ನವದೆಹಲಿ: ನೇರ ನಿವ್ವಳ ತೆರಿಗೆ ಸಂಗ್ರಹವು 2013-14ಕ್ಕೆ ಹೋಲಿಸಿದರೆ, ಒಂದು ದಶಕದ ನಂತರ 2022-23 ರಲ್ಲಿ ಶೇ 160 ರಷ್ಟು ಏರಿಕೆಯಾಗಿದೆ. ನೇರ ತೆರಿಗೆ ಸಂಗ್ರಹವು 2013-14ರಲ್ಲಿ ಇದ್ದ 6,38,596 ಕೋಟಿ ರೂ.ಗಳಿಂದ 2022-23ರಲ್ಲಿ 16,61,428 ಕೋಟಿ ರೂ.ಗೆ ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಅಂಕಿ - ಅಂಶಗಳು ತಿಳಿಸಿವೆ. ಅಂಕಿ - ಅಂಶಗಳ ಪ್ರಕಾರ, ಒಟ್ಟು ನೇರ ತೆರಿಗೆ ಸಂಗ್ರಹ ಕೂಡ 2013-14 ರಲ್ಲಿ ಇದ್ದ 7,21,604 ಕೋಟಿಗಳಿಂದ 2022-23 ರಲ್ಲಿ 19,68,780 ಕೋಟಿ ರೂಪಾಯಿಗಳಿಗೆ ಅಂದರೆ ಶೇಕಡಾ 173 ರಷ್ಟು ಏರಿಕೆಯಾಗಿದೆ.
2021-22 ರಲ್ಲಿ 2.52 ಆಗಿರುವ ನೇರ ತೆರಿಗೆ ಸಂಗ್ರಹವು ಕಳೆದ 15 ವರ್ಷಗಳಲ್ಲಿ ದಾಖಲಾದ ಅತ್ಯಧಿಕ ತೆರಿಗೆ ಸಂಗ್ರಹವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜಿಡಿಪಿ ಅನುಪಾತಕ್ಕೆ ಹೋಲಿಸಿದರೆ ನೇರ ತೆರಿಗೆಯು 2013-14 ರಲ್ಲಿ ಶೇಕಡಾ 5.62 ದಿಂದ 2021-22 ರಲ್ಲಿ ಶೇಕಡಾ 5.97 ಕ್ಕೆ ಏರಿದೆ. ಸಂಗ್ರಹಣೆಗಳ ವೆಚ್ಚವು 2013-14 ರಲ್ಲಿ ಒಟ್ಟು ಸಂಗ್ರಹಣೆಯ ಶೇಕಡಾ 0.57 ರಿಂದ 2021-22 ರಲ್ಲಿ ಒಟ್ಟು ಸಂಗ್ರಹಣೆಯ ಶೇಕಡಾ 0.53 ಕ್ಕೆ ಇಳಿದಿದೆ ಎಂದು ಅಂಕಿ - ಅಂಶಗಳು ಸೂಚಿಸಿವೆ.
ನೇರ ತೆರಿಗೆಗಳ ವಿಧಗಳು:ಇನ್ಕಮ್ ಟ್ಯಾಕ್ಸ್: ವ್ಯಕ್ತಿಯ ವಯಸ್ಸು ಮತ್ತು ಗಳಿಕೆಯನ್ನು ಅವಲಂಬಿಸಿ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಭಾರತ ಸರ್ಕಾರವು ವಿವಿಧ ತೆರಿಗೆ ಸ್ಲ್ಯಾಬ್‌ಗಳನ್ನು ನಿರ್ಧರಿಸುತ್ತದೆ ಹಾಗೂ ಪಾವತಿಸಬೇಕಾದ ಆದಾಯ ತೆರಿಗೆಯ ಮೊತ್ತವನ್ನು ನಿರ್ಧರಿಸುತ್ತದೆ. ತೆರಿಗೆದಾರರು ವಾರ್ಷಿಕ ಆಧಾರದ ಮೇಲೆ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಬೇಕು. ವ್ಯಕ್ತಿಗಳು ಇದನ್ನು ಮರುಪಾವತಿಯನ್ನು ಪಡೆಯಬಹುದು ಅಥವಾ ಅವರ ITR ಅನ್ನು ಅವಲಂಬಿಸಿ ತೆರಿಗೆ ಪಾವತಿಸಬೇಕಾಗಬಹುದು. ವ್ಯಕ್ತಿಗಳು ಐಟಿಆರ್ ಅನ್ನು ಸಲ್ಲಿಸದಿದ್ದಲ್ಲಿ ಭಾರಿ ದಂಡವನ್ನು ವಿಧಿಸಲಾಗುತ್ತದೆ.