ಬೆಂಗಳೂರು: ಮನೆ ಬಾಗಿಲಿಗೆ ಆಹಾರ ಡೆಲಿವರಿ ಮಾಡುವ ಜೊಮ್ಯಾಟೋ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಬ್ಲಿಂಕಿಟ್‌ಅನ್ನು ವಿಲೀನ ಮಾಡಿಕೊಳ್ಳುವ ಪ್ರಕ್ರಿಯೆಗೆ ಸಹಿ ಮಾಡಿವೆ ಎಂದು ವರದಿಯಾಗಿದೆ.
ಕಳೆದ ಆಗಸ್ಟ್‌ನಲ್ಲಿ ಜೊಮ್ಯಾಟೋ ಸಾಫ್ಟ್‌ಬ್ಯಾಂಕ್ ಬೆಂಬಲಿತ ಬ್ಲಿಂಕಿಟ್‌ನಲ್ಲಿ 518 ರೂಪಾಯಿಗಳ ($67.77 ಮಿಲಿಯನ್) ಶೇ.9 ಕ್ಕಿಂತ ಹೆಚ್ಚು ಪಾಲನ್ನು ಪಡೆದುಕೊಂಡಿತ್ತು. ಸ್ಥಳೀಯವಾಗಿ ಪ್ರಾಬಲ್ಯ ಹೊಂದಿ ಬೆಳೆಯುತ್ತಿರುವ ವಾಲ್‌ಮಾರ್ಟ್‌ನ ಫ್ಲಿಪ್‌ಕಾರ್ಟ್ ಹಾಗೂ ಅಮೆಜಾನ್‌ಗೆ ಪೈಪೋಟಿ ನೀಡಲು ದಿನಸಿಯಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ವರೆಗೆ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯನ್ನು ವೇಗಗೊಳಿಸಲು ಬ್ಲಿಂಕಿಟ್‌ನ ಸಿಇಒ ಅಲ್ಬಿಂದರ್ ಧಿಂಡ್ಸಾ ನಿರ್ಧರಿಸಿದ್ದು, ಜೊಮ್ಯಾಟೋ ಜೊತೆ ವಿಲೀನಕ್ಕೆ ಮುಂದಾಗಿದ್ದಾರೆ.