ಮುಂಬೈ, ಮಹಾರಾಷ್ಟ್ರ:ಹೊಸ ಆವೃತಿಯ ಕಾಂಪ್ಯಾಕ್ಟ್ SUVಗಳು ರೆಡಿ, ಕಾರು ಪ್ರಿಯರಿಗೆ ಇದು ಒಳ್ಳೆಯ ಸುದ್ದಿ. ಕೆಲವೇ ತಿಂಗಳುಗಳಲ್ಲಿ, ಪ್ರಮುಖ ಆಟೋಮೊಬೈಲ್ ಕಂಪನಿಗಳಾದ ಟಾಟಾ, ಮಹೀಂದ್ರಾ, ಕಿಯಾ ಮತ್ತು ಟೊಯೊಟಾದ ಹೊಸ ಕಾರುಗಳು ಮಾರುಕಟ್ಟೆಗೆ ಬರಲಿವೆ. ಆಧುನಿಕ ತಂತ್ರದಿಂದ ವಿನ್ಯಾಸಗೊಂಡಿರುವ ಈ ಕಾರುಗಳು ಇನ್ನು ಆರರಿಂದ ಒಂಬತ್ತು ತಿಂಗಳಲ್ಲಿ ಬಿಡುಗಡೆಯಾಗಲಿವೆ.
ಟಾಟಾ ಪಂಚ್ ಸಿಎನ್‌ಜಿ (Tata Punch CNG): ಟಾಟಾ ಮೋಟಾರ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ಹ್ಯುಂಡೈ ಎಕ್ಸ್‌ಟರ್ ಸಿಎನ್‌ಜಿ ಮಾದರಿಯ ಜೊತೆಗೆ ಟಾಟಾ ಪಂಚ್‌ನ ಸಿಎನ್‌ಜಿ ಆವೃತ್ತಿಯನ್ನು ಈ ತಿಂಗಳ ಆರಂಭದಲ್ಲಿ ಪರಿಚಯಿಸಲಿದೆ. ಪಂಚ್ ಸಿಎನ್‌ಜಿಯನ್ನು ಈ ವರ್ಷದ ಆರಂಭದಲ್ಲಿ ಗ್ಲೋಬಲ್ ಆಟೋ ಎಕ್ಸ್‌ಪೋದಲ್ಲಿ ಸಂಘಟಕರು ಬಿಡುಗಡೆ ಮಾಡಿದರು. ಇದು Altroz CNG ಯಂತೆಯೇ ಅವಳಿ-ಸಿಲಿಂಡರ್ ತಂತ್ರಜ್ಞಾನವನ್ನು ಹೊಂದಿದೆ. ಇದರಲ್ಲಿ 1.2L NA ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಇದನ್ನು ಸಿಎನ್‌ಜಿ ಮೋಡ್‌ನಲ್ಲಿ 73.5 ಪಿಎಸ್‌ನಲ್ಲಿ ಚಲಾಯಿಸುವಂತೆ ಮಾಡಲಾಗುತ್ತಿದೆ.
ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ (Tata Nexon Facelift) : ಶೀಘ್ರದಲ್ಲೇ ಬರಲಿರುವ ಈ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಅನ್ನು ಕರ್ವ್ವ್ ಪರಿಕಲ್ಪನೆಯ ಸ್ಫೂರ್ತಿಯೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆರು ವರ್ಷಗಳ ಜೀವಿತಾವಧಿಯಲ್ಲಿ ಕಾಂಪ್ಯಾಕ್ಟ್ SUV ಗಾಗಿ ಇದು ಎರಡನೇ ಪ್ರಮುಖ ಅಪ್ಡೇಟ್ ಆಗಿದೆ. ಹೊರಭಾಗದ ಜೊತೆಗೆ ಇಂಟೀರಿಯರ್ ಕೂಡ ಸಂಪೂರ್ಣವಾಗಿ ಮರು ವಿನ್ಯಾಸ ಮಾಡಲಾಗುತ್ತಿದೆ. ಹೊಸ ಸ್ಟೀರಿಂಗ್ ವೀಲ್, ಇಲ್ಯುಮಿನೇಟೆಡ್ ಲೋಗೋ, ಟಚ್ ಆಧಾರಿತ ಕ್ಲೈಮೇಟ್ ಕಂಟ್ರೋಲ್‌ಗಳು, ದೊಡ್ಡ ಟಚ್‌ಸ್ಕ್ರೀನ್ 360 ಡಿಗ್ರಿ ಕ್ಯಾಮೆರಾ ಸಿಸ್ಟಮ್ ಸೇರಿದಂತೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಟಾಟಾ ನೆಕ್ಸಾನ್ ಫೇಸ್‌ಲಿಫ್ಟ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 1.2 ಎಲ್ ಡಿಐ ಟರ್ಬೊ ಪೆಟ್ರೋಲ್ ಎಂಜಿನ್ ಇದರಲ್ಲಿ ಅಳವಡಿಸಲಾಗುವುದು.