ನವದೆಹಲಿ:ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ ಹೊಸ ಯೋಜನೆಗೆ ಮುಂದಾಗಿದ್ದು, ಇನ್ಮುಂದೆ ಸ್ಥಳೀಯ ಬೀದಿಬದಿಯ ತಿನಿಸುಗಳನ್ನೂ ಡೆಲಿವರಿ ಮಾಡುವ ಸೇವೆಗೆ ನಿರ್ಧರಿಸಿದೆ. ಇದಕ್ಕಾಗಿವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಈ ಮೂಲಕ 300 ಬೀದಿಬದಿ ವ್ಯಾಪಾರಿಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು, 300 ಬೀದಿಬದಿ ವ್ಯಾಪಾರಿಗಳ ಮೂಲಕ ವಿವಿಧ ತಿನಿಸು ಡೆಲಿವರಿ ಮಾಡಲು ತಯಾರಿ ನಡೆಸಿದೆ. ಇದಕ್ಕಾಗಿ ದೇಶದ 6 ನಗರಗಳಾದ ಭೋಪಾಲ್, ರಾಯ್ಪುರ್, ಪಾಟ್ನಾ, ವಡೋದರಾ, ನಾಗ್ಪುರ್ ಮತ್ತು ಲೂದಿಯಾನವನ್ನು ಆಯ್ಕೆ ಮಾಡಿಕೊಂಡಿದೆ.
ಈ ಪ್ರದೇಶಗಳಲ್ಲಿ ಬೀದಿಬದಿಯ ತಿನಿಸುಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಇದನ್ನು ಮನೆ ಮನೆಗೆ ತಲುಪಿಸುವ ಆಶಯ ವ್ಯಕ್ತಪಡಿಸಿದೆ. ಇದರಿಂದಾಗಿ ಬೀದಿಬದಿ ವ್ಯಾಪಾರಿಗಳ ಆರ್ಥಿಕ ಲಾಭವೂ ಹೆಚ್ಚಲಿದ್ದು, ಭದ್ರತೆ ದೊರೆತಂತಾಗುತ್ತದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ.