳನ್ನು ಭರಿಸುತ್ತದೆಯಾ ಎಂಬುದನ್ನು ಸೂಕ್ತವಾಗಿ ಪರಿಶೀಲಿಸಿ ಆಯ್ಕೆ ಮಾಡುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಯಾವ ಆರೋಗ್ಯ ವಿಮೆ ಸೂಕ್ತ ಎಂಬುದನ್ನು ಆಯ್ಕೆ ಮಾಡಬೇಕು. ವಿಮೆಗಳನ್ನು ಅಂತಿಮ ಮಾಡುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ.

ಸಂಪೂರ್ಣ ಮಾಹಿತಿ ಇರಲಿ:ವಿಮೆಯನ್ನು ಖರೀದಿಸುವ ಸಂದರ್ಭದಲ್ಲಿ ಅದರ ಸಂಪೂರ್ಣ ಪ್ರಯೋಜನದ ಕುರಿತು ಅರಿವನ್ನು ಹೊಂದಿರಬೇಕು. ನೀವು ಅನಾರೋಗ್ಯಕ್ಕೆ ಒಳಗಾದಾಗ ಅದು ನಿಮಗೆ ಆರ್ಥಿಕ ಬೆಂಬಲವನ್ನು ನೀಡುವಂತೆ ಇರಬೇಕು. ಕೆಲವು ಪಾಲಿಸಿಗಳು ಕೆಲವು ಮಿತಿಗಳನ್ನು ಹೊಂದಿರುತ್ತವೆ. ಇಲ್ಲದೇ ಹೋದಲ್ಲಿ ಕಾಯುವಿಕೆ ಅವಧಿಯನ್ನು ಹೊಂದಿರುತ್ತದೆ. ಈ ಹಿನ್ನಲೆ ಪಾಲಿಸಿಯ ಸಂಬಂಧ ಎಲ್ಲಾ ಅಂಶಗಳನ್ನು ಗಮನವಿಟ್ಟು ಓದಿ ಅರ್ಥೈಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ವಿಮಾ ಕಂಪನಿಗಳು ಹೆಲ್ಪ್​ ಡೆಸ್ಕ್​ಗೆ ಸಂಪರ್ಕ ಮಾಡುವ ಮೂಲಕ ಸಹಾಯ ಪಡೆಯಬಹುದು. ಇದರಿಂದ ಪೇಮೆಂಟ್​ ಕ್ಲೈಮ್​ ಮಾಡುವಾಗ ಉಂಟಾಗುವ ತೊಂದರೆಗಳನ್ನು ತಪ್ಪಿಸಬಹುದಾಗಿದೆ.

ಎಲ್ಲಾ ವೆಚ್ಚ ಭರಿಸಲಿದೆಯಾ ಎಂಬುದನ್ನು ಗಮನಿಸಿ: ಆಸ್ಪತ್ರೆಗೆ ದಾಖಲಾದ ಖರ್ಚಿನ ಪರಿಹಾರವನ್ನು ಮಾತ್ರ ಆರೋಗ್ಯ ವಿಮೆಗಳು ನೀಡುತ್ತವೆ ಎಂದು ಭಾವಿಸಿರುತ್ತಾರೆ. ಆದರೆ, ಆಸ್ಪತ್ರೆಗೆ ಮೊದಲು ಮತ್ತು ಆಸ್ಪತ್ರೆಗೆ ದಾಖಲಾದ ಬಳಿಕದ ಖರ್ಚುಗಳು, ಅ್ಯಂಬುಲೆನ್ಸ್​, ಡೇ ಕೇರ್​ ಟ್ರೀಟ್​ಮೆಂಟ್​ ಮತ್ತು ಅಡ್ವಾನ್ಸ್ಡ್​​ ಚಿಕಿತ್ಸೆಯನ್ನು ಕೂಡ ಈ ವಿಮೆ ಪಾಲಿಸಿಗಳು ನೀಡುತ್ತವೆ. ಇದರ ಹೊರತಾಗಿ ಪಾಲಿಸಿದಾರರು ಆಸ್ಪತ್ರೆ ದಾಖಲೀಕರಣ, ಮನೆಯಲ್ಲಿನ ಚಿಕಿತ್ಸೆಯ ವೆಚ್ಚ, ಹೇಲ್ತ್​ ಕೇರ್​ ಡಿಸ್ಕೌಂಟ್​​, ವಾರ್ಷಿಕ ಆರೋಗ್ಯ ಚೆಕ್​ ಅಪ್​, ವೈದ್ಯಕೀಯ ತಜ್ಞರ ಎರಡನೇ ಅಭಿಪ್ರಾಯದಂತಹ ಪ್ರಯೋಜನ ಇದೆಯಾ ಎಂಬುದನ್ನು ಕೂಡ ಪಾಲಿಸಿ ಖರೀದಿ ಸಮಯದಲ್ಲಿ ಗಮನಿಸಬೇಕು. ಪಾಲಿಸಿಗಳು ನಿಮ್ಮ ಎಲ್ಲಾ ಅಗತ್ಯಗಳಿಗೆ ಸರಿ ಹೊಂದುತ್ತದೆಯಾ ಎಂಬುದನ್ನು ವಿಶ್ಲೇಷಿಸಬೇಕು.

ವೈದ್ಯಕೀಯ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಅತಿ ಹೆಚ್ಚು ವೈದ್ಯಕೀಯ ವೆಚ್ಚಗಳನ್ನು ಭರಿಸುವ ಪಾಲಿಸಿಗಳ ಕಡೆ ಗಮನ ನೀಡಬೇಕು. ಕಡಿಮೆ ಪ್ರೀಮಿಯಂ ನೋಡಿದರೆ ಅದು ನಿಮ್ಮ ಅಗತ್ಯಗಳನ್ನು ಪೂರೈಸುವುದಿಲ್ಲ. ಇದರಿಂದ ಆಸ್ಪತ್ರೆಗೆ ದಾಖಲಾದ ಸಮಯದಲ್ಲಿ ನಿಮ್ಮ ಜೇಬಿನಿಂದ ಹಣ ಖರ್ಚು ಮಾಡಬೇಕಾಗುತ್ತದೆ. ಇದರಿಂದ ಇದು ನಿಮ್ಮ ಉಳಿತಾಯ ಮತ್ತು ಹೂಡಿಕೆಯ ಮೇಲೆ ಪರಿಣಾಮ ಬೀರುತ್ತದೆ.

ಟಾಪ್​ ಅಪ್​ ಪ್ರಯೋಜನ: ಇದಕ್ಕೆ ಪರ್ಯಾಯವಾಗಿ ಹೆಚ್ಚಿನ ಮೊತ್ತದ ಟಾಪ್​ ಅಪ್​ ಪಾಲಿಸಿ ಗಳನ್ನು ಆರಿಸಬಹುದು. ಇದು ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಸುರಕ್ಷತೆ ನೀಡುತ್ತದೆ. ಇದು ಈಗಾಗಲೇ ರೋಗಗಳ ಚಿಕಿತ್ಸೆಗಾಗಿ ಪರಿಹಾರವನ್ನು ಪಡೆಯಲು ಎಷ್ಟು ಸಮಯ ಕಾಯಬೇಕು ಎಂಬುದರ ಕುರಿತು ಕೂಡ ತಿಳಿಸುತ್ತದೆ. ಹೆಚ್ಚಿನ ಪಾಲಿಸಿಗಳು ಈ ಅವಧಿಯನ್ನು 2 ರಿಂದ 4 ವರ್ಷಗಳವರೆಗೆ ನಿಗದಿಪಡಿಸುತ್ತವೆ.

ಪಾಲಿಸಿಯ ಕಾಯುವಿಕೆ ಅವಧಿ ಕಡಿಮೆ ಇರುವುದನ್ನು ಆಯ್ಕೆ ಮಾಡಬೇಕು. ಈ ಕಾಯುವಿಕೆ ಅವಧಿ ಕಡಿಮೆ ಮಾಡಲು ಪೂರಕ ನೀತಿಗಳನ್ನು ಒಳಗೊಂಡಿರುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ಒಂದಿಷ್ಟು ಮೊತ್ತ ಪಾವತಿಸಬೇಕು. ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿರುವಾಗ ಪಾಲಿಸಿ ತೆಗೆದುಕೊಂಡರೆ ಅಂತಹ ತೊಡಕುಗಳು ಬರುವುದಿಲ್ಲ.

ಕುಟುಮಬ ಪಾಲಿಸಿಗಳು ಕಡಿಮೆ ಪ್ರೀಮಿಯಂ ಇರುತ್ತದೆ. ಹಾಗಾಗಿ ಈ ಒಂದು ಪಾಲಿಸಿಯ ಮೂಲಕ ನಿಮ್ಮ ಎಲ್ಲಾ ಕುಟುಂಬ ಸದಸ್ಯರನ್ನು ಒಳಗೊಳ್ಳುವಂತೆ ಮಾಡಬಹುದು. ಪೂರಕ ಪಾಲಿಸಿಗಳನ್ನು ಆಯ್ಕೆ ಮಾಡುವುದಾದರೆ, ನಿಮ್ಮ ಅವಶ್ಯಕತೆ ಅಂಶಗಳಿಗೆ ಮಾತ್ರ ಗಮನಹರಿಸಬೇಕು. ಆರೋಗ್ಯ ವಿಮಾ ಪಾಲಿಸಿಗೆ ಪಾವತಿಸಿದ ಪ್ರೀಮಿಯಂ ಎಂದಿಗೂ ವೆಚ್ಚ ಎಂದು ಪರಿಗಣಿಸದೇ, ಹೂಡಿಕೆಯಾಗಿ ಕಾಣಬೇಕು.

ಇದನ್ನೂ ಓದಿ: ನೀವು ಯಾವ ಪದ್ಧತಿಯಲ್ಲಿ ತೆರಿಗೆ ಪಾವತಿಸುತ್ತೀರಿ..? ನಿಮ್ಮ ಸಹಾಯಕ್ಕೆ IT ಇಲಾಖೆಯಿಂದ ಕ್ಯಾಲ್ಕುಲೇಟರ್ ವ್ಯವಸ್ಥೆ!

ABOUT THE AUTHOR

...view details