ನವದೆಹಲಿ: ಇ ಕಾಮರ್ಸ್ ಮಾರುಕಟ್ಟೆ ದೇಶದಲ್ಲಿ ಅಗಾಧವಾಗಿ ಬೆಳೆಯುತ್ತಿದ್ದು, ಡೆಲಿವರಿ ಪಾರ್ಟನರ್ ಉದ್ಯೋಗ ಕೂಡ ಏರಿಕೆ ಕಾಡುತ್ತಿದೆ. ಕೇವಲ ದೊಡ್ಡ ದೊಡ್ಡ ನಗರದಲ್ಲಿ ಹೆಚ್ಚಾಗಿ ಸೃಷ್ಟಿಯಾಗುತ್ತಿರುವ ಈ ಉದ್ಯೋಗವನ್ನು ಇದೀಗ ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ಬೇಡಿಕೆ ಪಡೆದಿದೆ. ಇದೇ ಹಿನ್ನೆಲೆಯಲ್ಲಿ ಹೈಪರ್ ಲೋಕಲ್ ಉದ್ಯೋಗ ಸೃಷ್ಟಿಗೆ ಸ್ವಿಗ್ಗಿ ಮುಂದಾಗಿದೆ.
ಸ್ವಿಗ್ಗಿ ಶೀಘ್ರವಾಗಿ ತಮ್ಮ ವಾಣಿಜ್ಯ ದಿನಸಿ ಸೇವೆಗಳ ರವಾನೆಗೆ 10 ಸಾವಿರ ಉದ್ಯೋಗ ಸೃಷ್ಟಿಗೆ ಮುಂದಾಗಿದೆ. ಇದಕ್ಕಾಗಿ ಸ್ವಿಗ್ಗೊ ವೃತ್ತಿಪರ ನೆಟ್ವರ್ಕಿಂಗ್ ಕಂಪನಿ ಅಪ್ನಾ ಮುಂದಾಗಿದೆ. ಇದಕ್ಕಾಗಿ ಎರಡು ಸಂಸ್ಥೆಗಳು ಜಂಟಿಯಾಗಿ ಶೀಘ್ರದಲ್ಲೇ ವಾಣಿಜ್ಯ ದಿನಸಿ ಸೇವೆ ನೀಡುವ ಇನ್ಸ್ಟಾಮಾರ್ಟ್ನೊಂದಿಗೆ ಪಾಲುದಾರಿಕೆ ನಡೆಸಲು ಮುಂದಾಗಿದೆ ಎಂದು ಪ್ರಕಟಿಸಿದೆ. ರೆಡ್ಸೀರ್ ಮಾರುಕಟ್ಟೆ ಸಂಶೋಧನೆ ಅನುಸಾರ, ಈ ವಾಣಿಜ್ಯ ಸಂಸ್ಥೆ 2025ರ ಹೊತ್ತಿಗೆ 5.5 ಡಾಲರ್ ಗುರಿ ಹೊಂದಿದೆ. ಈ ಹಿನ್ನೆಲೆಯಲ್ಲಿ ಶೀಘ್ರಗತಿಯ ವಿತರಣೆಗೆ ಹೆಚ್ಚಿನ ಡೆಲಿವರಿ ಪಾಲುದಾರರ ಅವಶ್ಯಕತೆ ಇದ್ದು, ಈ ಬೇಡಿಕೆ ಹೆಚ್ಚಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ 500 ನಗರಗಳಲ್ಲಿ ಸ್ವಿಗ್ಗಿ ತನ್ನ ಆಹಾರ ವಿತರಣೆ ಉಪಸ್ಥಿತಿಯನ್ನು ಹೊಂದಿದ್ದು, ಇನ್ಸ್ಟಾಮಾರ್ಟ್ 25 ನಗರದಲ್ಲಿ ತನ್ನ ಅಧಿಪತ್ಯ ಹೊಂದಿದೆ. ಇದೀಗ ಟೈರ್ 2 ಮತ್ತು ಟೈರ್ 3 ನಗರಗಳಲ್ಲಿ ನಾವು ಆನ್ಬೋರ್ಡ್ ಗ್ರಾಹಕರ ಮೇಲೆ ಗಮನಹರಿಸಿದ್ದೇವೆ. ಅಪ್ನಾ ಜೊತೆಗಿನ ಸಹಭಾಗಿತ್ವ ನಮ್ಮ ಡೆಲಿವರಿ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ಜೊತೆಗೆ ಸಣ್ಣ ನಗರದಲ್ಲಿ ಇನ್ಸ್ಟಾಮಾರ್ಟ್ ಬೆಳವಣಿಗೆ ಬೇಡಿಕೆಯನ್ನು ಮುಟ್ಟುವ ಗುರಿ ಹೊಂದಿದೆ ಎಂದು ಸ್ವಿಗ್ಗಿ ಕಂಪನಿ ಉಪಾಧ್ಯಕ್ಷ ಆಗಿರುವ ಕೇದರ್ ಗೋಖುಲೆ ತಿಳಿಸಿದ್ದಾರೆ.