ಕರ್ನಾಟಕ

karnataka

ETV Bharat / business

ಪಿಎನ್​ಬಿಯಲ್ಲಿದ್ದ ಕೋಯಿಕ್ಕೋಡ್​ ​ ಕಾರ್ಪೊರೇಷನ್​ ಖಾತೆಯಲ್ಲಿದ್ದ 12.6 ಕೋಟಿ ರೂ ವಂಚನೆ - ಪಿಎನ್​ಬಿಯಲ್ಲಿದ್ದ ಕೋಯಿಕ್ಕೋಡ್​ ​ ಕಾರ್ಪೊರೇಷನ್

ಪಿಎನ್​ಬಿ ಶಾಖೆಯಲ್ಲಿ ಹಲವು ಖಾತೆಗಳಲ್ಲಿ ಇದ್ದ ಭಾರೀ ಮೊತ್ತದ ಹಣ ಕಣ್ಮರೆಯಾಗಿರುವುದನ್ನು ಕಳೆದ ತಿಂಗಳು ಕಾರ್ಪೊರೇಷನ್​ ಪತ್ತೆ ಹಚ್ಚಿದೆ. ತಕ್ಷಣಕ್ಕೆ ಈ ಸಂಬಂಧ ಎಫ್​ಐಆರ್​ ದಾಖಲಿಸಲಾಗಿದ್ದು, 12.68 ಕೋಟಿ ಕಣ್ಮರೆಯಾದ ಹಣದ ಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.

ಪಿಎನ್​ಬಿಯಲ್ಲಿದ್ದ ಕೋಝಿಕೋಡ್​ ಕಾರ್ಪೊರೇಷನ್​ ಖಾತೆಯಲ್ಲಿದ್ದ 12.6 ಕೋಟಿ ರೂ ವಂಚನೆ
12-dot-6-crore-disappeared-from-the-account-of-kozhikode-corporation-in-pnb

By

Published : Dec 7, 2022, 12:17 PM IST

ಕೋಯಿಕ್ಕೋಡ್​​: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ನಲ್ಲಿದ್ದ ಕೋಯಿಕ್ಕೋಡ್​​ ಕಾರ್ಪೊರೇಷನ್​​ನ ಹಲವು ಖಾತೆಗಳ ಮೂಲಕ 12 ಕೋಟಿ ರೂ ವಂಚನೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಬ್ಯಾಂಕ್​ನ ಮಾಜಿ ಹಿರಿಯ ಮ್ಯಾನೇಜರ್​ ಆಗಿದ್ದಾರೆ.

ಪಿಎನ್​ಬಿ ಶಾಖೆಯಲ್ಲಿ ಹಲವು ಖಾತೆಗಳಲ್ಲಿ ಇದ್ದ ಭಾರೀ ಮೊತ್ತದ ಹಣ ಕಣ್ಮರೆಯಾಗಿರುವುದನ್ನು ಕಳೆದ ತಿಂಗಳು ಕಾರ್ಪೊರೇಷನ್​ ಪತ್ತೆ ಹಚ್ಚಿದೆ. ತಕ್ಷಣಕ್ಕೆ ಈ ಸಂಬಂಧ ಎಫ್​ಐಆರ್​ ದಾಖಲಿಸಲಾಗಿದ್ದು, 12.68 ಕೋಟಿ ಕಣ್ಮರೆಯಾದ ಹಣದ ಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದೆ.

ಪ್ರಾರಂಭದಲ್ಲಿ 15 ಕೋಟಿ ಹಣ ವಂಚನೆ ನಡೆಸಲಾಗಿದೆ ಎಂದು ಕಾರ್ಪೊರೇಷನ್​ ನಂಬಿತ್ತು. ಆದರೆ, ತನಿಖೆ ವೇಳೆ ನಡೆಸಿದ ಲೆಕ್ಕಾಚಾರದಲ್ಲಿ, ಬ್ಯಾಂಕ್​ ಖಾತೆಯಿಂದ 12.6 ಕೋಟಿ ನಷ್ಟವಾಗಿರುವುದು ತಿಳಿದು ಬಂದಿತು. ಕಾರ್ಪೋರೇಷನ್​ ಜೊತೆಯಲ್ಲಿ ಬ್ಯಾಂಕ್​ನ ಮಾಜಿ ಮ್ಯಾನೇಜರ್​, ಬೇರೋಬ್ಬರ ವೈಯಕ್ತಿಕ ಖಾತೆಯಿಂದ 18 ಲಕ್ಷ ರೂವನ್ನು ಕದ್ದಿದ್ದಾರೆ ಎಂಬುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯು ಬ್ಯಾಂಕ್​ನ ಖಾತೆಯಲ್ಲಿದ್ದ ಸುಮಾರು 10 ಕೋಟಿ ರೂ ಹಣವನ್ನು ಷೇರು ವ್ಯವಹಾರಕ್ಕೆ ವ್ಯಯಿಸಿದ್ದಾರೆ. ಆದರೆ, ಇದೆಲ್ಲವೂ ನಷ್ಟವಾಗಿದೆ. ಉಳಿದ ಹಣವನ್ನು ಆನ್​ಲೈನ್​ ರಮ್ಮಿಯಲ್ಲಿ ಕಳೆಯಲಾಗಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇನ್ನು ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಮುಂದಾಗಲಾಗಿದೆ. ಈ ನಡುವೆ ಆರೋಪಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎಂಬುದು ಬಯಲಾಗಿದೆ ಎಂದರು.

ಇದನ್ನೂ ಓದಿ: ರಾಜ್ಯಾದ್ಯಂತ ಆಸ್ತಿ ನೋಂದಣಿ ಪ್ರಮಾಣ ಜಿಗಿತ.. ತುಂಬುತ್ತಿದೆ ಸರ್ಕಾರದ ಖಜಾನೆ

For All Latest Updates

ABOUT THE AUTHOR

...view details