ನವದೆಹಲಿ: 2022ರಲ್ಲಿ ಯುಪಿಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಮೊಬೈಲ್ ಮತ್ತು ಪ್ರಿಪೇಡ್ ಕಾರ್ಡ್‌ಗಳ ಮೂಲಕ ಒಟ್ಟು 145.5 ಟ್ರಿಲಿಯನ್ ರೂಪಾಯಿ ಮೊತ್ತದ 87.92 ಬಿಲಿಯನ್ ಆನ್ಲೈನ್ ಪೇಮೆಂಟ್ ವಹಿವಾಟುಗಳು ನಡೆದಿವೆ ಎಂದು ಸೋಮವಾರ ವರದಿಯೊಂದು ತಿಳಿಸಿದೆ. ವಹಿವಾಟಿನ ಮೌಲ್ಯದ ಪ್ರಕಾರ ನೋಡುವುದಾದರೆ UPI ಪರ್ಸನ್ ಟು ಮರ್ಚಂಟ್ (P2M) ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ (P2P) ಪೇಮೆಂಟ್ ವಿಧಾನಗಳ ಮೂಲಕ ಕ್ರಮವಾಗಿ ಶೇ 40 ಮತ್ತು ಶೇ 44 ರಷ್ಟು ಅತಿಹೆಚ್ಚು ವಹಿವಾಟುಗಳು ನಡೆದಿವೆ. ಇದರಲ್ಲಿ ಒಟ್ಟಾರೆ ಯುಪಿಐ ಪೇಮೆಂಟ್ ಪ್ರಮಾಣ ಶೇ 84 ರಷ್ಟಿದೆ.
2022 ರಲ್ಲಿ ಯುಪಿಐ 74.05 ಶತಕೋಟಿ ಸಂಖ್ಯೆಯ ವ್ಯವಹಾರಗಳನ್ನು ಮತ್ತು ರೂ 126 ಟ್ರಿಲಿಯನ್ ಮೌಲ್ಯದ ವಹಿವಾಟುಗಳನ್ನು ನಡೆಸಿದೆ. UPI P2P ವಹಿವಾಟುಗಳಿಗೆ ಸರಾಸರಿ ಟಿಕೆಟ್ ಗಾತ್ರ (ATS) ರೂ 2,753 ಮತ್ತು UPI P2M ವಹಿವಾಟುಗಳಿಗೆ ATS ರೂ 687 ಆಗಿತ್ತು. (ಡಿಸೆಂಬರ್ 2022 ರ ವೇಳೆಗೆ). ಆದಾಗ್ಯೂ ಮೌಲ್ಯದ ಪ್ರಕಾರ UPI P2M 18 ಪ್ರತಿಶತ ಪಾಲು ಹೊಂದಿದೆ. ಆದರೆ UPI P2P ಡಿಜಿಟಲ್ ವಹಿವಾಟುಗಳಲ್ಲಿ 66 ಪ್ರತಿಶತವನ್ನು ಹೊಂದಿದೆ ಎಂದು ವರದಿ ತಿಳಿಸಿದೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಯು ಪರಿಮಾಣದಲ್ಲಿ ಶೇಕಡಾ 7 ಮತ್ತು ಮೌಲ್ಯದಲ್ಲಿ ಶೇಕಡಾ 14 ರಷ್ಟಿದೆ.
UPI ವಹಿವಾಟಿನ ಪ್ರಮಾಣ ಮತ್ತು ಮೌಲ್ಯವು ಕಳೆದ ವರ್ಷಕ್ಕೆ ಹೋಲಿಸಿದರೆ ದ್ವಿಗುಣಗೊಂಡಿದೆ. 2021 ಕ್ಕೆ ಹೋಲಿಸಿದರೆ ಇದು 2022 ರಲ್ಲಿ ಶೇಕಡಾ 91 ಮತ್ತು ಮೌಲ್ಯದಲ್ಲಿ ಶೇಕಡಾ 76 ರಷ್ಟು ಹೆಚ್ಚಳವನ್ನು ದಾಖಲಿಸಿದೆ. ಡಿಸೆಂಬರ್ 2022 ರ ಹೊತ್ತಿಗೆ ಬ್ಯಾಂಕ್‌ಗಳಿಂದ ನಿಯೋಜಿಸಲಾದ ಒಟ್ಟು POS ಟರ್ಮಿನಲ್‌ಗಳ ಸಂಖ್ಯೆಯು 7.55 ಮಿಲಿಯನ್ ಗಡಿಯನ್ನು ದಾಟಿದೆ. ಇದು ವರ್ಷದಿಂದ ವರ್ಷಕ್ಕೆ ಶೇಕಡಾ 37 ರಷ್ಟು ಬೆಳವಣಿಗೆಯಾಗಿದೆ.